

ಬೆಂಗಳೂರು: ಕನ್ನಡ ಚಿತ್ರರಂಗ ಆಶಾದಾಯಕವಾಗಿ 2025ರ ವರ್ಷವನ್ನು ಸ್ವಾಗತಿಸುತ್ತಿದ್ದು, ವರ್ಷದ ಮೊದಲ ಬೆಳೆಯಾಗಿ ಮೊದಲ ವಾರ ಮೂರು ಸಿನಿಮಾಗಳು ಇಂದು ಬಿಡುಗಡೆಯಾಗುತ್ತಿವೆ. ಈ ಮೂರು ಹೊಸಬರ ಚಿತ್ರಗಳು ಎಂಬುದು ವಿಶೇಷತೆ.
ಹೊಸಬರ ‘ಗನ್ಸ್ ಆ್ಯಂಡ್ ರೋಸಸ್’: ಶ್ರೀನಿವಾಸ್ ಕುಮಾರ್ ನಿರ್ದೇಶನದ, ಅರ್ಜುನ್ ಅಜಯ್‌ಕುಮಾರ್ ಹಾಗೂ ಯಶ್ವಿಕಾ ನಿಷ್ಕಲ ಮುಖ್ಯಭೂಮಿಕೆಯಲ್ಲಿರುವ ‘ಗನ್ಸ್ ಆ್ಯಂಡ್ ರೋಸಸ್’ ವರ್ಷದ ಮೊದಲ ಸಿನಿಮಾವಾಗಿ ಬಿಡುಗಡೆಯಾಗುತ್ತಿದೆ. ಭೂಗತ ಜಗತ್ತು ಹಾಗೂ ಡ್ರಗ್ಸ್ ಮಾಫಿಯಾ ಜಾಲವನ್ನು ತೆರೆ ಮೇಲೆ ತರಲಾಗುತ್ತಿದೆ. ‘ಹುಲಿ’ ಕಿಶೋರ್ ಹಾಗೂ ಅವಿನಾಶ್ ತಾರಾಗಣದಲ್ಲಿದ್ದಾರೆ.
ಸಹಜ ಪ್ರೀತಿಯ ‘ಸ್ವೇಚ್ಛಾ’: ‘ಜಲ್ಲಿಕಟ್ಟು’, ‘ಯತಾರ್ಥ’ ಖ್ಯಾತಿಯ ಅನ್ವೀಶ್, ಪವಿತ್ರಾ ನಾಯಕ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಸಿನಿಮಾ ‘ಸ್ವೇಚ್ಛಾ’. 90ರ ದಶಕ ಹಾಗೂ ಇಂದಿನ ಕಾಲಘಟ್ಟವನ್ನು ಸೇತುವೆಯಾಗಿಸಿಕೊಂಡು ಕಥೆ ಹೆಣೆದಿದ್ದಾರೆ ನಿರ್ದೇಶಕ ಸುರೇಶ್ ರಾಜು. ಪ್ರೀತಿ, ತಾಯಿಯ ಬಾಂಧವ್ಯ ಒಳಗೊಂಡು ಐದು ಕಥೆಗಳನ್ನು ಈ ಸಿನಿಮಾದ ಮೂಲಕ ಹೇಳಲಾಗುತ್ತಿದೆ.
ಬ್ರೇಕಪ್ ಆದ ಬಳಿಕ: ನಿರ್ದೇಶಕ ಬಿಜು ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿರುವ ಸಿನಿಮಾ ‘ಆ್ಟರ್ ಬ್ರೇಕಪ್’. ಈ ಚಿತ್ರದಲ್ಲಿ ಧನುಷ್ ನಾಯಕನಾಗಿದ್ದು, ನಿಸರ್ಗ ಹಾಗೂ ತನು ನಾಯಕಿಯರು. ಚಿತ್ರಕ್ಕೆ ಪ್ರವೀಣ್ ಸ್ಯಾಮ್ ಸಂಗೀತ, ವಿನೋದ್ ಲೋಕಣ್ಣನವರ್ ಛಾಯಾಗ್ರಹಣ ಇರಲಿದೆ.