ತಮಿಳು ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ನಾಯಕ ನಟನಾಗಿ ನಟಿಸುತ್ತಿರುವ ಕ್ರಿಕೆಟಿಗ ಹರ್ಭಜನ್ ಸಿಂಗ್

harbhajan singh
Published on

ಚೆನ್ನೈ: ಖ್ಯಾತ ಆಫ್​ ಸ್ಪಿನರ್​ ಹರ್ಭಜನ್ ಸಿಂಗ್ ಮೊದಲ ಬಾರಿಗೆ ತಮಿಳು ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ನಟಿಸುತ್ತಿದ್ದಾರೆ.

ಫ್ರೆಂಡ್ ಶಿಫ್ ಹೆಸರಿನ ಚಿತ್ರದಲ್ಲಿ ಅವರು ನಟಿಸುತ್ತಿದ್ದು, ಚಿತ್ರದ ಮೊದಲ ಪೋಸ್ಟರ್​ ಸೋಮವಾರ ಬಿಡುಗಡೆಯಾಗಿದೆ. ಪೋಸ್ಟರ್​ ಬಿಡುಗಡೆಯಾದ ವಿಷಯವನ್ನು ಚಿತ್ರ ವಿಮರ್ಶಕ ರಮೇಶ್​ ಬಾಲಾ ಖಚಿತಪಡಿಸಿದ್ದಾರೆ. ಅಲ್ಲದೆ ತಮ್ಮ ಟ್ವೀಟರ್​ನಲ್ಲಿ ಪೋಸ್ಟರ್​ ಹಂಚಿಕೆ ಮಾಡಿದ್ದಾರೆ.

ಇದಕ್ಕೂ ಮೊದಲು ಅವರು ಚಿತ್ರವೊಂದರಲ್ಲಿ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರನೊಬ್ಬ ಪೂರ್ಣ ಪ್ರಮಾಣದ ನಾಯಕರಾಗಿ ನಟಿಸುತ್ತಿರುವುದು ಇತಿಹಾಸದಲ್ಲೇ ಮೊದಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net