ಹನುಮಾನ್ ಒಟಿಟಿ ರಿಲೀಸ್ ಕನ್ಫರ್ಮ್​? ಎಲ್ಲಿ ಯಾವಾಗ ಗೊತ್ತಾ?

Hanuman-2
Published on

ತೆಲಂಗಾಣ: ನಿರ್ದೇಶಕ ಪ್ರಶಾಂತ್ ವರ್ಮಾ ಆ್ಯಕ್ಷನ್ ಕಟ್ ಹೇಳಿದ ‘ಹನುಮಾನ್’ ಸಿನಿಮಾ ಯಶಸ್ಸು ಕಂಡಿತು. ತೇಜ ಸಜ್ಜಾ ನಟನೆಯ ಈ ಸಿನಿಮಾ 250 ಕೋಟಿ ರೂಪಾಯಿ ಗಳಿಕೆ ಮಾಡಿ ಬೀಗಿದೆ. ಯುವ ನಟ ತೇಜ ಸಜ್ಜಾ ನಾಯಕ ನಟನಾಗಿ ನಟಿಸಿದ್ದಾರೆ. ಈ ವರ್ಷ ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಸಿನಿಮಾ ತೆರೆಕಂಡಿತು.

ಭಾರತ ಮಾತ್ರವಲ್ಲದೇ ಬೇರೆ ಬೇರೆ ದೇಶಗಳಲ್ಲೂ ‘ಹನುಮಾನ್​’ ಚಿತ್ರ ಬಿಡುಗಡೆ ಆಯಿತು. ಜನವರಿ 12ರಂದು ರಿಲೀಸ್​ ಆದ ಈ ಸಿನಿಮಾ 14 ದಿನಕ್ಕೆ ವಿಶ್ವ ಬಾಕ್ಸ್​ ಆಫೀಸ್​ನಲ್ಲಿ 250 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

ಇತ್ತೀಚೆಗೆ ಹನುಮಾನ್ ಚಿತ್ರದ ಒಟಿಟಿಪಿ ವಿವರಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದ ಬಿಡುಗಡೆಗೂ ಮುನ್ನವೇ ZEE5 ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಹನುಮಾನ್ ಚಿತ್ರವನ್ನು ZEE5 ಒಟ್ಟು 16 ಕೋಟಿಗೆ ಖರೀದಿಸಲಾಗಿದೆ ಎನ್ನಲಾಗಿದೆ. ಹನುಮಾನ್ ತೆಲುಗು ಆವೃತ್ತಿ 12 ಕೋಟಿ, ಹಿಂದಿ ಆವೃತ್ತಿ 5 ಕೋಟಿಗೆ ಸೇಲ್‌ ಆಗಿವೆ ಎನ್ನಲಾಗಿತ್ತು. ಆದರೆ ಈಗ ಒಟಿಟಿ ಸ್ಟ್ರೀಮಿಂಗ್ ದಿನಾಂಕದ ಬಗ್ಗೆಯೂ ಅಪ್‌ಡೇಟ್‌ ನೀಡಲಾಗಿದೆ.

ಮಾರ್ಚ್ ಮೊದಲ ವಾರದಲ್ಲಿ ZEE5 ಪ್ಲಾಟ್‌ ಫಾರ್ಮ್‌ ನಲ್ಲಿ ಹನುಮಾನ್ ಚಿತ್ರ ಬಿಡುಗಡೆಯಾಗಿದೆಯಂತೆ. ಹಿಂದಿನ ಒಪ್ಪಂದದ ಪ್ರಕಾರ, ಚಿತ್ರವು ಬಿಡುಗಡೆಯಾದ ಮೂರು ವಾರಗಳಲ್ಲಿ ಒಟಿಟಿಗೆ ಬರಬೇಕಿತ್ತು. ಆದರೆ ಚಿತ್ರದ ಕಲೆಕ್ಷನ್‌ ಹೆಚ್ಚಾಗುತ್ತಿದ್ದ ಕಾರಣ, 55 ದಿನಗಳ ನಂತರ ಈ ಸಿನಿಮಾವನ್ನು ಒಟಿಟಿಯಲ್ಲಿ ತರಲು ರೆಡಿಯಾಗಿದ್ದಾರೆ. ಹನುಮಾನ್‌ ಚಿತ್ರವು ಮಾರ್ಚ್ ಮೊದಲ ವಾರದಲ್ಲಿ ZEE ನಲ್ಲಿ ಸ್ಟ್ರೀಮಿಂಗ್‌ ಆಗಲು ಸಿದ್ಧವಾಗುತ್ತಿದೆ.

ಹನುಮಾನ್​ ಸಿನಿಮಾದ ಪ್ರೀ ರಿಲೀಸ್ ಬಿಸಿನೆಸ್ ವಿಚಾರಕ್ಕೆ ಬರುವುದಾದರೆ ನಿಜಾಮ್ : 7.15 ಕೋಟಿ, ಸೀಡೆಡ್ : 4 ಕೋಟಿ, ಆಂಧ್ರ : 9.50 ಕೋಟಿ, ಎಪಿ ತೆಲಂಗಾಣ ಒಟ್ಟು : 20.65 ಕೋಟಿ, ಕರ್ನಾಟಕ, ಉಳಿದ ಭಾರತ : 2 ಕೋಟಿ, ಸಾಗರೋತ್ತರ : 4 ಕೋಟಿ, ಒಟ್ಟು ವಿಶ್ವಾದ್ಯಂತ 26.65 ಕೋಟಿ ಇದೆ. ಈ ಸಿನಿಮಾ ಹಿಟ್ ಆಗಬೇಕಾದರೆ…ಬ್ರೇಕ್ ಈವೆನ್ ಟಾರ್ಗೆಟ್ 27.50 ಕೋಟಿ ಇದ್ದು, ಹನುಮಂತ ಅಬ್ಬರದಿಂದ ಈ ಗಡಿ ದಾಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net