ವೆಬ್ ಸರಣಿಯಲ್ಲಿ ಹನ್ಸಿಕಾ; ಶೀಘ್ರದಲ್ಲೇ ಅಮೆಜಾನ್​ನಲ್ಲಿ?

page 12 3
Published on

ಬೆಂಗಳೂರು: ಬೆಳ್ಳಿತೆರೆ ಮೇಲೆ ಗ್ಲಾಮರಸ್ ಲುಕ್​ನಲ್ಲಿಯೇ ಗಮನಸೆಳೆಯುತ್ತಿರುವ ನಟಿ ಹನ್ಸಿಕಾ ಮೋಟ್ವಾನಿ, ಇದೀಗ ವೆಬ್​ಸಿರೀಸ್​ನತ್ತ ದೃಷ್ಟಿ ನೆಟ್ಟಿದ್ದಾರೆ. ಇದು ಅವರ ಮೊದಲ ಡಿಜಿಟಲ್ ಪ್ರಯೋಗವಾಗಿದ್ದು, ಬಹುತೇಕ ಚಿತ್ರೀಕರಣವನ್ನು ಮುಗಿಸಿದ್ದಾರೆ. ಹಾಗಾದರೆ, ಯಾವುದಾ ಸರಣಿ?

ಸದ್ಯ ಟಾಲಿವುಡ್​ನಿಂದ ಬಂದ ಮಾಹಿತಿ ಪ್ರಕಾರ, ಅನುಷ್ಕಾ ಶೆಟ್ಟಿ ನಾಯಕತ್ವದ ‘ಭಾಗಮತಿ’ ಸಿನಿಮಾ ನಿರ್ದೇಶನ ಮಾಡಿದ್ದ ಅಶೋಕ್, ಈ ವೆಬ್ ಸಿರೀಸ್ ನಿರ್ದೇಶನ ಮಾಡಿದ್ದಾರೆ. ಇನ್ನೇನು ಶೀರ್ಷಿಕೆ ಬಹಿರಂಗಪಡಿಸಿ, ಅದರ ಪ್ರಸಾರದ ದಿನಾಂಕ ಘೋಷಣೆ ಮಾಡಿಕೊಳ್ಳಬೇಕಿದೆ ಚಿತ್ರತಂಡ. ನೈಜ ಘಟನೆ ಆಧರಿಸಿ ಚಿತ್ರಿತವಾಗಿರುವ ಈ ಸರಣಿ, ನಾಯಕಿ ಪ್ರಧಾನವಾಗಿದ್ದು, ಹನ್ಸಿಕಾ ಮೋಟ್ವಾನಿ ಮುಖ್ಯಭೂಮಿಕೆಯಲ್ಲಿದ್ದಾರೆ.

ನಿತ್ಯ ಜೀವನದಲ್ಲಿ ಸಾಮಾನ್ಯ ಮಹಿಳೆ ಎದುರಿಸುತ್ತಿರುವ ಸಮಸ್ಯೆಗಳ ಮೇಲೆ ಈ ವೆಬ್​ಸರಣಿ ಬೆಳಕು ಚೆಲ್ಲಲಿದೆ. ಬಹುತೇಕ ಚಿತ್ರೀಕರಣ ನಗರ ಪ್ರದೇಶದಲ್ಲಿ ನಡೆದಿದ್ದು, ರಾತ್ರಿ ಹೊತ್ತಲ್ಲೇ ಹೆಚ್ಚಿನ ದೃಶ್ಯಗಳನ್ನು ಸೆರೆಹಿಡಿಯಲಾಗಿದೆಯಂತೆ. ಇನ್ನುಳಿದಂತೆ ಬಿಗ್ ಬಜೆಟ್​ನಲ್ಲಿ ತಯಾರಾಗುತ್ತಿರುವ ನಾಯಕಿ ಪ್ರಧಾನ ‘ಮಹಾ’ ಸಿನಿಮಾದ ಕೆಲಸಗಳೂ ಶುರುವಾಗಿದ್ದು, ಅದಕ್ಕೂ ತಯಾರಿ ನಡೆಸಿದ್ದಾರೆ ಹನ್ಸಿಕಾ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net