

ಈಗ ನವೀನ್ ಅಭಿನಯದ ಚಿತ್ರವೊಂದು ಸದ್ದಿಲ್ಲದೆ ಪ್ರಾರಂಭವಾಗಿದ್ದು, ಗುರುವಾರ ನಟ ಶ್ರೀಮುರಳಿ ಈ ಚಿತ್ರದ ಫಸ್ಟ್ಲುಕ್ ಪೋಸ್ಟರ್ ಮತ್ತು ಶೀರ್ಷಿಕೆಯನ್ನು ಅನಾವರಣಗೊಳಿಸಿದ್ದಾರೆ. ಈ ಚಿತ್ರದ ಹೆಸರೇನು ಗೊತ್ತಾ? 'ನೋಡಿದವರು ಏನಂತಾರೆ'
'ನೋಡಿದವರು ಏನಂತಾರೆ' ಚಿತ್ರದಲ್ಲಿ ನವೀನ್ಗೆ ನಾಯಕಿಯಾಗಿ ಅಪೂರ್ವ ಭಾರದ್ವಾಜ್ ಇದ್ದಾರೆ. ಈ ಚಿತ್ರವನ್ನು ನಾಗೇಶ್ ಗೋಪಾಲ್ ಮತ್ತು ಮೋನಿಷಾ ಗೌಡ ನಿರ್ಮಿಸುತ್ತಿದ್ದು, ಕುಲದೀಪ್ ಕಾರ್ಯಪ್ಪ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿಕ್ಕಮಗಳೂರು, ಮತ್ತು ಬೆಂಗಳೂರಿನಲ್ಲಿ ಎರಡು ಹಂತರ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಇನ್ನುಳಿದ ಭಾಗಗಳನ್ನು ಗೋಕರ್ಣ, ಕೊಡಗು, ಹಂಪಿ, ಮುಂಬೈ ಮುಂತಾದೆಡೆ ಚಿತ್ರೀಕರಿಸಲಾಗುತ್ತಿದೆ.
ತಮ್ಮ ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ಕುಲದೀಪ್ ಕಾರ್ಯಪ್ಪ, 'ಹುಟ್ಟಿನಿಂದ ಸಾಯೋತನಕ ಪ್ರತಿಯೊಂದಕ್ಕೂ ನೋಡಿದವರು ಏನಂತಾರೆ ಅಂದುಕೊಳ್ಳುತ್ತಾ ಸಮಾಜಕ್ಕಾಗಿ ಬದುಕುತ್ತಿರುತ್ತೇವೆ. ಕಡೆಗೊಂದು ದಿನ ನಿಜಕ್ಕೂ ಯಾರಾದರೂ ನಮ್ಮನ್ನು ನೋಡ್ತಿದ್ದಾರಾ ಅನ್ನೋ ಡೌಟು ಬರುತ್ತೆ… ನಮಗಾಗಿ ನಾವು ಬದುಕೋದಕ್ಕೆ ಸಾಧ್ಯಾನಾ? ಅಥವಾ ನೋಡಿದವರು ಏನಂತಾರೆ ಅನ್ನೋ ಕಾರಣಕ್ಕೆ ಕೃತಕವಾಗಿ ಬದುಕುತ್ತಿರಬೇಕಾ? ಈ ಎಲ್ಲ ಅಂಶಗಳನ್ನೇ ಸರಕಾಗಿಸಿಕೊಂಡು ಸಿನಿಮಾ ಮಾಡುತ್ತಿದ್ದೇವೆ. 'ನೋಡಿದವರು ಏನಂತಾರೆ' ಎನ್ನುವ ಹೆಸರನ್ನೇ ಇಟ್ಟಿದ್ದೀವಿ. ಸಿದ್ದಾರ್ಥ್ ಎನ್ನುವ ಹುಡುಗನ ಬದುಕಿನ ಪಯಣವನ್ನು ಅನಾವರಣಗೊಳಿಸುವ ಕಥೆ ನಮ್ಮ ಚಿತ್ರದಲ್ಲಿದೆ' ಎಂದು ಹೇಳುತ್ತಾರೆ.
ಇದನ್ನೂ ಓದಿ: ‘ಮೊಘಲ್’ ಆಗುವುದಕ್ಕೆ ಹೊರಟಿದ್ದಾರಂತೆ ಆಮೀರ್ ಖಾನ್
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎಲ್ಲವನ್ನೂ ಜಯಂತ್ ಕಾಯ್ಕಿಣಿ ಬರೆಯುತ್ತಿದ್ದಾರೆ. ಕಾಡಿನ ನಡುವೆ ಹಳ್ಳಿ ಮನೆಯ ಸೆಟ್ ನಿರ್ಮಿಸಿ ಚಿತ್ರೀಕರಣ ನಡೆಸಲಾಗಿದ್ದು, ಇನ್ನು ಅರವತ್ತು ದಿನಗಳ ಶೂಟಿಂಗ್ ಬಾಕಿ ಇದೆ.