ಜೂನ್​ನಲ್ಲಿ ಹಾರರ್, ಥ್ರಿಲ್ಲರ್ ಮತ್ತು ಸಸ್ಪೆನ್ಸ್ 'ಗ್ರಾಮ'

Grama
Published on

ಬೆಂಗಳೂರು: ಹೊಸಬರ ಹಾರರ್, ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಶೈಲಿಯಲ್ಲಿ ಸಿದ್ಧವಾಗಿದೆ ‘ಗ್ರಾಮ’ ಸಿನಿಮಾ. ಬಹುತೇಕ ಹೊಸಬರೇ ಸೇರಿಕೊಂಡು ಮಾಡುತ್ತಿರುವ ಈ ಚಿತ್ರಕ್ಕೆ ಹೇಮಂತ್ ಕುಮಾರ್ ಬಂಡವಾಳ ಹೂಡುತ್ತಿದ್ದಾರೆ. ಹರಿಕಿರಣ್ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದಲ್ಲಿ ನಟಿಸುತ್ತಿರುವ ಬಹುತೇಕ ಕಲಾವಿದರೂ ಹೊಸಬರೇ. ‘ಆಪರೇಷನ್ ನಕ್ಷತ್ರ’ ಸೇರಿ ಕೆಲ ಚಿತ್ರಗಳಲ್ಲಿ ನಟಿಸಿದ ಅನುಭವ ಇರುವ ಲಿಖಿತ್ ಸೂರ್ಯ, ‘ಗ್ರಾಮ’ದ ನಾಯಕನಾಗಿ ನಟಿಸುತ್ತಿದ್ದಾರೆ. ಟಾಲಿವುಡ್​ನಲ್ಲಿ ಗುರುತಿಸಿಕೊಂಡ ಲಹರಿ ಶಾಯಿರಿ ನಾಯಕಿಯಾಗಿ ಈ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿಕೊಟ್ಟಿದ್ದಾರೆ. ಸತ್ಯಪ್ರಕಾಶ್ ಖಳನಟನಾದರೆ, ಶಿಪ್ರ, ಪ್ರಕೃತಿ ಗೌಡ, ಶ್ರೇಯಸ್ ಕಶ್ಯಪ್ ಪಾತ್ರವರ್ಗದಲ್ಲಿದ್ದಾರೆ. ಇನ್ನು ತಾಂತ್ರಿಕ ವರ್ಗದಲ್ಲಿ ಜೆಜಿ ಕೃಷ್ಣ ಛಾಯಾಗ್ರಹಣ, ರವಿ ಕಲ್ಯಾಣ್ ಸಂಗೀತ ನೀಡಿದ್ದಾರೆ. ಸಚಿನ್ ಅವರ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ರಾಕೆಟ್ ವಿಕ್ರಂ, ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನ ‘ಗ್ರಾಮ’ ಚಿತ್ರಕ್ಕಿದೆ. ಶೂಟಿಂಗ್ ಮುಗಿಸಿ, ಚಿತ್ರೀಕರಣೋತ್ತರ ಕೆಲಸಗಳು ನಡೆಯುತ್ತಿದ್ದು, ಮೇ ಅಥವಾ ಜೂನ್​ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆಯಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net