ಸಮರ್ಜಿತ್ ಲಂಕೇಶ್ ಅಭಿನಯದ ‘ಗೌರಿ’ಗೆ ಒಟಿಟಿಯಲ್ಲಿ ಗುಡ್ ರೆಸ್ಪಾನ್ಸ್

gowri 2
Published on

ಬೆಂಗಳೂರು: ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಗೌರಿ’ ಚಿತ್ರವು ಕಳೆದ ವರ್ಷ ತೆರೆಕಂಡಿತ್ತು. ಈ ಚಿತ್ರದ ಮೂಲಕ ಇಂದ್ರಜಿತ್ ಪುತ್ರ ಸಮರ್ಜಿತ್ ಲಂಕೇಶ್ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದರು. ಇಲ್ಲಿ ಸಮರ್ಜಿತ್‌ಗೆ ‘ಪುಟ್ಟಗೌರಿ’ ಖ್ಯಾತಿಯ ಸಾನ್ಯಾ ಅಯ್ಯರ್ ಜೋಡಿಯಾಗಿದ್ದರು. ಕಳೆದ ವರ್ಷ ಆ. 14ರಂದು ತೆರೆಕಂಡಿದ್ದ ‘ಗೌರಿ’ಗೆ ಪ್ರೇಕ್ಷಕರು ಹಾಗೂ ಸಿನಿ ವಿಮರ್ಶೆಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದಾದ ಕೆಲ ತಿಂಗಳ ಬಳಿಕ ‘ಗೌರಿ’ ಅಮೆಜಾನ್ ಪ್ರೈಮ್ ಮೂಲಕ ಒಟಿಟಿಗೆ ಲಗ್ಗೆ ಇಟ್ಟಿತ್ತು. ಈ ವೇದಿಕೆಯಲ್ಲೂ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿ, ಸಮರ್ಜಿತ್ ನಟನೆಗೂ ಪ್ರಶಂಸೆ ಕೇಳಿಬಂದಿವೆ. ಒಟಿಟಿಯಲ್ಲಿ ಈ ಚಿತ್ರವು ಬಿಡುಗಡೆಯಾದಾಗಿನಿಂದ ಈವರೆಗೂ ಎರಡೂವರೆ ಲಕ್ಷ ಗಂಟೆಗಳ ಕಾಲ ವೀಕ್ಷಣೆಯಾಗಿದೆ. ಈ ಮೂಲಕ ಕನ್ನಡ ಸಿನಿಮಾಗಳು ಕೂಡ ಆನ್‌ಲೈನ್ ವೇದಿಕೆಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತವೆ ಎಂಬುದಕ್ಕೆ ಉದಾಹರಣೆಯಾಗಿದೆ. ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ, ನಿರ್ಮಾಪಕರಾದ ರಮೇಶ್ ರೆಡ್ಡಿ, ಸಂಜಯ್ ಗೌಡ, ಹಿರಿಯ ವಕೀಲ ಶ್ಯಾಮ್ ಇದ್ದರು. ಅಕುಲ್ ಬಾಲಾಜಿ, ಸಿಹಿ-ಕಹಿ ಚಂದ್ರು, ಮುಖ್ಯಮಂತ್ರಿ ಚಂದ್ರು, ಮಾನಸಿ ಸುಧೀರ್, ಸಂಪತ್ ಮೈತ್ರೇಯ, ಚಂದುಗೌಡ ಅಭಿನಯಿಸಿದ್ದರು. ‘ಗೌರಿ’ ಮೂಲಕ ಉತ್ತಮ ಪ್ರತಿಕ್ರಿಯೆ ಪಡೆದ ಸಮರ್ಜಿತ್ ಲಂಕೇಶ್ ಇದೀಗ ಪರಭಾಷೆಗಳಿಂದಲೂ ಅವಕಾಶಗಳನ್ನು ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net