ಈಗ ಟ್ರೇಲರ್​, 24ಕ್ಕೆ ಸಿನಿಮಾ; 'ಗೌಳಿ' ಎಂಟ್ರಿಗೆ ವೇದಿಕೆ ಸಜ್ಜು

Gowli
Published on

ಬೆಂಗಳೂರು: ಶ್ರೀನಗರ ಕಿಟ್ಟಿ ಅಭಿನಯದ 'ಗೌಳಿ' ಚಿತ್ರದ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಅದಕ್ಕೂ ಮುನ್ನ ಇತ್ತೀಚೆಗೆ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ. ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ, ನಟ ಶರಣ್​ ಸೇರಿ ಈ ಟ್ರೇಲರ್​ ಬಿಡುಗಡೆ ಮಾಡಿದ್ದಾರೆ.

'ಗೌಳಿ' ಚಿತ್ರದ ಟ್ರೇಲರ್​ ಮೆಚ್ಚಿ ಮಾತನಾಡಿದ ಶರಣ್​, 'ಅದ್ಬುತವಾದ ಮೇಕಿಂಗನ್ನು ಈ ಟ್ರೇಲರ್ ನಲ್ಲಿ ಕಂಡೆ. ಈ ತರದ ಸಿನಿಮಾಗಳು ಕನ್ನಡದಲ್ಲಿ ಹೆಚ್ಚಾಗಿ ಬರುತ್ತಿದ್ದು, ರಾಷ್ಟ್ರಮಟ್ಟದಲ್ಲಿ ಸೌಂಡ್ ಮಾಡುತ್ತಿವೆ. ಟ್ರೇಲರ್ ನೋಡುವಾಗ ಪ್ರತಿ ಫ್ರೇಮ್​ನಲ್ಲೂ ನಿರ್ದೇಶಕರ ಕನಸು ಕಂಡೆ. ಅವರ ಕನಸಿಗೆ ತಂಡದ ಶ್ರಮ ಕೊಡ ಅಷ್ಟೇ ಇದೆ. ಕಿಟ್ಟಿ ಒಳ್ಳೆಯ ಕಲಾವಿದ ಅಷ್ಟೇ ಅಲ್ಲ, ಒಳ್ಳೆಯ ವ್ಯಕ್ತಿ ಕೂಡಾ. ಈ ತರಹದ ಸಿನಿಮಾಗಳು ಗೆದ್ದಾಗ ಇನ್ನಷ್ಟು ಚಿತ್ರಗಳು ಬರುತ್ತವೆ' ಎಂದು ಮತ್ತೊಮ್ಮೆ ಟ್ರೇಲರ್ ಪ್ಲೇ ಮಾಡಿಸಿ ಖುಷಿ ಪಟ್ಟರು.

ನಾಯಕ ನಟ ಶ್ರೀನಗರ ಕಿಟ್ಟಿ ಮಾತನಾಡಿ 'ನಾನು ಎರಡು ಸಿನಿಮಾ ನಿರ್ಮಾಣ ಮಾಡಿದ್ದರೂ ಸಿನಿಮಾಗಳ ರಿಲೀಸ್ ಶ್ರಮ ಏನೆಂದು ಗೊತ್ತಿರಲಿಲ್ಲ ಹಾಗೂ ವ್ಯವಹಾರದ ಬಗ್ಗೆ ತಿಳಿದಿರಲಿಲ್ಲ ಈ ಚಿತ್ರದಿಂದ ಎಲ್ಲಾ ಗೊತ್ತಾಯಿತು. ನಿರ್ದೇಶಕ ಸೂರ ಬಂದು ಈ ಕಥೆ ಹೇಳಿದಾಗ ಮೈ ಜುಮ್ ಎನಿಸಿತ್ತು' ಎಂದು ಹೇಳಿದರು.

ಈ ಚಿತ್ರದಿಂದ ನಾಯಕಿ ಪಾವನ ಗೌಡ ಕನಸು ಈಡೇರಿದೆಯಂತೆ. ಇಷ್ಟಕ್ಕೂ ಆ ಕನಸೇನು ಎಂದರೆ, ಮಾಸ್​ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಅವರಿಗಿತ್ತಂತೆ. 'ಮಾಸ್ ಸಿನಿಮಾಗಳನ್ನು ಗಂಡಸರಷ್ಟೇ ಎಂಜಾಯ್ ಮಾಡಲ್ಲ. ನಾವು ಹುಡುಗಿಯರು ಎಂಜಾಯ್ ಮಾಡುತ್ತೇವೆ. ಚಿತ್ರದಲ್ಲಿರುವ ಪ್ರತಿ ಪಾತ್ರ ಹಾಗೂ eಎಲ್ಲ ವಿಭಾಗಗಳು ಗೆದ್ದರೆ ಸಿನಿಮಾ ಗೆಲ್ಲುತ್ತದೆ' ಎಂದರು.

'ಗೌಳಿ' ಚಿತ್ರವನ್ನು ಸೂರ ನಿರ್ದೇಶನ ಮಾಡಿದರೆ, ರಘು ಸಿಂಗಂ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಕಿಟ್ಟಿ ಮತ್ತು ಪಾವನಾ ಜತೆಗೆ ರಂಗಾಯಣ ರಘು, ಶರತ್ ಲೋಹಿತಾಶ್ವ, ಯಶ್​ ಶೆಟ್ಟಿ, ಕಾಕ್ರೋಚ್​ ಸುಧಿ ಮುಂತಾದವರು ಅಅಭಿನಯಿಸಿರುವ ಈ ಚಿತ್ರಕ್ಕೆ ಸಂದೀಪ್​ ಛಾಯಾಗ್ರಹಣ ಮತ್ತು ಶಶಾಂಕ್​ ಶೇಷಗಿರಿ ಸಂಗೀತವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net