ಬೆಂಗಳೂರು: ಇದುವರೆಗೆ, ಡಿಸೆಂಬರ್ 6 ರಿಂದ 'ಗಂಧದ ಗುಡಿ' ಚಿತ್ರದ ಮೊದಲ ಟೈಟಲ್ ಟೀಸರ್ ಬಗ್ಗೆ ಮಾತ್ರ ಎಲ್ಲೆಡೆ ಚರ್ಚಿಸಲಾಗುತ್ತಿದೆ. 'ಗಂಧದ ಗುಡಿ' ಚಿತ್ರ ನಟ ಪುನೀತ್ ರಾಜ್ಕುಮಾರ್ ಅವರ ಜೀವನದ ಸಂಪೂರ್ಣ ವೈಭವವನ್ನು ಒಳಗೊಂಡಿರುತ್ತದೆ ಮತ್ತು ಸಿನಿಮಾದ ನಿರ್ದೇಶಕ ಅಮೋಘವರ್ಷ ಜೆ.ಎಸ್. ಜೊತೆ ಅಪ್ಪು ಕರ್ನಾಟಕ ರಾಜ್ಯದ ರಹಸ್ಯಗಳು ಮತ್ತು ಸೌಂದರ್ಯವನ್ನು ಈ ಸಿನಿಮಾದಲ್ಲಿ ತಮ್ಮ ಸಾಹಸದ ಮೂಲಕ ತೋರಿಸಲಿದ್ದಾರೆ. ನಮ್ಮ ರಾಜ್ಯದ ಸಮುದ್ರ ಜೀವಿಗಳು ಮತ್ತು ಇತರ ನೈಸರ್ಗಿಕ ಆವಾಸಸ್ಥಾನಗಳ ಮೇಲೆ ವ್ಯಾಪಕವಾದ ಗಮನವನ್ನು ಹೊಂದಿರುವ ಪುನೀತ್ ಮತ್ತು ಅವರ ಪ್ರಯಾಣದ ಪ್ರತ್ಯಕ್ಷ ವಿವರವನ್ನು ಪ್ರಸ್ತುತಪಡಿಸುವ ಮೂಲಕ, 'ಗಂಧದ ಗುಡಿ' ಪ್ರೀತಿಯ ಪವರ್ಸ್ಟಾರ್ ಅವರ ಎಲ್ಲಾ ಅಭಿಮಾನಿಗಳಿಗೆ ಸಂತಸ ನೀಡುತ್ತಾ ಭಾವುಕರನ್ನಾಗಿಸುತ್ತೆ ಎನ್ನುವುದರಲ್ಲಿ ಎರಡನೇ ಮಾತೆ ಇಲ್ಲ. ಅಂತಹ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆಯಾದ 12 ಗಂಟೆ ಒಳಗೆ 2 ಮಿಲಿಯನ್ಗೂ ಹೆಚ್ಚು ವೀಕ್ಷಣೆಗಳನ್ನು ಗಿಟ್ಟಿಸಿಕೊಂಡಿದೆ.