ಕುಂಭಕರ್ಣ ಜಂಟಲ್​ಮನ್​ನ ಎದ್ದೇಳಿಸಿದ ಅಂಥೋನಿ ದಾಸನ್

Prajwal 28 Jan 20
Published on

ಬೆಂಗಳೂರು: ಕುಂಭಕರ್ಣ ‘ಜಂಟಲ್​ಮನ್’ನ ಎದ್ದೇಳಿಸಲು ಈಗ ಗಾಯಕ ಅಂಥೋನಿ ದಾಸನ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಸೇರಿ ಒಂದಿಡೀ ತಂಡ ಮುಂದಾಗಿದ್ದು, ಅವರ ಪ್ರಯತ್ನ ಬುಧವಾರ ಅನಾವರಣಗೊಂಡಿದೆ.

ಪ್ರಜ್ವಲ್ ದೇವರಾಜ್ ದಿನಕ್ಕೆ 18 ಗಂಟೆ ನಿದ್ರಿಸುವ ಕುಂಭಕರ್ಣನಂಥ ಪಾತ್ರದಲ್ಲಿ ಅಭಿನಯಿಸಿರುವ ‘ಜಂಟಲ್​ಮನ್’ ಸಿನಿಮಾದ ‘ಎದ್ದೇಳೋ ಭಾರತೀಯ..’ ಎಂಬ ಹಾಡನ್ನು ಯೋಗರಾಜ್ ಭಟ್ ಬರೆದಿದ್ದು, ಅದನ್ನು ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಲ್ಲಿ ಅಂಥೋನಿ ದಾಸನ್ ಹಾಡಿದ್ದಾರೆ. ಈ ಲಿರಿಕಲ್ ಸಾಂಗ್ ಜ. 29ರಂದು ಬಿಡುಗಡೆ ಆಗಿದೆ. ಕೆ.ಪಿ. ಶ್ರೀಕಾಂತ್ ನಿರ್ಮಾಣ, ದುನಿಯಾ ಸೂರಿ ನಿರ್ದೇಶನ, ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಚಿತ್ರದ ‘ಟಗರು ಬಂತು ಟಗರು’ ಗೀತೆ ಖ್ಯಾತಿಯ ಅಂಥೋನಿ, ಬಳಿಕ ದುನಿಯಾ ವಿಜಯ್ ನಿರ್ದೇಶನದ ‘ಸಲಗ’ ಚಿತ್ರದ ‘ಸೂರಿ ಅಣ್ಣ’ ಗೀತೆಯನ್ನು ಹಾಡಿದ್ದು, ಅದೂ ಭರ್ಜರಿ ಹಿಟ್ ಆಗಿದೆ. ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿರುವ ಆ ಹಾಡು 10 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಕಂಡಿದೆ. ಇದೀಗ ಅವರು ಹಾಡಿರುವ ಜಂಟಲ್​ವುನ್ ಚಿತ್ರದ ಗೀತೆಗೂ ಒಳ್ಳೆಯ ಪ್ರತಿಕ್ರಿಯೆ ಸಿಗಲಾರಂಭಿಸಿದೆ.

‘ಜಿ ಸಿನಿಮಾಸ್’ ಬ್ಯಾನರ್​ನಲ್ಲಿ ಗುರು ದೇಶಪಾಂಡೆ ನಿರ್ವಿುಸಿರುವ ‘ಜಂಟಲ್​ಮನ್’ ಚಿತ್ರಕ್ಕೆ ನಿರ್ದೇಶಕ ಜಡೇಶ್ ಕುಮಾರ್ ಹಂಪಿ ಆಕ್ಷನ್-ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್​ಗೆ ಜೋಡಿಯಾಗಿ ನಟಿ ನಿಶ್ವಿಕಾ ನಾಯ್ಡು ಅಭಿನಯಿಸಿದ್ದಾರೆ. ಫೆ. 7ಕ್ಕೆ ಸಿನಿಮಾ ತೆರೆ ಕಾಣಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net