

ಮುಂಬೈ: ಬಾಲಿವುಡ್ನ ಪ್ರಸಿದ್ಧ ಸೆಲೆಬ್ರಿಟಿ ದಂಪತಿಗಳ ಪಟ್ಟಿಗೆ ಸೇರುವವರು ಜೆನೆಲಿಯಾ ಡಿಸೋಜಾ ಮತ್ತು ರಿತೀಶ್ ದೇಶ್ಮುಖ್. ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟಿವ್ ಇರುವ ಈ ದಂಪತಿಗೆ ದೊಡ್ಡ ಅಭಿಮಾನಿ ಬಳಗವಿದೆ. ಈ ದಂಪತಿಯ ವಿಡಿಯೋ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿತ್ತು. ಅದರ ಮುಂದುವರಿದ ಭಾಗವನ್ನು ಸ್ವತಃ ಜೆನೆಲಿಯಾ ಇದೀಗ ಹಂಚಿಕೊಂಡಿದ್ದಾರೆ.
ಗಂಡ ಹೆಂಡತಿ ಹೊರಗೆ ಹೋದಾಗ ಯಾರಾದರೂ ಯುವತಿ ಗಂಡನೊಂದಿಗೆ ಸಲಿಗೆಯಿಂದ ವರ್ತಿಸಿದರೆ ಹೆಂಡತಿ ಯಾವ ರೀತಿ ಫೀಲ್ ಮಾಡುತ್ತಾಳೆ ಎನ್ನುವ ವಿಡಿಯೋ ಒಂದು ಇತ್ತೀಚೆಗೆ ವೈರಲ್ ಆಗಿತ್ತು. ಯಾವುದೋ ಕಾರ್ಯಕ್ರಮದಲ್ಲಿ ರಿತೀಶ್ ಬಳಿ ಬಂದ ಪ್ರೀತಿ ಜಿಂತಾ ಸಲುಗೆಯಿಂದ ಮಾತನಾಡುತ್ತಾರೆ. ರಿತೀಶ್ ಕೂಡ ಅತ್ಯಂತ ಸಲುಗೆಯಿಂದ ಆಕೆಯೊಂದಿಗೆ ಮಾತನಾಡುತ್ತಾರೆ. ಅಲ್ಲೇ ಇದ್ದ ಜೆನೆಲಿಯಾ ಅದನ್ನು ನೋಡಿ, ನಗುತ್ತಾಳಾದರೂ ಆಕೆಯ ಮನಸ್ಸಲ್ಲಿ ಬೇರೆಯದ್ದೇ ಭಾವನೆ ಇದ್ದಂತೆ ಕಾಣುತ್ತದೆ. ಗಂಡನಿಗೆ ಮನೆಗೆ ಬಾ ನೋಡಿಕೊಳ್ಳುತ್ತೇನೆ ಎಂದು ಮನಸ್ಸಲ್ಲೇ ಬೈದಂತೆ ಭಾಸವಾಗುತ್ತದೆ. ಈ ವಿಡಿಯೋ ಸಕತ್ ವೈರಲ್ ಆಗಿರುವುದನ್ನು ಗಮನಿಸಿರುವ ಸೆಲೆಬ್ರಿಟಿ ಜೋಡಿ ಅದರ ಮುಂದುವರಿದ ಭಾಗವನ್ನು ಹರಿಬಿಟ್ಟಿದೆ.
ಸ್ಕೇಟಿಂಗ್ ಮಾಡಲು ಹೋಗಿ ಕೈ ಮುರಿದುಕೊಂಡಿರುವ ಜೆನೆಲಿಯಾ ಮನೆಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದು, ರಿತೀಶ್ ಹೆಂಡತಿಗೆ ಹೆದರುವ ಬಗೆಯನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇದೀಗ ಈ ವಿಡಿಯೋ ಕೂಡ ವೈರಲ್ ಲಿಸ್ಟ್ಗೆ ಸೇರ್ಪಡೆಯಾಗಿದೆ. (ಏಜೆನ್ಸೀಸ್)