ಮತ್ತೆ ಕನ್ನಡಕ್ಕೆ ಜೆನಿಲಿಯಾ; ಹದಿನಾಲ್ಕು ವರ್ಷಗಳ ನಂತರ ಆಗಮನ

Genilia
Published on

ಬೆಂಗಳೂರು: 2008ರಲ್ಲಿ ಬಿಡುಗಡೆಯಾದ ಶಿವರಾಜಕುಮಾರ್ ಅಭಿನಯದ ‘ಸತ್ಯ ಇನ್ ಲವ್’ ಚಿತ್ರದಲ್ಲಿ ನಟಿಸಿದ್ದರು ಜೆನಿಲಿಯಾ ಡಿ’ಸೋಜಾ. ಆ ಕಾಲಕ್ಕೆ ಅವರು ಜನಪ್ರಿಯ ನಟಿಯಾಗಿದ್ದರು. ತೆಲುಗು ಮತ್ತು ಹಿಂದಿಯಲ್ಲಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದರು. ಅಲ್ಲಿ ಡಿಮಾಂಡ್ ಹೆಚ್ಚಿದ್ದ ಕಾರಣ ಕನ್ನಡದಲ್ಲಿ ಮತ್ತೆ ನಟಿಸಲಿಲ್ಲ. ಈಗ 14 ವರ್ಷಗಳ ನಂತರ ಕನ್ನಡಕ್ಕೆ ವಾಪಸಾಗಿದ್ದಾರೆ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮಗ ಕಿರೀಟಿ ಅಭಿನಯದ ಹೊಸ ಚಿತ್ರದಲ್ಲಿ ಅವರು ನಟಿಸುತ್ತಿದ್ದು, ಶುಕ್ರವಾರ ನಡೆದ ಮುಹೂರ್ತ ಸಮಾರಂಭದಲ್ಲೂ ಹಾಜರಿದ್ದರು.

ಇದು ತಮ್ಮ ಪಾಲಿಗೆ ವಿಶೇಷ ಚಿತ್ರ ಎಂದ ಜೆನಿಲಿಯಾ, ‘ನಾನು ಮೂಲತಃ ಕರ್ನಾಟಕದವಳು. ನಮ್ಮ ಹಿರಿಯರು ಇಲ್ಲಿಯವರು. ಬಹಳ ವರ್ಷಗಳ ನಂತರ ಇಲ್ಲಿಗೆ ಮರಳುತ್ತಿದ್ದೇನೆ. ಇದೊಂದು ಒಳ್ಳೆಯ ಚಿತ್ರ. ಇಂಥದ್ದೊಂದು ದೊಡ್ಡ ಚಿತ್ರದ ಭಾಗವಾಗಲು ಖುಷಿಯಾಗಿದೆ. ಇಲ್ಲಿ ನಾಯಕನ ಅಕ್ಕನ ಪಾತ್ರ ಮಾಡುತ್ತಿದ್ದೇನೆ. ನಮ್ಮಿಬ್ಬರ ಟ್ರಾ್ಯಕ್ ಬಹಳ ಚೆನ್ನಾಗಿದೆ. ಸಾಮಾನ್ಯವಾಗಿ ಹಾಡು-ಡ್ಯಾನ್ಸು ಇರುತ್ತಿತ್ತು. ಇಲ್ಲಿ ವಿಶೇಷವಾಗಿದೆ’ ಎನ್ನುತ್ತಾರೆ ಜೆನಿಲಿಯಾ. ಇಲ್ಲಿ ಹಳ್ಳಿ ಮತ್ತು ಸಿಟಿಯ ಹಿನ್ನೆಲೆಯಲ್ಲಿ ತಮ್ಮ ಪಾತ್ರ ಸಾಗಲಿದೆ ಎನ್ನುವ ಜೆನಿಲಿಯಾ, ಲುಕ್ ಹೇಗಿರಲಿದೆ ಎಂಬ ಬಗ್ಗೆ ಹೆಚ್ಚೇನೂ ಮಾಹಿತಿ ಬಿಟ್ಟುಕೊಡಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net