ಗಂಡು ಭೇರುಂಡ: ಹಾಲಿವುಡ್​ನಿಂದ ಬಂದ ಚಿನ್ನ..

Flash Back
Published on

ಇಂದು ಕನ್ನಡದ ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರ ಹುಟ್ಟುಹಬ್ಬ. ‘ನಾಗರಹೊಳೆ’, ‘ಅಂತ’, ‘ಸಿಂಹದ ಮರಿ ಸೈನ್ಯ’, ‘ಗಂಡು ಭೇರುಂಡ’, ‘ಬಂಧನ’, ‘ಮುತ್ತಿನ ಹಾರ’ ಮುಂತಾದ ಹಲವು ವಿಭಿನ್ನ ಮತ್ತು ಅಪರೂಪದ ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟವರು ಅವರು. ಈ ಪೈಕಿ, ‘ಗಂಡು ಭೇರುಂಡ’ ಚಿತ್ರವನ್ನು ಹಾಲಿವುಡ್​ನ ಗ್ರೆಗರಿ ಪೆಕ್ ಅಭಿನಯದ ‘ಮೆಕೆನ್ನಾಸ್ ಗೋಲ್ಡ್’ ನಿಂದ ಸ್ಪೂರ್ತಿಪಡೆದು ನಿರ್ದೇಶಿಸಿದ್ದರು. ಹಸ್ತದ್ವೀಪ ಎನ್ನುವ ದೂರದ ನಿಗೂಢ ದ್ವೀಪದಲ್ಲಿ

ಅಡಗಿಸಿಟ್ಟಿರುವ ನಿಧಿಯೊಂದನ್ನು ಅರಸಿ ಹೋಗುವ ಈ ಸಾಹಸಮಯ ಚಿತ್ರದಲ್ಲಿ ಶ್ರೀನಾಥ್, ಅಂಬರೀಷ್, ಶಂಕರ್ ನಾಗ್, ವಜ್ರಮುನಿ, ಲಕ್ಷ್ಮೀ, ಅಮರೀಶ್ ಪುರಿ, ಜಯಮಾಲಾ ಮುಂತಾದವರು ನಟಿಸಿದ್ದರು. ಬಾಲಿವುಡ್ ಮಂದಿಯೇ ಇಂಥದ್ದೊಂದು ಚಿತ್ರ ಮಾಡುವುದಕ್ಕೆ ಹೆದರುತ್ತಿದ್ದ ಸಂದರ್ಭದಲ್ಲಿ ಬಾಬು ಇಂಥದ್ದೊಂದು ಚಿತ್ರವನ್ನು ಕನ್ನಡದಲ್ಲಿ ನಿರ್ದೇಶಿಸಿದ್ದರು. ಈ ಚಿತ್ರ ಬಿಡುಗಡೆಯಾಗಿ ಮೂರು ವರ್ಷಗಳ ನಂತರ ಹಿಂದಿಯಲ್ಲಿ ಇದೇ ಮಾದರಿಯ ‘ಕಜಾನಾ’ ಎಂಬ ಚಿತ್ರ ಬಿಡುಗಡೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net