ನಾಗೇಂದ್ರ ಪ್ರಸಾದ್​ ಮಗಳ ಅಭಿನಯದ 'ಗಾಂಧಿ ಮತ್ತು ನೋಟು' ಟ್ರೇಲರ್​ ಬಿಡುಗಡೆ

Gandhi Mattu Notu - Final
Published on

ಬೆಂಗಳೂರು: ಚಿತ್ರಸಾಹಿತಿ ವಿ.ನಾಗೇಂದ್ರ ಪ್ರಸಾದ್ ಪುತ್ರಿ ದಿವಿಜಾ ನಾಗೇಂದ್ರ ಪ್ರಸಾದ್ ನಟಿಸಿರುವ 'ಗಾಂಧಿ ಮತ್ತು ನೋಟು' ಚಿತ್ರದ ಟ್ರೇಲರ್​ನ್ನು 'ಹ್ಯಾಟ್ರಿಕ್​ ಹೀರೋ 'ಶಿವರಾಜಕುಮಾರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಇದನ್ನೂ ಓದಿ:

ಗಾಂಧಿ ತತ್ವಗಳನ್ನು ಹಾಗೂ ನೋಟನ್ನು ಈಗಿನ ಜನ ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂಬ ವಿಷಯವನ್ನು ಹಳ್ಳಿ ಹುಡುಗಿ (ದಿವಿಜಾ) ಪಾತ್ರದ ಮೂಲಕ ಈ ಚಿತ್ರದಲ್ಲಿ ಹೇಳಲಾಗಿದೆ. ಚಿಕ್ಕ ವಯಸ್ಸಿನ ಈ ಹುಡುಗಿ ಹೇಳುವ ಮಾತು ಎಲ್ಲಾವರ್ಗದ ಜನರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದೇ ಇದರ ಕಥಾಸಾರಾಂಶ.

ಪ್ರಿಯಾಂಕಾ ಉಪೇಂದ್ರ ಅಭಿನಯದ 'ಸೆಕೆಂಡ್ ಹಾಫ್' ಚಿತ್ರ ನಿರ್ದೇಶಿಸಿದ್ದ ಯೋಗಿ ದೇವಗಂಗೆ, 'ಗಾಂಧಿ ನೋಟು' ಚಿತ್ರದ ಕಥೆ, ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನ ಮಾಡಿದ್ದಾರೆ. ಭಾವನಾ ಕಂಬೈನ್ಸ್ ಲಾಂಛನದಲ್ಲಿ ಸುಧಾರಾಣಿ ಹೆಚ್.ಆರ್, ವೀಣಾ ಪದ್ಮನಾಭ, ಮಂಜುನಾಥ್ ಬಿ.ಎನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಲೋಕೇಶ್‌ ಡಿ.ಕೆ, ಮುರುಧ್ಯ, ಪ್ರಜ್ಞಾ ಬ್ರಹ್ಮಾವರ್, ಕೆ.ಬಿ.ರವಿ, ರಂಗಸ್ವಾಮಿ, ನವೀನ್, ವಿಶಾಲ್ ಮುಂತಾದವರು ನಟಿಸಿರುವ ಈ ಚಿತ್ರದ ಚಿತ್ರೀಕರಣವು ಸಾಗರದ ತುಂಬ್ರಿ ಎಂಬ ಸ್ಥಳದಲ್ಲೇ ಹೆಚ್ಚಾಗಿ ನಡೆದಿದೆ. ಸದ್ಯ ಡಿಐ ಕೆಲಸಗಳು ನಡೆಯು5ತ್ತಿದ್ದು ಅಕ್ಟೋಬರ್​ನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:

ಖ್ಯಾತ ಗಾಯಕಿ ಮತ್ತು ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರ ಪತ್ನಿ ವಾಣಿ ಹರಿಕೃಷ್ಣ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ವಿ.ನಾಗೇಂದ್ರಪ್ರಸಾದ್ ಎಲ್ಲಾ ಹಾಡುಗಳನ್ನು ಬರೆದಿದ್ದಾರೆ. ಅಚ್ಚು ಸುರೇಶ್ ಛಾಯಾಗ್ರಹಣ, ವಸಂತಕುಮಾರ್ ಸಂಕಲನ ಇರುವ ಈ ಚಿತ್ರಕ್ಕೆ ಗುರುಪ್ರಸಾದ್ ಚಂದ್ರಶೇಖರ್ ಸಂಭಾಷಣೆ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net