ಫ್ರೆಂಡ್​ಷಿಪ್​ ಡೇ: ಶಾಶ್ವತವಾಗಿದೆ ಕಾಲೇಜು ಸ್ನೇಹ...

Ullasa- Ishani
Published on

ಸಾಮಾನ್ಯವಾಗಿ ಹಿರಿತೆರೆ ಮತ್ತು ಕಿರುತೆರೆಗಳ ಮುಸುಕಿನ ಗುದ್ದಾಟ, ಜಗಳ, ದ್ವೇಷದ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತದೆ. ಒಳ್ಳೆಯ ಸ್ನೇಹದ ಬಗ್ಗೆ ಚರ್ಚೆಯಾಗುವುದು ಬಹಳ ಕಡಿಮೆಯೇ. ಸೆಲೆಬ್ರಿಟಿಗಳು ಹೆಚ್ಚು ಜನರ ಜತೆ ಸೇರದಿದ್ದರೂ, ಅವರಿಗೆ ಅವರದ್ದೇ ಆದ ಗೆಳೆಯರ ವೃಂದವಿರುತ್ತದೆ. ಅವರು ವೃತ್ತಿಗೆ ಸೇರಿದವರೂ ಇರಬಹುದು, ಬೇರೆ ವೃತ್ತಿಯವರೂ ಆಗಿರಬಹುದು. ಈ ಬಾರಿಯ ವಿಶ್ವ ಸ್ನೇಹ ದಿನಕ್ಕಾಗಿ ಒಂದಿಷ್ಟು ಸೆಲೆಬ್ರಿಟಿಗಳು ತಮ್ಮ ಕುಚ್ಚಿಕು ಕುಚ್ಚಿಕೂ ಸ್ನೇಹಿತರ ಬಗ್ಗೆ ಮಾತಾಡಿದ್ದಾರೆ. 

ಎಬ್ಲಿನ್ ಮತ್ತು ಸಹನಾ ಇಬ್ಬರು ನನ್ನ ಅತ್ಯಾಪ್ತರು. ಎಂಥದ್ದೇ ಸಂದರ್ಭ ಬಂದರೂ ಅವರ ಬಳಿ ನನಗೊಂದು ಸಲಹೆ ರೆಡಿ ಇರುತ್ತದೆ. ಕಾಲೇಜಿನಲ್ಲಿ ಎಬ್ಲಿನ್ ಮತ್ತು ನಾನು ಕ್ಲಾಸ್​ವೆುೕಟ್ಸ್. ಸಹನಾ ನನ್ನ ಲೆಕ್ಚರರ್. ಬಳಿಕ ದಿನಗಳೆದಂತೆ ಮೂವರೂ ಸ್ನೇಹಿತರಾದೆವು. ಎಬ್ಲಿನ್ ಪ್ರತಿ ಹಂತದಲ್ಲೂ ನನ್ನ ಜತೆಗೆ ನಿಂತಿದ್ದಾಳೆ. ವೃತ್ತಿಜೀವನ ಇರಲಿ, ವೈಯಕ್ತಿಕ ವಿಚಾರಗಳೇ ಆಗಿರಲಿ ... ಅವಳ ಜತೆ ಚರ್ಚೆ ಮಾಡುವುದಷ್ಟೇ ಅಲ್ಲ, ಅವಳು ಒಳ್ಳೆಯ ಸಲಹೆಗಳನ್ನು ನೀಡಿದ್ದಾಳೆ. ಸಿನಿಮಾ ಬರವಣಿಗೆಯಲ್ಲಿಯೂ ಸಹಾಯ ಮಾಡಿದ್ದಾಳೆ. ಮೂವರೂ ಒಟ್ಟಿಗೆ ಸೇರಿದರೆ ಸಿನಿಮಾ ಮತ್ತು ರಾಜಕೀಯದ ಬಗ್ಗೆ ಚರ್ಚೆ ಮಾಡುತ್ತೇವೆ. ಅಂದಹಾಗೆ, ತೀರಾ ಹೇಳಿಕೊಳ್ಳುವಂಥ ಸ್ನೇಹಿತರು ನನಗಿಲ್ಲ. ಮೊದಲಿಂದಲೂ ನಾನು ಕೊಂಚ ರಿಸರ್ವ್ಡ್. ಈ ಇಬ್ಬರಿಗೆ ಯಾವುದೇ ಸಮಯದಲ್ಲಿ ಕರೆ ಮಾಡಬಹುದು. ಯಾವ ತರಹದ ಸಹಾಯ ಬೇಕಾದರೂ ಕೇಳಬಹುದು ಎನ್ನುವುದು ಐಶಾನಿ ಶೆಟ್ಟಿ ಅಭಿಪ್ರಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net