ಕನ್ನಡದ ಈ ಚಿತ್ರ ನೇರವಾಗಿ ಓಟಿಟಿಯಲ್ಲಿ ಬಿಡುಗಡೆ; ಪುನೀತ್​ ರಾಜ್​ಕುಮಾರ್ ಕೊಟ್ರು ಸುಳಿವು!!

NFGGFNGFG
Published on

ಬೆಂಗಳೂರು: ಈಗಾಗಲೇ ಓಟಿಟಿ (ಓವರ್​ ದಿ ಟಾಪ್​) ಫ್ಲಾಟ್​ಫಾರ್ಮ್​ನಲ್ಲಿ ಪರಭಾಷೆಯ ಹಲವು ಸಿನಿಮಾಗಳು ನೇರವಾಗಿ ಬಿಡುಗಡೆ ಆಗಿವೆ. ಆದರೆ, ಕನ್ನಡದಲ್ಲಿ ಅದು ಸಾಧ್ಯನಾ? ಎಂಬ ಬಹುದೊಡ್ಡ ಪ್ರಶ್ನೆ ಎಲ್ಲರಲ್ಲೂ ಇತ್ತು. ಇದೀಗ ಅದೆಲ್ಲದಕ್ಕೂ ಪುನೀತ್​ ರಾಜ್​ಕುಮಾರ್​ ಕಡೆಯಿಂದ ಉತ್ತರ ಬಂದಿದೆ. ಅರೇ, ಪುನೀತ್​ ನಟನೆಯ ‘ಯುವರತ್ನ’ ಚಿತ್ರವೇನಾದರೂ ಓಟಿಟಿಗೆ ಬರುತ್ತಾ? ಹಾಗೇನಿಲ್ಲ, ಬದಲಿಗೆ ಪುನೀತ್​ ನಿರ್ಮಾಣದ ಸಿನಿಮಾವೊಂದು ಮೊದಲ ಬಾರಿಗೆ ಓಟಿಟಿ ವೇದಿಕೆಯಲ್ಲಿ ಬಿಡುಗಡೆ ಆಗಲಿದೆ.

ಹೌದು, ಪನ್ನಗಾ ಭರಣ ನಿರ್ದೇಶನದಲ್ಲಿ ತಯಾರಾಗಿರುವ ‘ಫ್ರೆಂಚ್​ ಬಿರಿಯಾನಿ’ ಸಿನಿಮಾಕ್ಕೆ ಪುನೀತ್​ ನಿರ್ಮಾಪಕ. ‘ಹಂಬಲ್​ ಪೊಲಿಟಿಶಿಯನ್​ ನಾಗರಾಜ್’ ಖ್ಯಾತಿಯ​ ದಾನಿಷ್​ ಸೇಠ್​, ಈ ಚಿತ್ರದಲ್ಲಿ ಆಟೋ ಡ್ರೈವರ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಏನೆಂದರೆ, ಇಲ್ಲಿಯವರೆಗೂ ಚಿತ್ರದ ಶೀರ್ಷಿಕೆಯನ್ನು ಚಿತ್ರತಂಡ ರಿವೀಲ್​ ಮಾಡಿರಲಿಲ್ಲ. ಇದೀಗ ಫೋಟೋ ಸಮೇತ ಹೇಳಿಕೊಂಡಿದ್ದು, ಯಾವ ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳಲಿದೆ.

ಪುನೀತ್​ ನಿರ್ಮಾಣದ ಕವಲುದಾರಿ ಮತ್ತು ಮಾಯಾಬಜಾರ್ ಸಿನಿಮಾಗಳು ಈಗಾಗಲೇ ವೀಕ್ಷಕರಿಂದ ಮೆಚ್ಚುಗೆ ಗಿಟ್ಟಿಸಿಕೊಂಡಿವೆ. ಅಮೆಜಾನ್​ ಪ್ರೈಮ್​ನಲ್ಲಿಯೂ ಹೆಚ್ಚು ವೀಕ್ಷಕರಿಂದ ನೋಡಲ್ಪಟ್ಟಿವೆ. ಇದೀಗ ಅಮೆಜಾನ್​ನಲ್ಲೇ ‘ಫ್ರೆಂಚ್​ ಬಿರಿಯಾನಿ’ ಸಿನಿಮಾ ಬಿಡುಗಡೆ ಆಗುತ್ತಾ ಅಥವಾ ಬೇರೆ ಫ್ಲಾಟ್​ಫಾರ್ಮ್​ ನತ್ತ ಮುಖ ಮಾಡುತ್ತಾ ಎಂಬುದು ಸದ್ಯದ ಕುತೂಹಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net