ಬೆಳ್ಳಿತೆರೆಗೆ ಮಾಜಿ ಸಿಎಂ: ಗಿನ್ನೆಸ್ ರೆಕಾರ್ಡ್ ಮಾಡಲು ಹೊರಟ ಚಿತ್ರದಲ್ಲಿ ನಟಿಸಲಿರುವ ಸಿದ್ದರಾಮಯ್ಯ siddaramaiah

ಈ ಹಿಂದೆ ಕನ್ನಡದ ‘ರಾ’ ಎಂಬ ಚಿತ್ರ ನಿರ್ದೇಸಿದ್ದ ರಾಜೇಶ್ ಇದೀಗ ಹೊಸ ಸವಾಲಿನ ಮೂಲಕ ಗಿನ್ನೆಸ್ ರೆಕಾರ್ಡ್ ಮಾಡಲು ಹೊರಟಿದ್ದಾರೆ. ಇನ್ನು ವಿಶೇಷ ಏನೆಂದರೆ, ಈ ಪ್ರಯೋಗಾತ್ಮಕ ಚಿತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಹಲವು ರಾಜಕಾರಣಿಗಳು ಕಾಣಿಸಿಕೊಳ್ಳಲಿದ್ದಾರೆ.
ಸಿದ್ದರಾಮಯ್ಯ ಜತೆ ಚರ್ಚಿಸುತ್ತಿರುವ ರಾಜೇಶ್​
ಸಿದ್ದರಾಮಯ್ಯ ಜತೆ ಚರ್ಚಿಸುತ್ತಿರುವ ರಾಜೇಶ್​SIDDARAMAIAH
Published on: 

ಬೆಂಗಳೂರು: ಹೊಸ ಪ್ರಯೋಗಗಳಿಗೆ ಕನ್ನಡ ಚಿತ್ರರಂಗ ಹೆಸರುವಾಸಿ. ಕೇವಲ ಒಂದೇ ದಿನದಲ್ಲಿ ಶೂಟಿಂಗ್ ಮಾಡಿದ ಸಿನಿಮಾಗಳೂ ಇವೆ. ಶಿವರಾಜಕುಮಾರ್ ಅಭಿನಯದ ‘ಸುಗ್ರೀವ’ (18 ತಾಸು), ‘ಪೊಲೀಸ್ ಸ್ಟೋರಿ 3’ (12 ತಾಸು) ಸೇರಿ ಕೆಲ ಚಿತ್ರಗಳು ಒಂದೇ ದಿನದಲ್ಲಿ ಶೂಟಿಂಗ್ ಮುಗಿಸಿ, ತೆರೆಗೆ ಬಂದಿರುವುದು ನಮ್ಮ ಕಣ್ಣ ಮುಂದಿದೆ. ಇದೀಗ ಹೊಸ ನಿರ್ದೇಶಕರೊಬ್ಬರು ಸ್ಥಳದಲ್ಲಿಯೇ ಸ್ಕ್ರಿಪ್ಟ್, ಸಂಭಾಷಣೆ ಬರೆದು, ಶೂಟಿಂಗ್ ಮುಗಿಸಿ ಎಡಿಟಿಂಗ್.. ಹೀಗೆ ಪ್ರಿ-ಪ್ರೊಡಕ್ಷನ್, ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಎಲ್ಲ ಕೆಲಸಗಳನ್ನೂ ಕೇವಲ 48 ಗಂಟೆಗಳಲ್ಲಿ ಮಾಡಿ, ಚಿತ್ರವೊಂದನ್ನು ಹೊರತರುವ ವಿಭಿನ್ನ ಸಾಹಸಕ್ಕೆ ಮುಂದಾಗುತ್ತಿದ್ದಾರೆ. ಹೆಸರು ರಾಜೇಶ್.

ಈ ಹಿಂದೆ ಕನ್ನಡದ ‘ರಾ’ ಎಂಬ ಚಿತ್ರ ನಿರ್ದೇಸಿದ್ದ ರಾಜೇಶ್ ಇದೀಗ ಹೊಸ ಸವಾಲಿನ ಮೂಲಕ ಗಿನ್ನೆಸ್ ರೆಕಾರ್ಡ್ ಮಾಡಲು ಹೊರಟಿದ್ದಾರೆ. ಇನ್ನು ವಿಶೇಷ ಏನೆಂದರೆ, ಈ ಪ್ರಯೋಗಾತ್ಮಕ ಚಿತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಹಲವು ರಾಜಕಾರಣಿಗಳು ಕಾಣಿಸಿಕೊಳ್ಳಲಿದ್ದಾರೆ. ‘ನಾಲ್ಕು ತಂಡ ರಚಿಸಿ, ನಾಲ್ಕು ಕ್ಯಾಮರಾಗಳನ್ನು ಬಳಸಿಕೊಂಡು ಶೂಟಿಂಗ್ ನಡೆಸಲಿದ್ದೇವೆ. ಒಬ್ಬೊಬ್ಬ ಕ್ಯಾಮರಾಮನ್‌ಗೂ ಎಂಟರಿಂದ 10 ಮಂದಿ ಸಹಾಯಕರು ಇರಲಿದ್ದಾರೆ. ಹಾಗೆಯೇ, ಒಂದು ದೃಶ್ಯದ ಚಿತ್ರೀಕರಣದ ಬಳಿಕ ಸ್ಥಳದಲ್ಲಿಯೇ ಸಂಕಲನ ಮಾಡಲಿದ್ದೇವೆ. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಎಚ್.ಎಂ.ರೇವಣ್ಣ ಸೇರಿ ಹಲವು ರಾಜಕಾರಣಿಗಳು ಕಾಣಿಸಿಕೊಳ್ಳಲಿದ್ದಾರೆ. ಬಹುತೇಕ ಕಲಾವಿದರಲ್ಲದವರೇ ಅಭಿನಯಿಸಲಿದ್ದಾರೆ. ಇಡೀ ಸಿನಿಮಾದ ಎಲ್ಲ ಕಾರ್ಯಗಳು 48 ಗಂಟೆಗಳಲ್ಲಿ ಮುಗಿಸಿ, ಅಂದೇ ಸಿನಿಮಾದ ಪ್ರದರ್ಶನ ಮಾಡುವ ಅಭಿಲಾಷೆ ಹೊಂದಿದ್ದೇವೆ. ಈ ರೀತಿಯ ಪ್ರಯೋಗ ಶ್ರೀಲಂಕಾದ ಚಿತ್ರರಂಗದಲ್ಲಿ ಆಗಿತ್ತು. ಭಾರತದಲ್ಲಿ ಆಗುತ್ತಿರುವುದು ಇದೇ ಮೊದಲು. ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿಯೇ ಶೂಟಿಂಗ್ ನಡೆಸಲು ಚಿಂತನೆ ನಡೆಸಿದ್ದೇವೆ. ಎಲ್ಲವೂ ಮನುಷ್ಯರೇ ಮಾಡಲು ಅಸಾಧ್ಯ ಹಾಗಾಗಿ, ತಂತ್ರಜ್ಞಾನದ ನೆರವು ಕೂಡ ಪಡೆಯಲಿದ್ದೇವೆ’ ಎಂದು ಮಾಹಿತಿ ನೀಡಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net