ಕನ್ನಡದ ಬಾಂಡ್ ಸಿನಿಮಾ ಜೇಡರ ಬಲೆ; ಸಿಐಡಿ999 ಆಗಿ ಮನಗೆದ್ದಿದ್ದ ರಾಜ್

Jedara Bale
Published on

ಜೇಮ್್ಸ ಬಾಂಡ್ ಸರಣಿಯ ‘ನೋ ಟೈಮ್ ಟು ಡೈ’ ಚಿತ್ರ ಗುರುವಾರವಷ್ಟೇ ಎಲ್ಲೆಡೆ ಬಿಡುಗಡೆಯಾಗಿ, ಪ್ರಶಂಸೆ ಪಡೆಯುತ್ತಿದೆ. ಜೇಮ್್ಸ ಬಾಂಡ್ ಎಂಬಾತ ಬ್ರಿಟಿಷ್ ಸೀಕ್ರೆಟ್ ಸರ್ವೀಸ್​ನ ಏಜೆಂಟ್ ಆದರೂ, ಗೂಢಾಚಾರಿಕೆಯ ಚಿತ್ರಗಳೆಂದರೆ ಅದು ಬಾಂಡ್ ಚಿತ್ರಗಳೆಂದೇ ಜನಪ್ರಿಯ. ಯಾವಾಗ ಬಾಂಡ್ ಚಿತ್ರಗಳು ಜನಪ್ರಿಯವಾದವೋ, ಬೇರೆ ಭಾಷೆಗಳಲ್ಲೂ ಬಾಂಡ್ ಮಾದರಿಯ ಹಲವು ಚಿತ್ರಗಳು ಬಿಡುಗಡೆಯಾಗಿವೆ. ಕನ್ನಡದಲ್ಲಿ ಬಿಡುಗಡೆಯಾದ ಬಾಂಡ್ ಶೈಲಿಯ ಮೊದಲ ಚಿತ್ರ ಎಂದರೆ ಅದು ಡಾ. ರಾಜಕುಮಾರ್ ಅಭಿನಯದ ‘ಜೇಡರ ಬಲೆ’. ಈ ಚಿತ್ರದಲ್ಲಿ ಸಿಐಡಿ 999 ಆಗಿ ಎಲ್ಲರ ಮನಗೆದ್ದಿದ್ದರು ಡಾ. ರಾಜ್.

ಆ ನಂತರ ಈ ಸರಣಿಯಲ್ಲಿ ‘ಗೋವಾದಲ್ಲಿ ಸಿಐಡಿ 999’, ‘ಆಪರೇಷನ್ ಜಾಕ್​ಪಾಟ್​ನಲ್ಲಿ ಸಿಐಡಿ 999’ ಮತ್ತು ‘ಆಪರೇಷನ್ ಡೈಮಂಡ್ ರಾಕೆಟ್’ ಚಿತ್ರಗಳು ಬಂದಿವೆ. ‘ಆಪರೇಷನ್ ಗೋಲ್ಡನ್ ಗ್ಯಾಂಗ್’ ಎಂಬ ಇನ್ನೊಂದು ಚಿತ್ರ ಘೋಷಣೆಯಾಗಿತ್ತಾದರೂ ಕಾರಣಾಂತರಗಳಿಂದ ಸೆಟ್ಟೇರಲಿಲ್ಲ. ಕೆಲವು ವರ್ಷಗಳ ಹಿಂದೆ ಶಿವರಾಜಕುಮಾರ್ ಅಭಿನಯದಲ್ಲಿ ಈ ಚಿತ್ರ ಸೆಟ್ಟೇರಲಿದೆ ಎಂದು ಹೇಳಲಾಗಿತ್ತು. ಅದೂ ಸಾಧ್ಯವಾಗಲಿಲ್ಲ. ಹಾಗಾಗಿ 1978ರಲ್ಲಿ ಬಂದ ‘ಆಪರೇಷನ್ ಡೈಮಂಡ್ ರಾಕೆಟ್’ ಚಿತ್ರ ಬಾಂಡ್ ಸರಣಿಯ ಕೊನೆಯ ಚಿತ್ರವಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net