

ಬೆಂಗಳೂರು: ಕೆಲವು ತಿಂಗಳ ಹಿಂದೆ ಹೋಲಿಸಿದರೆ, ಇತ್ತೀಚೆಗೆ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ಕಡಿಮೆ ಎಂದರೆ ತಪ್ಪಿಲ್ಲ. ವಾರಕ್ಕೆ 8-10 ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಇತ್ತೀಚೆಗೆ ಆ ಸಂಖ್ಯೆ ಎರಡು, ಒಂದಕ್ಕೆ ಇಳಿದಿತ್ತು. ಈ ವಾರ ಪುನಃ ಐದು ಚಿತ್ರಗಳು ಬಿಡುಗಡೆಯಾಗುತ್ತಿವೆ.
ಈ ಐದರಲ್ಲಿ ಪ್ರಮುಖವೆಂದರೆ ಡಾ. ರಾಜ್ ಮೊಮ್ಮಗ, ರಾಮ್ುಮಾರ್ ಮಗ ಧೀರೇನ್ ಅಭಿನಯದ ‘ಶಿವ 143’. ಧೀರೇನ್ ಅಭಿನಯದ ಮೊದಲ ಚಿತ್ರ ಇದಾಗಿದ್ದು, ತೆಲುಗಿನ ‘ಆರ್ಎಕ್ಸ್ 100’ನ ರೀಮೇಕ್ ಆಗಿದೆ. ಮಾನ್ವಿತಾ ಕಾಮತ್, ಸಾಧು ಕೋಕಿಲ, ಚಿಕ್ಕಣ್ಣ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಪವನ್ ಒಡೆಯರ್ ನಿರ್ವಿುಸಿ, ಸಾಗರ್ ಪುರಾಣಿಕ್ ನಿರ್ದೇಶಿಸಿರುವ ರಾಷ್ಟ್ರ ಪ್ರಶಸ್ತಿ ವಿಜೇತ ‘ಡೊಳ್ಳು’ ಸಹ ಈ ವಾರ ಬಿಡುಗಡೆಯಾಗುತ್ತಿದೆ. ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗುವುದರ ಜತೆಗೆ, ಪ್ರಶಸ್ತಿಗಳನ್ನು ಗೆದ್ದಿರುವ ಈ ಚಿತ್ರದಲ್ಲಿ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ ಮುಂತಾದವರು ಅಭಿನಯಿಸಿದ್ದಾರೆ.
ಇದಲ್ಲದೆ ಅರ್ಜುನ್ ಮಹೇಶ್-ಪ್ರಿಯಾಂಕಾ ಚಿಂಚೋಳಿ ಅಭಿನಯದ ‘ಕೌಟಿಲ್ಯ’, ಯಶವಂತ್-ಆಶಿಕಾ ಸೋಮಶೇಖರ್ ಅಭಿನಯದ ‘ವಿಕಿಪೀಡಿಯಾ’ ಮತ್ತು ಹೊಸಬರ ‘ಮರ್ಕಟ’ ಚಿತ್ರಗಳು ಬಿಡುಗಡೆಯಾಗುತ್ತಿದ್ದು, ಇದರೊಂದಿಗೆ ಈಗಾಗಲೇ ‘ಲೈಗರ್’ ಚಿತ್ರವು ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗಿದೆ.