

ಬೆಂಗಳೂರು: ಬಾಲ್ಯವನ್ನು ನೆನಪಿಸುವ ಹಲವು ಹಾಡುಗಳು ಕನ್ನಡ ಚಿತ್ರಗಳಲ್ಲಿ ಬಂದಿದೆ. ಈ ಸಾಲಿಗೆ ಇದೀಗ 'ಸಂಭ್ರಮ' ಚಿತ್ರದ 'ಆಡೋಕೆ ಸಾವಿರ ಆಟ ...' ಹೊಸದಾಗಿ ಸೇರ್ಪಡೆಯಾಗಿದೆ.
ಇದನ್ನೂ ಓದಿ: ಆಸ್ತಿ ಕಡಿಮೆ, ಅನುಭವ ಜಾಸ್ತಿ: ಹಿರಿಯ ನಟ ಉಮೇಶಣ್ಣ
'ಆಡೋಕೆ ಸಾವಿರ ಆಟ ...' ಹಾಡಿನಲ್ಲಿ ಬಾಲ್ಯವನ್ನು ನೆನಪಿಸುತ್ತದೆ. ಬಾಲ್ಯದಲ್ಲಿ ಆಡಿದ ಆಟ, ತರಲೆಗಳು, ಶಾಲೆಯ ರಜಾ ಮಜಾ ಸವಿಯುವ ಕ್ಷಣಗಳು, ಒಂದಷ್ಟು ಫಿಲಾಸಫಿ ಮತ್ತು ಹಲವ ನೆನಪುಗಳಿರುವ ಈ ಹಾಡಿಗೆ ನಿರ್ದೇಶಕ ಶ್ರೀ ಸಂಭ್ರಮ ಸಾಹಿತ್ಯ ಬರೆದಿದ್ದು, ಸೋನಲ್ ಶ್ರೀವತ್ಸವ್, ಅಭಿನವ್ ಭಟ್, ಅಪ್ರಮಿ, ಶ್ರೇಯ ಶ್ರೀರಂಗ, ಶಶಿಕಲಾ ಸುನಿಲ್, ಪೂರ್ಣಿಮಾ ಮಂಜುನಾಥ್, ದಿವ್ಯಾ ರಾಮಚಂದ್ರ ಮುಂತಾದವರು ಧ್ವನಿಯಾಗಿದ್ದಾರೆ. ಇನ್ನು, ಹಿರಿಯ ಸಂಗೀತ ನಿರ್ದೇಶಕ ಮನೋಮೂರ್ತಿ ಸಂಗೀತ ಸಂಯೋಜಿಸಿದ್ದಾರೆ.
ಫೀನಿಕ್ಸ್ ಪ್ರೊಡಕ್ಷನ್ ಬ್ಯಾನರ್ನಡಿ ಅನಿಲ್ ರಾಜ್ ಸಂಕೇತ್ ಹಾಗೂ ಉಮೇಶ್ ಎಲ್ ಧರ್ಮಶಿ ನಿರ್ಮಾಣದಲ್ಲಿ ಮೂಡಿಬಂದಿರುವ 'ಸಂಭ್ರಮ' ಚಿತ್ರವನ್ನು ಶ್ರೀ ಸಂಭ್ರಮ್ ನಿರ್ದೇಶಿಸಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಅಭಯ್ ವೀರ್, ವೀರೆಂದ್ರ ಶೆಟ್ಟಿ,ರಿಧಿ ರಾಥೋರ್, ಕಿರಣ್ ಕುಮಾರ್, ಯಶವಂತ್, ರಾಘವೇಂದ್ರ, ಸ್ಪೂರ್ತಿ ಹಾಗೂ ಶ್ರಾವಣಿ ಈ ಚಿತ್ರದಲ್ಲಿ ನಟಿಸಿದ್ದಾರೆ.
'ಸಂಭ್ರಮ' ಚಿತ್ರದಲ್ಲಿ ಸೋನು ನಿಗಂ, ಮನೋಮೂರ್ತಿ ಮತ್ತು ಜಯಂತ್ ಕಾಯ್ಕಿಣಿಯವರ ಹಿಟ್ ಕಾಂಬಿನೇಷನ್ ಮತ್ತೆ ಒಂದಾಗಿರುವುದು ವಿಶೇಷ. ಈ ಚಿತ್ರವನ್ನು ಹೊಸಪೇಟೆ, ಗಂಗಾವತಿ, ಸಿಂಧನೂರು ಸುತ್ತಮುತ್ತ 47 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದ್ದು, ಸೆಪ್ಟೆಂಬರ್ನಲ್ಲಿ ಚಿತ್ರ ಬಿಡುಡೆಯಾಗುವ ಸಾಧ್ಯತೆ ಇದೆ.