ಶೇರ್ನಿಯಾಗಿ ಬರುತ್ತಿದ್ದಾರೆ ವಿದ್ಯಾ ಬಾಲನ್!

Vidya Balan - Sherni - Final
Published on

ಮುಂಬೈ: ಶ್ರೀದೇವಿ ಅಭಿನಯದ ಜನಪ್ರಿಯ ಚಿತ್ರಗಳ ಪೈಕಿ ಶೇರ್ನಿ ಸಹ ಒಂದು. 80ರ ದಶಕದಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಶ್ರೀದೇವಿ ಆಕ್ಷನ್​ ರೋಲ್​ನಲ್ಲಿ ಕಾಣಿಸಿಕೊಂಡು ಸಾಕಷ್ಟು ಜನಪ್ರಿಯರಾಗಿದ್ದರು. ಈಗ ವಿದ್ಯಾ ಬಾಲನ್​ ಸಹ ಅದೇ ಹೆಸರಿನ ಚಿತ್ರವೊಂದರಲ್ಲಿ ನಟಿಸಿದ್ದಾರೆ.

ವಿದ್ಯಾ ಬಾಲನ್​ ಅಭಿನಯದ ಶೇರ್ನಿ ಚಿತ್ರದ ಮೊದಲ ಲುಕ್​ ಬಿಡುಗಡೆಯಾಗಿದ್ದು, ಜೂನ್​ ತಿಂಗಳಲ್ಲಿ ಬಿಡುಗಡೆಯಾಗುತ್ತಿದೆ. ಇಡೀ ದೇಶದಲ್ಲಿ ಲಾಕ್​ಡೌನ್​ ಇರುವಾಗ, ಈ ಚಿತ್ರ ಬಿಡುಗಡೆಯಾಗುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು.

ವಿಷಯವೇನೆಂದರೆ, ಈ ಚಿತ್ರವು ಅಮೇಜಾನ್​ ಪ್ರೈಮ್​ನಲ್ಲಿ ನೇರವಾಗಿ ಬಿಡುಗಡೆಯಾಗುತ್ತಿದೆ. ಇದಕ್ಕೂ ಮುನ್ನ ವಿದ್ಯಾ ಬಾಲನ್​ ಅವರ ಶಕುಂತಲಾ ಸಹ ಕಳೆದ ವರ್ಷ ಚಿತ್ರಮಂದಿರಗಳಿಗೂ ಮುನ್ನ ನೇರವಾಗಿ ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಿತ್ತು. ಈಗ ಶೇರ್ನಿ ಸಹ ಆ ಪಟ್ಟಿಗೆ ಸೇರ್ಪಡೆಯಾಗಿದೆ.

ಶೇರ್ನಿ ಚಿತ್ರದ ಕಥೆ ಏನು ಎಂಬುದು ಗೊತ್ತಿಲ್ಲ. ಚಿತ್ರದ ಪೋಸ್ಟರ್​ ನೋಡಿದರೆ, ವಿದ್ಯಾ ಬಾಲನ್​ ಇದರಲ್ಲಿ ಫಾರೆಸ್ಟ್​ ಆಫೀಸರ್​ ಪಾತ್ರದಲ್ಲಿ ಕಾಣಿಸಿಕೊಂಡಿರುವಂತೆ ಕಾಣುತ್ತಿದೆ. ಸದ್ಯಕ್ಕೆ ಈ ವಿಷಯವನ್ನು ಚಿತ್ರತಂಡದವರು ಗುಟ್ಟಾಗಿದ್ದು, ಮುಂದಿನ ತಿಂಗಳೇ ಒಟ್ಟಿಗೆ ನೋಡಿಕೊಳ್ಳಿ ಎಂದು ಸುಮ್ಮನಾಗಿಬಿಟ್ಟಿದ್ದಾರೆ.

ಶೇರ್ನಿ ಚಿತ್ರವನ್ನು ಅಮಿತ್​ ಮಸುರ್ಕರ್​ ನಿರ್ದೇಶಿಸಿದ್ದು ಟಿ-ಸೀರೀಸ್​ ಮತ್ತು ಅಬಂಡನ್ಶಿಯಾ ಎಂಟರ್​ಟೈನ್​ಮೆಂಟ್​ ಜತೆಯಾಗಿ ನಿರ್ಮಿಸಿದೆ. ವಿದ್ಯಾ ಜತೆಗೆ ಶರತ್​ ಸಕ್ಸೇನಾ, ವಿಜಯ್​ ರಾಜ್​, ಇಳಾ ಅರುಣ್​, ಬ್ರಿಜೇಂದ್ರ ಕಾಳಾ, ನೀರಜ್​ ಕಾಬಿ ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net