'ಮಹಾ ಸಮುದ್ರ' ದಾಟಲು ಹೊರಟ ಗರುಡ ರಾಮ್​!

Garuda Ram - Final
Published on

ಹೈದರಾಬಾದ್​: ಯಶ್​ ಅಭಿನಯದ 'ಕೆಜಿಎಫ್​' ಚಿತ್ರದ ಮೂಲಕ ರಾತ್ರೋರಾತ್ರಿ ಹಿಟ್​ ಆದವರೆಂದರೆ ಅದು ರಾಮಚಂದ್ರ ರಾಜು ಅಲಿಯಾಸ್​ ಗರುಡ್​ ರಾಮ್​. ಯಶ್​ ಅವರ ಬಾಡಿಗಾರ್ಡ್​ ಆಗಿ ಗುರುತಿಸಿಕೊಂಡಿದ್ದ ರಾಮಚಂದ್ರ ರಾಜು, 'ಕೆಜಿಎಫ್​' ಚಿತ್ರ ಹಿಟ್​ ಆಗುತ್ತಿದ್ದಂತೆಯೇ ಗರುಡ ರಾಮ್​ ಎಂದೇ ಜನಪ್ರಿಯರಾಗಿದ್ದಾರೆ.

ಹೀಗೆ ಜನಪ್ರಿಯರಾದ ರಾಮ್​ ನಂತರದ ದಿನಗಳಲ್ಲಿ ಕನ್ನಡದ ಒಂದಿಷ್ಟು ಚಿತ್ರಗಳಲ್ಲಿ ನಟಿಸುವುದರ ಜತೆಗೆ, ಟಾಲಿವುಡ್​ಗೂ ಎಂಟ್ರಿ ಕೊಡುತ್ತಾರೆ ಎಂದು ಸುದ್ದಿಯಾಗಿತ್ತು. ಈಗ ರಾಮ್​ ಅಭಿನಯದ ಮೊದಲ ತೆಲುಗು ಚಿತ್ರದಲ್ಲಿನ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್​ ಬಿಡುಗಡೆಯಾಗಿದೆ.

'ಮಹಾ ಸಮುದ್ರಂ' ಎಂಬ ಚಿತ್ರದಲ್ಲಿ ರಾಮ್​, ಧನಂಜಯ್​ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ನೆಗೆಟಿವ್​ ಪಾತ್ರವಾಗಿದ್ದು, ಅವರ ಪಾತ್ರದ ಪೋಸ್ಟರ್​ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಬಿಡುಗಡೆಯಾಗಿ ದೊಡ್ಡ ಸುದ್ದಿ ಮಾಡುತ್ತಿದೆ.

ಅಂದಹಾಗೆ, 'ಮಹಾ ಸಮುದ್ರಂ' ಚಿತ್ರವನ್ನು ಅಜಯ್​ ಭೂಪತಿ ಎನ್ನುವವರು ನಿರ್ದೇಶಿಸುತ್ತಿದ್ದು, ಶರ್ವಾನಂದ್​ ಮತ್ತು ಸಿದ್ಧಾರ್ಥ್​ ಹೀರೋಗಳಾಗಿ ನಟಿಸುತ್ತಿದ್ದಾರೆ. ಅದಿತಿ ರಾವ್​ ಹೈದರಿ, ಅನು ಇಮ್ಯಾನ್ಯುಯಲ್​, ಜಗಪತಿ ಬಾಬು, ರಾವ್ ರಮೇಶ್​ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಅರ್ಧ ಭಾಗದ ಚಿತ್ರೀಕರಣ ಮುಗಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net