ಈ ವಿಷಯದಲ್ಲಿ ಕತ್ರೀನಾ ಅವರನ್ನು ಮೀರಿಸಿದರು ಅದಿತಿ ...

Aana - Final
Published on

ಬೆಂಗಳೂರು; ಭಾರತದಲ್ಲಿ ಇದುವರೆಗೂ ಹಲವು ಸೂಪರ್​ ಹೀರೋ ಚಿತ್ರಗಳು ಬಿಡುಗಡೆಯಾಗಿವೆ. ಆದರೆ, ಇದುವರೆಗೂ ಮಹಿಳಾ ಸೂಪರ್​ ಹೀರೋ ಚಿತ್ರ ಬಂದ ಉದಾಹರಣೆಯಿಲ್ಲ. ಹಿಂದೆಯಲ್ಲಿ ಕತ್ರೀನಾ ಕೈಫ್​ ಅಭಿನಯದಲ್ಲಿ ಒಂದು ಲೇಡಿ ಸೂಪರ್​ ಹೀರೋ ಚಿತ್ರ ಮಾಡುವುದಕ್ಕೆ ತಯಾರಿ ನಡೆದಿದ್ದು, ಅದು ಮುಂದಿನ ವರ್ಷ ಸೆಟ್ಟೇರುವ ಸಾಧ್ಯತೆ ಇದೆ.

ಈ ಮಧ್ಯೆ, ಕನ್ನಡದಲ್ಲಿ ಸದ್ದಿಲ್ಲದೆ ಮಹಿಳಾ ಸೂಪರ್​ ಹೀರೋ ಚಿತ್ರ ಸೆಟ್ಟೇರಿದ್ದಷ್ಟೇ ಅಲ್ಲ, ಇದೀಗ ಚಿತ್ರೀಕರಣ ಸಹ ಮುಗಿದಿದೆ. ಲಾಕ್​ಡೌನ್​ ಮುಗಿದ ನಂತರ ಅದಿತಿ, 'ಆನಾ' ಎಂಬ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದು, ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಲೇಡಿ ಸೂಪರ್​ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯಾಗಿತ್ತು. ಈಗ ಆ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಗಿದಿದೆ.

ಹೆಸರುಫಟ್ಟ ಬಳಿ‌ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ನಡೆಸಲಾಗಿದ್ದು, ಅಲ್ಲೇ‌ ಚಿತ್ರೀಕರಣ ಪೂರ್ಣಗೊಳಿಸಿ ಕುಂಬಳಕಾಯಿ ಒಡೆಯಲಾಗಿದೆ. ಸದ್ಯದಲ್ಲೇ ಈ ಚಿತ್ರದ ಡಬ್ಬಿಂಗ್​ ಪ್ರಾರಂಭವಾಗಲಿದ್ದು, ಮಾರ್ಚ್​ನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಮನೋಜ್ ಪಿ ನಡುಲಮನೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಅದಿತಿ ಜತೆಗೆ ಸುನೀಲ್​ ಪುರಾಣಿಕ್​, ಚೇತನ್​ ಗಂಧರ್ವ, ಸಮರ್ಥ್​ ನರಸಿಂಹರಾಜು ಮುಂತಾದವರು ನಟಿಸಿದ್ದಾರೆ. ಉದಯ್​ ಲೀಲಾ ಅವರ ಛಾಯಾಗ್ರಹಣ ಮತ್ತು ರಿತ್ವಿಕ್​ ಮುರಳೀಧರನ್​ ಸಂಗೀತ ಸಂಯೋಜಿಸಿದ್ದಾರೆ. ಪೂಜಾ ವಸಂತಕುಮಾರ್​ ಈ ಚಿತ್ರದ ನಿರ್ಮಾಪಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net