ಕನ್ನಡದಲ್ಲಿ 100 ಚಿತ್ರಗಳ ಮೊದಲ ನಟ ನರಸಿಂಹರಾಜು

Flash Back
Published on

ಕನ್ನಡ ಚಿತ್ರರಂಗದಲ್ಲಿ 100 ಚಿತ್ರಗಳಲ್ಲಿ ನಟಿಸಿದ ಹಲವು ನಟ-ನಟಿಯರಿದ್ದಾರೆ. ಆದರೆ, ಮೊದಲಿಗೆ ಶತಕ ಬಾರಿಸಿದ ನಟ ಎಂದರೆ ಅದು ನರಸಿಂಹರಾಜು. ‘ಬೇಡರ ಕಣ್ಣಪ್ಪ’ ಚಿತ್ರದ ಕಾಶೀನಾಥ ಶಾಸ್ತ್ರಿಯ ಪಾತ್ರ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು, 13 ವರ್ಷಗಳ ಅಂತರದಲ್ಲಿ 100 ಚಿತ್ರಗಳಲ್ಲಿ ನಟಿಸಿದರು.

1967ರಲ್ಲಿ ಬಿಡುಗಡೆಯಾದ ‘ನಕ್ಕರೆ ಅದೇ ಸ್ವರ್ಗ’ ಚಿತ್ರವು ನರಸಿಂಹರಾಜು ಅಭಿನಯದ 100ನೇ ಚಿತ್ರವಾಗಿತ್ತು. ಈ ಚಿತ್ರದಲ್ಲಿ ಅವರು ಹೀರೋ ಆಗಿ ನಟಿಸಿದ್ದು, ‘ಬಾಳೊಂದು ಭಾವಗೀತೆ ಆನಂದ ತುಂಬಿದ ಕವಿತೆ ...’ ಮತ್ತು ‘ನಗಬೇಕು ನಗಿಸಬೇಕು ಇದೇ ನನ್ನ ಧರ್ಮ ...’ ಎಂಬ ಎರಡು ಹಾಡುಗಳನ್ನು ಅವರ ಮೇಲೆ ಚಿತ್ರೀಕರಿಸಲಾಗಿತ್ತು.

ಡಾ. ರಾಜಕುಮಾರ್, ಉದಯಕುಮಾರ್, ಕಲ್ಯಾಣ್ ಕುಮಾರ್ ಸೇರಿದಂತೆ ಆ ಕಾಲದ ಎಲ್ಲ ಜನಪ್ರಿಯ ನಟರೊಂದಿಗೂ ನರಸಿಂಹರಾಜು ನಟಿಸಿದ್ದಾರೆ. ನರಸಿಂಹರಾಜು ಅವರು ನಗೆನಟನಾಗಿ ನಟಿಸಿದರೂ, ಅವರಿಗಾಗಿಯೇ ಬಹಳಷ್ಟು ಚಿತ್ರಗಳಲ್ಲಿ ಒಂದಾದರೂ ಹಾಡು ಇರುತ್ತಿತ್ತು ಎನ್ನುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net