PHOTOS & VIDEO: ಹೊಸವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಿದ ನ್ಯೂಜಿಲೆಂಡ್​, ಆಸ್ಟ್ರೇಲಿಯಾ; ಆಕ್ಲೆಂಡ್​ನ ಸ್ಕೈ ಟವರ್​ ಬಳಿ ಭರ್ಜರಿ ಸಂಭ್ರಮ

New Year 1 31 Dec 19
Published on

ಜಗತ್ತಿನಾದ್ಯಂತ ಜನರು 2020ನೇ ಹೊಸವರ್ಷವನ್ನು ಬರಮಾಡಿಕೊಳ್ಳಲು ಉತ್ಸುಕರಾಗಿದ್ದು ಈಗಿಂದಲೇ ಸಂಭ್ರಮ ಶುರುವಾಗಿದೆ.

ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾಗಳು ಅಲ್ಲಿನ ಕಾಲಮಾನದ ಪ್ರಕಾರ ಈಗಾಗಲೇ ಹೊಸವರ್ಷಕ್ಕೆ ಕಾಲಿಟ್ಟಿವೆ. ಅಲ್ಲಿನ ಜನರು ಪಟಾಕಿ ಸಿಡಿಸಿ ಅದ್ದೂರಿಯಾಗಿ 2020ನೇ ಇಸ್ವಿಯನ್ನು ಬರಮಾಡಿಕೊಂಡಿದ್ದು ಫೋಟೋ, ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿವೆ.

ಆಸ್ಟ್ರೇಲಿಯಾದ ಸಿಡ್ನಿ, ಮೆಲ್ಬೋರ್ನ್​, ಅಡಿಲೇಡ್​, ನ್ಯೂಜಿಲೆಂಡ್​ನ ವೆಲ್ಲಿಂಗ್ಟನ್​, ಆಕ್ಲೆಂಡ್​ಗಳು ಹೊಸವರ್ಷವನ್ನು ಆಚರಣೆ ಮಾಡುವ ನಗರಗಳು. ಅಂತೆಯೇ ಈ ಬಾರಿಯೂ ಈ ಎಲ್ಲ ನಗರಗಳಲ್ಲಿ ಹೊಸವರ್ಷದ ಸಡಗರ ಪ್ರಾರಂಭವಾಗಿದೆ. ಪಾರ್ಟಿ, ಪಟಾಕಿಯಲ್ಲಿ ಜನರು ಮಿಂದೇಳುತ್ತಿದ್ದಾರೆ.

ಆಕ್ಲೆಂಡ್​ನಲ್ಲಂತೂ ಭರ್ಜರಿ ಪಟಾಕಿಗಳನ್ನು ಸಿಡಿಸಲಾಗಿದೆ. ಇಲ್ಲಿನ ಸ್ಕೈ ಟವರ್​ ಬಳಿ ಸಾವಿರಾರು ಜನ ಸೇರಿ ಹೊಸವರ್ಷವನ್ನು ಸ್ವಾಗತಿಸಿದ್ದಾರೆ. ಇದೇ ಮೊದಲ ಬಾರಿಗೆ ಈ ಟವರ್​ ಮೇಲೆ ಲೇಸರ್​ ಮತ್ತು ಅನಿಮೇಶನ್​ ಮೂಲಕ ಹೊಸವರ್ಷದ ಚಿತ್ತಾರ ಮೂಡಿಸಲಾಗಿತ್ತು. ನ್ಯೂಜಿಲೆಂಡ್​ ಉಳಿದ ನಗರಗಳಲ್ಲೂ ಹೊಸವರ್ಷ ಸಂಭ್ರಮಾಚರಣೆ ಜೋರಾಗಿ ನಡೆದಿದೆ.

ಆಸ್ಟ್ರೇಲಿಯಾದಲ್ಲೂ ಕೂಡ ಹೊಸವರ್ಷಾಚರಣೆ ನಡೆದಿದ್ದು ಜನರು ಪಟಾಕಿ ಸಿಡಿಸಿ, ಪರಸ್ಪರ ಹ್ಯಾಪಿ ನ್ಯೂ ಇಯರ್​ ಎಂದು ಶುಭ ಕೋರುವ ಮೂಲಕ ಸಡಗರಪಟ್ಟಿದ್ದಾರೆ.

ಜಪಾನ್​ನ ಟೋಕಿಯೋದಲ್ಲೂ ಕೂಡ ಈಗಾಗಲೇ ಹೊಸವರ್ಷ ಆಚರಣೆ ನಡೆದಿದೆ. ಎಲ್ಲೆಡೆ ರಂಗುರಂಗಿನ ಪಟಾಕಿಗಳು ಬಾನೆತ್ತರದಲ್ಲಿ ಸದ್ದು ಮಾಡುವ ಮೂಲಕ ನ್ಯೂ ಇಯರ್​​ನ್ನು ಬರಮಾಡಿಕೊಳ್ಳಲಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net