ತಮ್ಮ ಚೊಚ್ಚಲ ರಾಜಕೀಯ ಪ್ರವೇಶದಲ್ಲಿಯೇ ತಮಿಳುನಾಡಿನ ಜನತೆಯಿಂದ ಅಭೂತಪೂರ್ವ ಬೆಂಬಲ ಪಡೆದ ವಿಜಯ್ಗೆ ಇಂದಿಗೂ ಗಣ್ಯರು, ಚಿತ್ರರಂಗದ ಕಲಾವಿದರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಸಿಎಂ ಆಗಿ ತಮಿಳುನಾಡಿನಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ತಂದಿರುವ ವಿಜಯ್, ತಾನೂ ಕೂಡ ಜನಸಾಮಾನ್ಯರಲ್ಲಿ ಒಬ್ಬ ಎಂಬಂತೆ ಸರಳವಾಗಿ ಬಸ್ ಪ್ರಯಾಣ, ತಮ್ಮ ಕಾರನ್ನು ತಾವೇ ಚಲಾಯಿಸುವ ಮೂಲಕ ರಾಜ್ಯದ ಜನತೆಯ ಹೃದಯವನ್ನು ಗೆಲ್ಲುತ್ತಿದ್ದಾರೆ. ಈಗ ಅವರ ಸಿನಿಮಾ ಬಿಡುಗಡೆಗೆ ನಿರೀಕ್ಷೆಗಳು ಡಬಲ್ ಆಗಿದ್ದು, ಫ್ಯಾನ್ಸ್ಗಳು ನಿರ್ಮಾಣ ಸಂಸ್ಥೆಯ ಅಧಿಕೃತ ಘೋಷಣೆಗಾಗಿ ಕಾಯುತ್ತಿದ್ದಾರೆ,(ಏಜೆನ್ಸೀಸ್).