ಆಸ್ಸಾಂನಲ್ಲಿ ಅದ್ದೂರಿಯಾಗಿ ನಡೆದ ಫಿಲ್ಮ್​ಫೇರ್​ ಅವಾರ್ಡ್​ ಸಮಾರಂಭ; ಹಲವು ಪ್ರಶಸ್ತಿಗಳನ್ನು ಬಾಚಿಕೊಂಡ ಅತ್ಯುತ್ತಮ ಚಿತ್ರ 'ಗಲ್ಲಿ ಬಾಯ್​'

Gully Boy 16 Feb 20
Published on

ಗುವಾಹಟಿ: 65ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ಸಂಜೆ ಆಸ್ಸಾಂನ ಗುವಾಹಟಿಯಲ್ಲಿ ಅದ್ದೂರಿಯಾಗಿ ನಡೆಯಿತು.

ಇದೇ ಪ್ರಥಮ ಬಾರಿಗೆ ಬಾಲಿವುಡ್​ನ ಫಿಲ್ಮ್​ಫೇರ್​ ಅವಾರ್ಡ್​ ಕಾರ್ಯಕ್ರಮ ಮುಂಬೈ ಬಿಟ್ಟು ಬೇರೆ ನಗರದಲ್ಲಿ ನಡೆದಿದೆ.

2020ನೇ ಫಿಲ್ಮ್​ಫೇರ್​ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕರಣ್​ ಜೋಹರ್​, ವರುಣ್​ ಧವನ್​ ಮತ್ತು ವಿಕ್ಕಿ ಕೌಶಾಲ್​ ನಿರೂಪಣೆ ಮಾಡಿದರು. ಬಾಲಿವುಡ್​ ಸಿಲೆಬ್ರಿಟಿಗಳಾದ ರಣವೀರ್​ ಸಿಂಗ್​, ಅಲಿಯಾ ಭಟ್, ಆಯುಷ್ಮಾನ್​ ಖುರಾನಾ, ಕಾರ್ತೀಕ್​ ಆರ್ಯನ್​, ಭೂಮಿ ಪೆಡ್ನೇಕರ್​, ಅನನ್ಯಾ ಪಾಂಡೆ ಸೇರಿ ಅನೇಕರು ಉಪಸ್ಥಿತರಿದ್ದರು.

ಈ ಬಾರಿಯ ಫಿಲ್ಮ್​ಫೇರ್​ ಅವಾರ್ಡ್​ನಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು ಜೋಯಾ ಅಕ್ತರ್​ ನಿರ್ದೇಶನದ 'ಗಲ್ಲಿ ಬಾಯ್​'.

2019ರ ಫೆಬ್ರವರಿ 14ರಂದು ಬಿಡುಗಡೆಯಾಗಿದ್ದ ಗಲ್ಲಿಬಾಯ್​ ಚಿತ್ರದ ಬಾಕ್ಸ್​ ಆಫೀಸ್ ಗಳಿಕೆ 238.16 ಕೋಟಿ ರೂಪಾಯಿ ಆಗಿತ್ತು. ಇದೀಗ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ನಿರ್ದೇಶನ, ಪೋಷಕ ನಟ ಸೇರಿ ಹಲವು ಪ್ರಶಸ್ತಿಗಳನ್ನು ಗಲ್ಲಿಬಾಯ್​ ಬಾಚಿಕೊಂಡಿದೆ.

ಹೀಗಿದೆ ಈ ಬಾರಿಯ ಫಿಲ್ಮ್​ಫೇರ್​ ಪ್ರಶಸ್ತಿ ಪಡೆದ ಪ್ರಮುಖ ಸಿನಿಮಾ ಹಾಗೂ ಪಾತ್ರಗಳ ಪಟ್ಟಿ:

ಅತ್ಯುತ್ತಮ ಚಿತ್ರ-ಗಲ್ಲಿ ಬಾಯ್​

ವಿಮರ್ಶಕರ ಅತ್ಯುತ್ತಮ ಚಿತ್ರಗಳು -ಆರ್ಟಿಕಲ್​ 15 (ಅನುಭವ್​ ಸಿಂಹಾ) ಮತ್ತು ಸೋನ್ಚಿರಿಯಾ (ಅಭಿಷೇಕ್​ ಚೌಬೇ)

ಅತ್ಯುತ್ತಮ ನಟ: ರಣವೀರ್​ ಸಿಂಗ್​ (ಚಿತ್ರ-ಗಲ್ಲಿಬಾಯ್​)

ವಿಮರ್ಶಕರ ಅತ್ಯುತ್ತಮ ನಟ: ಆಯುಷ್ಮಾನ್​ ಖುರಾನಾ(ಆರ್ಟಿಕಲ್​ 15)

ಅತ್ಯುತ್ತಮ ನಟಿ: ಅಲಿಯಾ ಭಟ್​ (ಗಲ್ಲಿ ಬಾಯ್​)

ವಿಮರ್ಶಕರ ಅತ್ಯುತ್ತಮ ನಟಿ: ಭೂಮಿ ಪಡ್ನೇಕರ್​ (ಸಾಂಡ್​ ಕೀ ಆಂಖ್​)

ವಿಮರ್ಶಕರ ಅತ್ಯುತ್ತಮ ನಟಿ: ತಾಪ್ಸಿ ಪನ್ನು (ಸಾಂಡ್​ ಕೀ ಆಂಖ್​)

ಅತ್ಯುತ್ತಮ ನಿರ್ದೇಶಕಿ: ಜೋಯಾ ಅಕ್ತರ್​ (ಗಲ್ಲಿ ಬಾಯ್​)

ಅತ್ಯುತ್ತಮ ಪೋಷಕ ನಟ: ಸಿದ್ಧಾರ್ಥ್​ ಚತುರ್ವೇದಿ (ಗಲ್ಲಿ ಬಾಯ್​)

ಅತ್ಯುತ್ತಮ ಪೋಷಕ ನಟಿ: ಅಮೃತಾ ಸುಭಾಷ್​ (ಗಲ್ಲಿ ಬಾಯ್​)

ಅತ್ಯುತ್ತಮ ಸಾಹಿತ್ಯ, ಮ್ಯೂಸಿಕ್ ಆಲ್ಬಂ ಪ್ರಶಸ್ತಿಗಳೂ ಗಲ್ಲಿ ಬಾಯ್​ ಪಾಲಾಗಿವೆ. ಸ್ಟುಡೆಂಟ್​ ಆಫ್​ ದಿ ಇಯರ್​-2 ಸಿನಿಮಾದಲ್ಲಿ ಅಭಿನಯಿಸಿರುವ ಅನನ್ಯಾ ಪಾಂಡೆ ಅತ್ಯುತ್ತಮ ಉದ್ಯೋನ್ಮುಖ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net