

ಬೆಂಗಳೂರು: ಪ್ರಾರಂಭವಾಗಿ ಹಲವು ವರ್ಷಗಳ ನಂತರ ಕೊನೆಗೂ ‘ಡಾರ್ಲಿಂಗ್’ ಕೃಷ್ಣ ಮತ್ತು ಎಸ್ತರ್ ನರೋನ ಅಭಿನಯದ ‘ಲೋಕಲ್ ಟ್ರೖೆನ್’ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಏಪ್ರಿಲ್ ಒಂದರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರುದ್ರಮುನಿ ನಿರ್ದೇಶಿಸಿರುವ ಈ ಚಿತ್ರವನ್ನು ಸುಬ್ರಾಯ ವಾಳ್ಕೆ ನಿರ್ವಿುಸಿದ್ದಾರೆ. ಈ ಚಿತ್ರದ ಕಥೆ ರೈಲಿನಲ್ಲೇ ಸಾಗುತ್ತದಂತೆ.
ಈ ಕುರಿತು ಮಾತನಾಡುವ ಕೃಷ್ಣ, ‘ಬೆಂಗಳೂರಿಗೆ ಸುತ್ತಮುತ್ತಲಿನ ಊರಿನ ಜನರು ಕಾರ್ಯನಿಮಿತ್ತವಾಗಿ, ಓದಿನ ಸಲುವಾಗಿ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಆ ರೈಲಿನಲ್ಲಿಯೇ ನಮ್ಮ ಚಿತ್ರದ ಕಥೆ ಸಾಗುತ್ತದೆ. ಒಳ್ಳೆಯ ಆಕ್ಷನ್ ಸನ್ನಿವೇಶಗಳು ಮತ್ತು ಹಾಡುಗಳಿರುವ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ.