ಪಿಗ್ಗಿ ಹೊಸ ಚಿತ್ರ ಎಂಡಿಂಗ್​ ಥಿಂಗ್ಸ್​ : ಹಾಲಿವುಡ್​ನಲ್ಲಿ ಇನ್ನಷ್ಟು ಸಕ್ರಿಯ

priyanka
Published on

ಬಾಲಿವುಡ್​ ಬದಲು ಹಾಲಿವುಡ್​ನಲ್ಲಿಯೇ ಹೆಚ್ಚು ಸಕ್ರಿಯರಾಗಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. ಒಂದಾದ ಮೇಲೊಂದು ಇಂಗ್ಲೀಷ್​ ಚಿತ್ರಗಳಲ್ಲಿಯೇ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಆ ಸಾಲಿಗೆ ಮತ್ತೊಂದು ಹೊಸ ಸಿನಿಮಾ ಸೇರಿದೆ. ಅದರ ಹೆಸರು "ಎಂಡಿಂಗ್​ ಥಿಂಗ್ಸ್​'. ಹಾಲಿವುಡ್​ನ ಮಾರ್ವೆಲ್​ ಸ್ಟುಡಿಯೋಸ್​ನ ಸಿನಿಮಾಗಳ ಖ್ಯಾತಿಯ ಅಂಥೋನಿ ಮ್ಯಾಕಿ ಈ ಚಿತ್ರದಲ್ಲಿ ನಾಯಕನಾಗಿ ನಟಿಸಲಿದ್ದು, ಪಕ್ಕಾ ಆ್ಯಕ್ಷನ್​ ಶೈಲಿಯ ಚಿತ್ರ ಇದಾಗಿರಲಿದೆಯಂತೆ.

1994ರಲ್ಲಿ ತೆರೆಗೆ ಬಂದಿದ್ದ "ಟ್ರೂ ಲೈಸ್​' ಚಿತ್ರವನ್ನೇ ಸ್ಫೂತಿರ್ಯಾಗಿಸಿಕೊಂಡು ಈ ಚಿತ್ರ ಮೂಡಿಬರಲಿದೆ ಎಂಬ ವಿಚಾರವೂ ಬಯಲಾಗಿದೆ. ಮೂಲ ಚಿತ್ರದಲ್ಲಿ ಅರ್ನಾಲ್ಡ್​ ಮತ್ತು ಜೇಮಿ ಲೀ ಪ್ರಧಾನ ಪಾತ್ರದಲ್ಲಿದ್ದರು. ಇದೀಗ "ಎಂಡಿಂಗ್​ ಥಿಂಗ್ಸ್​'ನಲ್ಲಿ ಅಂಥೋನಿ, ಪ್ರಿಯಾಂಕಾ ಕಾಣಿಸಿಕೊಳ್ಳಲಿದ್ದಾರೆ. ಇವಿಷ್ಟು ವಿಚಾರಗಳನ್ನು ಹೊರತುಪಡಿಸಿದರೆ, ಈ ಚಿತ್ರದ ನಿರ್ದೇಶಕರ್ಯಾರು, ಇನ್ನುಳಿದ ಪಾತ್ರಧಾರಿಗಳು, ನಿರ್ಮಾಣ ಸಂಸ್ಥೆ ಯಾವುದು ಎಂಬುದಕ್ಕೆ ಇನ್ನಷ್ಟೇ ಉತ್ತರ ಬಹಿರಂಗವಾಗಬೇಕಿದೆ. ಕಳೆದ ವರ್ಷ ಪ್ರಿಯಾಂಕಾ ಅಭಿನಯದ "ದಿ ಮ್ಯಾಟ್ರಿಕ್ಸ್​ ರೀಸರಕ್ಷನ್ಸ್​ ' ಸಿನಿಮಾ ಬಿಡುಗಡೆ ಆಗಿತ್ತು. ಈಗ "ಟೆಕ್ಸ್​ ಫಾರ್‌ ಯೂ' ಚಿತ್ರವನ್ನು ಅವರು ಮುಗಿಸಿದ್ದಾರೆ. -ಏಜೆನ್ಸೀಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net