

ಬೆಂಗಳೂರು: ಈಗಾಗಲೇ ಮರಾಠಾ ದೊರೆ ಶಿವಾಜಿ ಕುರಿತು ಸಾಕಷ್ಟು ಸಿನಿಮಾಗಳನ್ನು ನೋಡಿದ್ದೇವೆ. ಪುಸ್ತಕಗಳಲ್ಲಿ ಓದಿದ್ದೇವೆ. ಆದರೆ, ಅದೇ ಶಿವಾಜಿಯ ಸೇನೆಯಲ್ಲಿ ತಾನಾಜಿ ಎಂಬ ವ್ಯಕ್ತಿ ಇದ್ದ ಎಂಬುದು ಯಾರಿಗೂ ಅಷ್ಟಾಗಿ ಗೊತ್ತಿಲ್ಲ. ಆ ತಾನಾಜಿಯ ಸಾಹಸ ಮತ್ತು ಆತನ ಚಾಕಚಕ್ಯತೆಯ ಬಗ್ಗೆ ಮೂಡಿ ಬಂದಿರುವ ಸಿನಿಮಾ ‘ತಾನಾಜಿ - ದಿ ಅನ್ಸಂಗ್ ವಾರಿಯರ್’. ಶಿವಾಜಿಯ ಗೆರಿಲ್ಲಾ ಯುದ್ಧದ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತು. ಆದರೆ, ಆ ಯುದ್ಧದ ಮಾಸ್ಟರ್ ಮೈಂಡ್ ತಾನಾಜಿ. ಇಡೀ ಸಿನಿಮಾ ಕೌತುಕವಾಗಿಯೇ ಸಾಗುತ್ತದೆ. ‘ಬಾಹುಬಲಿ’ ರೀತಿಯಲ್ಲಿ ಎಲ್ಲಿಯೂ ವೈಭವೀಕರಣ ಕೆಲಸ ಇಲ್ಲಾಗಿಲ್ಲ. ಡ್ರಾಮ್ಯಾಟಿಕ್ ಆಗಿ ಏನೆಲ್ಲ ಅಂಶಗಳನ್ನು ಸೇರಿಸಬೇಕಿತ್ತೋ ಅವೆಲ್ಲವುಗಳ ಸಾರ ಸಿನಿಮಾದಲ್ಲಿದೆ. ಜತೆಗೆ ಇಡೀ ಚಿತ್ರದ ಮತ್ತೊಂದು ಹೈಲೈಟ್ ಎಂದರೆ ಅದು ವಿಎಫ್ಎಕ್ಸ್. ತುಂಬ ನೈಜವಾಗಿ ವಿಎಫ್ಎಕ್ಸ್ ಬಳಕೆ ಮಾಡಿದ್ದಾರೆ. ಅಜಯ್ ದೇವಗನ್ ಅವರ ನಟನೆಯ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ.
| ಸುನಿ ನಿರ್ದೇಶಕ