ಬಾಲಿವುಡ್ ಅಂದ್ರೆ ಸಮಂತಾಗೆ ಭಯವಂತೆ!

IMG-20210524-WA0038
Published on

‘ದಿ ಫ್ಯಾಮಿಲಿ ಮ್ಯಾನ್ 2’ ಮೂಲಕ ಸಮಂತಾ, ಹಿಂದಿ ವೆಬ್​ಸೀರೀಸ್​ಗೇನೋ ಕಾಲಿಟ್ಟಿದ್ದಾರೆ. ಆದರೆ, ಅವರು ಬಾಲಿವುಡ್​ಗೆ ರೋದು ಯಾವಾಗ ಎಂಬ ಪ್ರಶ್ನೆ ಸಹಜವೇ.

ಏಕೆಂದರೆ, ಸಮಂತಾ ಇದುವರೆಗೂ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿದ್ದಾರಾದರೂ, ಇದುವರೆಗೂ ಯಾವುದೇ ಹಿಂದಿ ಚಿತ್ರಗಳಲ್ಲೂ ನಟಿಸಿಲ್ಲ. ಯಾಕೆ, ಅವಕಾಶ ಬಂದಿಲ್ಲವಾ? ಅಥವಾ ನಿಮಗೆ ಬಾಲಿವುಡ್​ಗೆ ಹೋಗುವುದಕ್ಕೆ ಇಷ್ಟವಿಲ್ಲವಾ? ಎಂಬ ಪ್ರಶ್ನೆಯನ್ನು ಯಾರೋ ಆಕೆಯ ಮುಂದಿಟ್ಟಿದ್ದಾರೆ.

ಇದಕ್ಕೆ ಸಮಂತಾ ಕೊಟ್ಟ ಉತ್ತರವೇನು ಗೊತ್ತಾ? ಭಯ. ಸಮಂತಾಗೆ ಬಾಲಿವುಡ್ ಕಂಡರೆ ಬಹಳ ಭಯವಂತೆ. ಯಾಕೆ ಎಂದರೆ, ‘ಅಲ್ಲಿ ಅದ್ಭುತ ಪ್ರತಿಭಾವಂತರಿದ್ದಾರೆ. ಹಾಗಾಗಿ ಭಯ’ ಎಂದು ಸಮಂತಾ ಹೇಳಿಕೊಂಡಿದ್ದಾರೆ. ಒಂದು ಪಕ್ಷ ಬಾಲಿವುಡ್​ನಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕರೆ ಯಾರ ಜತೆಗೆ ನಟಿಸುವುದಕ್ಕೆ ಇಷ್ಟಪಡುತ್ತೀರಾ ಎಂದರೆ, ರಣಬೀರ್ ಕಪೂರ್ ಎಂಬ ಉತ್ತರ ಅವರಿಂದ ಬರುತ್ತದೆ.

ಇನ್ನು, ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್​ಸರಣಿಯಲ್ಲಿ ಸಮಂತಾ, ಸೂಸೈಡ್ ಬಾಂಬರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸರಣಿಯು ತಮಿಳರ ಭಾವನೆಗೆ ಧಕ್ಕೆ ತರುವಂತಿದೆ ಎಂದು ಹಲವು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿ ಸಿದ್ದು, ಪ್ರದರ್ಶನಕ್ಕೆ ಅವಕಾಶ ಕೊಡಬಾರದು ಎಂದು ರಾಜ್ಯ ಸಭಾ ಸದಸ್ಯ ವೈಕೋ ಸಹ ಆಗ್ರಹಿಸಿದ್ದಾರೆ. ಈ ಸರಣಿಯು ಜೂನ್ 4ರಿಂದ ಅಮೇಜಾನ್​ನಲ್ಲಿ ಸ್ಟ್ರೀಮ್ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net