ಪ್ರಭಾಸ್ ಫ್ಯಾನ್ಸ್​ಗೆ ಗುಡ್​ನ್ಯೂಸ್; ಈ ದಿನದಂದು 'ಫೌಜಿ'ಸಿನಿಮಾ ರಿಲೀಸ್​​ ಆಗೋದು ಫಿಕ್ಸ್..Fauzi

ಫೌಜಿ ಸಿನಿಮಾದಲ್ಲಿ ಪ್ರಭಾಸ್ ಲುಕ್​​​
ಫೌಜಿ ಸಿನಿಮಾದಲ್ಲಿ ಪ್ರಭಾಸ್ ಲುಕ್​​​
Published on: 
  • ಫೌಜಿ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಿದ ಚಿತ್ರ ತಂಡ.

  • 2027 ಮಾರ್ಚ್ 19ರಂದು ಫೌಜಿ ಸಿನಿಮಾ ಬಿಡುಗಡೆ.

  • ಮಾತೃಭೂಮಿ ರಕ್ಷಕನಾಗಿ ಮಿಂಚಿದ ಡಾರ್ಲಿಂಗ್​​​ ಪ್ರಭಾಸ್.

ಡಾರ್ಲಿಂಗ್​​​, ಮಿಸ್ಟರ್​ ಪರ್ಫೆಕ್ಟ್​ ಪ್ರಭಾಸ್​​​​ ಸಿನಿಮಾಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಫೌಜಿ ಮತ್ತು ಕಲ್ಕಿ ಸಿನಿಮಾ ತಂಡ ಗುಡ್​ನ್ಯೂಸ್​ ಕೊಟ್ಟಿದೆ. ಅವರ 47ನೇ ಹುಟ್ಟುಹಬ್ಬದಂದೇ ಫೌಜಿ ಮತ್ತು ಕಲ್ಕಿ 2 ಸಿನಿಮಾ ತಂಡಗಳು ಬಿಗ್ ಅಪ್‌ಡೇಟ್ ನೀಡಿವೆ. ಫೌಜಿ ಸಿನಿಮಾದ ಟೀಸರ್​ ಮತ್ತು ರಿಲೀಸ್ ದಿನಾಂಕ ರಿವೀಲ್ ಮಾಡಲಾಗಿದ್ದು, ಜೊತೆಗೆ ಬಹುನಿರೀಕ್ಷಿತ ಕಲ್ಕಿ 2898 AD 2 ಸಿನಿಮಾದ ಬಗ್ಗೆಯೂ ಮಹತ್ವದ ಅಪ್‌ಡೇಟ್ ನೀಡುವ ಮೂಲಕ ಅಭಿಮಾನಿಗಳ ದೀರ್ಘ ಕಾಯುವಿಕೆಗೆ ತೆರೆ ಎಳೆದಿದೆ.

ಅ.23ರಂದು ಪ್ರಭಾಸ್​​ ಅವರ ಹುಟ್ಟುಹಬ್ಬದ ಸಲುವಾಗಿ ಫೌಜಿಯ ಮೊದಲ ನೋಟವನ್ನು ರಿಲೀಸ್​​ ಮಾಡಿದ್ದಾರೆ. ಅಲ್ಲದೆ, ಈ ಸಿನಿಮಾ 2027 ಮಾರ್ಚ್ 19ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಎಕ್ಸ್​ನಲ್ಲಿ ಹನು ರಾಘವಪುಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಟೀಸರ್​ನಲ್ಲಿ ಏನಿದೆ?

ಫೌಜಿ ಪ್ರೊಡಕ್ಷನ್​ ತಂಡ ಪೋಸ್ಟರ್​ ಜೊತೆಗೆ ಅಧಿಕೃತ ಟೀಸರ್​ ಹಂಚಿಕೊಂಡಿದೆ. ಇದರಲ್ಲಿ ಫೈಲ್ ನಂಬರ್ #25.. ಯಾರು ಆತ? ಎನ್ನುವಾಗ ಜರ್ಮನಿಯ ಬೆರ್ಲಿನ್, 1942ರ ಮೇ 29ರ ಕಥೆ ತೆರೆದುಕೊಳ್ಳುತ್ತದೆ. ​ 2 ನಿಮಿಷ 31 ಸೆಕೆಂಡ್ ಇರುವ​ ಟೀಸರ್​ನಲ್ಲಿ ಭಾರತದ ಮೇಲೆ ಬ್ರಿಟಿಷರ ಆಳ್ವಿಕೆ ಬಗ್ಗೆ ಬಿಚ್ಚಿಡಲಾಗಿದ್ದು, ಪಿರಂಗಿ ಹಿಡಿದು ಸಿಗರೇಟ್​ ಸೇದುವ ಖಡಕ್​ ಲುಕ್​ನಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಕೋಲ್ಕತ್ತಾ ಮೂಲದ ಸೈನಿಕನ ಪಾತ್ರ ನಿರ್ವಹಿಸಿದ್ದು, ಮಾತೃಭೂಮಿಯ ರಕ್ಷಕನಾಗಿ ಮಿಂಚಿದ್ದಾರೆ. 1932ರಿಂದ ಬೇಕಾಗಿರುವ "ಭಾರತದ ಅತಿದೊಡ್ಡ ಬಂಡಾಯ ಸೈನಿಕ"ನಾಗಿ ಅವರನ್ನು ಪರಿಚಯಿಸಲಾಗಿದೆ. "ಬ್ರಿಟಿಷರೇ, ನಾನು ನಿಮ್ಮ ರಕ್ತವನ್ನು ಹೀರಿಕೊಂಡು ನಿಮ್ಮಿಂದಲೂ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತೇನೆ" ಎನ್ನುವ ಪವರ್‌ಫುಲ್ ಡೈಲಾಗ್ ಟೀಸರ್‌ನ ಹೈಲೈಟ್ ಆಗಿದೆ.

ಪೋಸ್ಟರ್​​​ನಲ್ಲಿ ಏನಿದೆ?

ಹುಟ್ಟುಹಬ್ಬದ ಶುಭಾಷಯ ಪ್ರಭಾಸ್​ ಎಂದಿರುವ ಪೋಸ್ಟರ್​ನಲ್ಲಿ 1932 ರಿಂದ ಮೋಸ್ಟ್​ ವಾಂಟೆಡ್​ ಎಂಬ ಪದಗಳ ಜೊತೆಗೆ ಏಕಾಂಗಿಯಾಗಿ ಹೋರಾಡುವ ಬೆಟಾಲಿಯನ್ ಎಂಬ ಟ್ಯಾಗ್‌ಲೈನ್ ಇದೆ. ಚಿನ್ನದ ನಾಣ್ಯದ ಮೇಲೆ ಮಿಟಲಿರಿ ಡ್ರೆಸ್​ನಲ್ಲಿ ಪ್ರಭಾಸ್ ಭಾವಚಿತ್ರವಿದೆ. ನಾಣ್ಯದ ಸುತ್ತಲೂ ಅಗ್ನಿಯ ಜ್ವಾಲೆಯಿದ್ದು, ಬ್ರಿಟಿಷ್​ ಧ್ವಜವನ್ನು ಕಾಣಬುದಾಗಿದೆ.

ಹನು ರಾಘವಪುಡಿ ಆಕ್ಷನ್​ ಕಟ್​ ಹೇಳುತ್ತಿರುವ ಫೌಜಿ ಚಿತ್ರವು ಮೈತ್ರಿ ಮೂವಿ ಮೇಕರ್ಸ್ ನಿಂದ ನಿರ್ಮಾಣವಾಗಿರುವ ಸಿನಿಮಾವಾಗಿದೆ,. ಯೆರ್ನೇನಿ, ವೈ ರವಿಶಂಕರ್ ಮತ್ತು ಭೂಷಣ್ ಕುಮಾರ್ ಚಿತ್ರ ನಿರ್ಮಾಣದ ಹೊಣೆ ಹೊತ್ತಿದ್ದಾರೆ.

ಇಮಾನ್ವಿ ಇಸ್ಮಾಯಿಲ್, ಚೈತ್ರಾ ಜೆ ಆಚಾರ್​​, ಮಿಥುನ್​ ಚಕ್ರವರ್ತಿ, ಅನುಪಮ್ ಖೇರ್ ಮತ್ತು ಜಯಾಪ್ರದಾ ಸಿನಿಮಾದಲ್ಲಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲಯಾಳಂ, ಬೆಂಗಾಲಿ ಹಾಗೂ ಹಿಂದಿ ಭಾಷೆಗಳಲ್ಲಿ ಇದೇ ವರ್ಷನ್​​ನಲ್ಲಿ ಬಿಡುಗಡೆಯಾಗಲಿದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net