ಮಿಸ್ಟರ್​ ಪರ್ಫೆಕ್ಟ್​​​​​ ಆಮೀರ್​ ಖಾನ್​ಗೆ ಧರ್ಮ ಸಂಕಟ; ಮುಸ್ಲಿಮೇತರ ಮಹಿಳೆಯನ್ನು ವರಿಸಿದ್ದಕ್ಕೆ ಫತ್ವಾ ಹೊರಡಿಸಿದ ಮೌಲ್ವಿಗಳು!..Aamir Khan

Fatwa Issued Against Aamir Khan
Fatwa Issued Against Aamir Khan
Published on

ಪ್ರಮುಖ ಮುಖ್ಯಾಂಶಗಳು

  • ಇಸ್ಲಾಮೇತರ ಮಹಿಳೆಯನ್ನು ಮದುವೆಯಾಗಿದ್ದಕ್ಕೆ ನಟ ಆಮೀರ್ ಖಾನ್​ ವಿರುದ್ಧ ಫತ್ವಾ ಹೊರಡಿಸಿದ ಮೌಲ್ವಿಗಳು
  • ಮುಸ್ಲಿಮೇತರ ಮಹಿಳೆಯರನ್ನು ಮದುವೆ ಮಾಡಿಕೊಳ್ಳುವುದು ಇಸ್ಲಾಂನ ಪ್ರತಿಷ್ಠೆಗೆ ಹಾನಿ ಎಂದ ಮೌಲ್ವಿ
  • ಮುಸ್ಲಿಂ ದಾರುಲ್ ಇಫ್ತಾದ ಮುಖ್ಯಸ್ಥ ಮುಫ್ತಿ ಮೌಲಾನಾ ಇಬ್ರಾಹಿಂ ಹುಸೇನ್​ರಿಂದ ಫತ್ವಾ ಜಾರಿ
Fatwa Issued Against Aamir Khan: ಆಮೀರ್​ ಖಾನ್​ ಅವರು ಜುಲೈ 5ಕ್ಕೆ ತಮ್ಮ 61ನೇ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಉದ್ಯಮಿ ಹಾಗೂ ಹಿಂದೂ ಮಹಿಳೆ ಗೌರಿ ಸ್ಪ್ರಾಟ್​ ಜೊತೆಗೆ ಮದುವೆ ಮಾಡಿಕೊಂಡ ಬೆನ್ನಲ್ಲೇ ಅವರ ವಿರುದ್ಧ ಸಾಕಷ್ಟು ಚರ್ಚೆಗಳು ಹೆಚ್ಚಾಗಿದ್ದವು. ಒಂದೆಡೆ ವಯಸ್ಸಿನ ಬಗ್ಗೆಯಾದರೆ, ಮತ್ತೊಂದು ಕಡೆ ಮೂವರು ಹೆಂಡತಿಯರು ಹಿಂದೂಗಳೇ ಯಾಕೆ ಎನ್ನುವುದು. ಸದ್ಯ ಇದೇ ವಿಚಾರವು ಅವರನ್ನು ಈಗ ಇಕ್ಕಟ್ಟಿಗೆ ಸಿಲುಕಿಸಿದೆ,
ಹನಿಮೂನ್​ ಮೂಡ್​ನಲ್ಲಿರುವ ಮಿಸ್ಟರ್​ ಪರ್ಫೆಕ್ಟ್​​ ಆಮೀರ್​ ಖಾನ್​ ಅವರು ಸದ್ಯ ಮುಸ್ಲಿಮೇತರ ಮಹಿಳೆಯನ್ನು ವಿವಾಹವಾದ ಕಾರಣಕ್ಕಾಗಿ ಇಸ್ಲಾಮಿಕ್ ಸೆಮಿನರಿಯೊಂದು ನಟ ಅಮೀರ್ ಖಾನ್ ವಿರುದ್ಧ ಅಧಿಕೃತವಾಗಿ 'ಫತ್ವಾ ಹೊರಡಿಸಿದೆ

ಮೌಲ್ವಿ ಹೇಳಿದ್ದಿಷ್ಟು

ಇಸ್ಲಾಮಿಕ್​ ಭೋದನೆಗಳ ಪ್ರಕಾರ, ಮುಸ್ಲಿಮೇತರ ಮಹಿಳೆಯರನ್ನು ಮದುವೆಯಾಗುವುದು ಇಸ್ಲಾಮಿಕ್ ಶರಿಯತ್ ಕಾನೂನಿನ ಪ್ರಕಾರ ಅಪರಾಧ ಹಾಗೂ ನಿಷೇಧಿತ (ಹರಾಮ್) ಆಗಿದೆ. ಗೌರಿ ಸ್ಪ್ರ್ಯಾಟ್ ಅವರು ವಿವಾಹಕ್ಕೂ ಮುನ್ನ ಇಸ್ಲಾಂ ಧರ್ಮವನ್ನು ಸ್ವೀಕರಿಸದ ಕಾರಣ, ಈ ಮದುವೆಯನ್ನು ಇಸ್ಲಾಂ ಧರ್ಮದ ನಿಯಮಗಳ ಪ್ರಕಾರ ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಫತ್ವಾದಲ್ಲಿ ಉಲ್ಲೇಖಿಸಲಾಗಿದೆ.
ಮುಸ್ಲಿಮೇತರ ಮಹಿಳೆಯರನ್ನು ಮದುವೆಯಾಗುವ ಅನುಮತಿ ಇಲ್ಲ. ಇದು ಶರಿಯಾ ವಿರುದ್ಧವಾಗಿದೆ. ಹಾಗೆ ಮಾಡುವವರು ಅಲ್ಲಾಹ್​​ನ ಮುಂದೆ ಪಶ್ಚಾತಾಪ ಪಡಬೇಕು ಎಂದು ಮುಸ್ಲಿಂ ದಾರುಲ್ ಇಫ್ತಾದ ಮುಖ್ಯಸ್ಥ ಮುಫ್ತಿ ಮೌಲಾನಾ ಇಬ್ರಾಹಿಂ ಹುಸೇನ್ ಹೇಳಿದ್ದಾರೆ.

ಮುಸ್ಲಿಮೇತರ ಮಹಿಳೆಯರನ್ನು ಮದುವೆಯಾಗೋದು ಪಾಪ

ಮುಸ್ಲಿಮೇತರ ಮಹಿಳೆಯರನ್ನು ಮದುವೆ ಮಾಡಿಕೊಳ್ಳುವಂತಹ ನಿರ್ಧಾರಗಳು ಇಸ್ಲಾಂನ ಪ್ರತಿಷ್ಠೆಗೆ ಹಾನಿಯನ್ನುಂಟು ಮಾಡುತ್ತದೆ. ಇಸ್ಲಾಂ ಹೆಸರಿಗೆ ಕಳಂಕ ತರುತ್ತದೆ. ನಂಬಿಕಸ್ಥ ಮುಸ್ಲಿಂ ಯುವಕ ಮತ್ತೊಬ್ಬ ಇಸ್ಲಾಂ ಧರ್ಮವನ್ನು ನಂಬುವ ಮಹಿಳೆಯನ್ನು ಮದುವೆಯಾಗಬೇಕು. ಬೇರೆ ಧರ್ಮದವರನ್ನು ಮದುವೆಯಾದರೆ, ಅವರು ಈ ಧರ್ಮವನ್ನು ಸ್ವೀಕರಿಸುವವರೆಗೂ ಅನುಮತಿ ಇರೋದಿಲ್ಲ. ಮುಸ್ಲಿಮೇತರ ಮಹಿಳೆಯರನ್ನು ಮದುವೆಯಾಗೋದು ಪಾಪ ಎಂದು ಮುಸ್ಲಿಂ ದಾರುಲ್ ಇಫ್ತಾದ ಮುಖ್ಯಸ್ಥ ಮುಫ್ತಿ ಮೌಲಾನಾ ಇಬ್ರಾಹಿಂ ಹುಸೇನ್ ಹೇಳಿಕೊಂಡಿದ್ದಾರೆ.

ಮೂವರು ಹಿಂದೂ ಪತ್ನಿಯರು

ಆಮೀರ್​ ಖಾನ್​ ಅವರು ರೀನಾ ದತ್ತಾ, ಕಿರಣ್​ ರಾವ್​ ಹಾಗೂ ಗೌರಿ ಸ್ಪ್ರಾಟ್​ರನ್ನು ಇಲ್ಲಿಯವರೆಗೂ ಮದುವೆಯಾಗಿದ್ದಾರೆ. ಅವರ ಇಬ್ಬರು ಮಾಜಿ ಪತ್ನಿಯರು ಸಹ ಹಿಂದೂಗಳೇ ಆಗಿದ್ದ ಕಾರಣ ಭಾರಿ ವಿವಾದಕ್ಕೆ ಒಳಗಾಗಿದ್ದರು. ಅವರನ್ನು ಮದುವೆಯಾಗುವಾಗಲೂ ಧರ್ಮ ಬದಲಾವಣೆ ಬಗ್ಗೆ ಒತ್ತಾಯ ಹೇರದ ಕಾರಣ ಸದ್ಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಜುಲೈ5ರಂದು ಮದುವೆ

2026 ಜುಲೈ 5ರಂದು ಆಮೀರ್​ ಖಾನ್​ ಅವರು ಗೌರಿ ಸ್ಪ್ರಾಟ್​ ಜೊತೆಗೆ ಹಸೆಮಣೆ ಏರಿದರು. ಇವರ ಈ ಸರಳ ವಿವಾಹದಲ್ಲಿ ಮೊದಲ ಪತ್ನಿ ರೀನಾ ದತ್ತಾರ ಮಕ್ಕಳು, ಕಿರಣ್​ ರಾವ್​ ಅವರ ಮಗ ಹಾಗೂ ಗೌರಿ ಸ್ಪ್ರಾಟ್​ರ ಕೂಸು ಇತ್ತು. ಜೊತೆಗೆ ಆತ್ಮೀಯ ಸಂಬಂಧಿಕರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net