Ranabaali ಸಕ್ಸಸ್​ ಮೀಟ್​ನಲ್ಲಿ ವೇದಿಕೆಗೆ ನುಗ್ಗಿ ವಿಜಯ್​ ಕಾಲಿಗೆ ಬಿದ್ದ ಫ್ಯಾನ್ಸ್; 'ಎಂಥಾ ಗಿಮಿಕ್, ಒಳ್ಳೆ ಆಕ್ಟರ್​ ಗುರು' ಎಂದ ನೆಟ್ಟಿಗರು

Ranabaali ಸಕ್ಸಸ್​ ಮೀಟ್​ನಲ್ಲಿ ವೇದಿಕೆಗೆ ನುಗ್ಗಿ ವಿಜಯ್​ ಕಾಲಿಗೆ ಬಿದ್ದ ಫ್ಯಾನ್ಸ್; 'ಎಂಥಾ ಗಿಮಿಕ್, ಒಳ್ಳೆ ಆಕ್ಟರ್​ ಗುರು' ಎಂದ ನೆಟ್ಟಿಗರು
Published on: 
  • ರಣಬಾಲಿ ಸಕ್ಸಸ್​ ಮೀಟ್​ ಕಾರ್ಯಕ್ರಮದಲ್ಲಿ ವಿಜಯ್​ ಕಾಲಿಗೆ ಬಿದ್ದ ಫ್ಯಾನ್ಸ್​.

  • ಫ್ಯಾನ್ಸ್ ಕಾಲಿಗೆ ಬಿದ್ದ ತಕ್ಷಣ ಬೆಚ್ಚಿ ಬಿದ್ದ ವಿಜಯ್​, ಎಂಥಾ ನಟನೆ ಎಂದು ವ್ಯಂಗ್ಯ.

  • ನಟ ವಿಜಯ್​ ದೇವರಕೊಂಡ ವಿರುದ್ಧ ಟ್ರೋಲ್​ ಮಾಡಿದ ನೆಟ್ಟಿಗರು.

Ranabaali Success Meet: ರಣಬಾಲಿ ಸಕ್ಸಸ್​ ಮೀಟ್​ ಕಾರ್ಯಕ್ರಮದಲ್ಲಿ ನಟ ವಿಜಯ್​ ದೇವರಕೊಂಡ ಮಾತನಾಡುತ್ತಿದ್ದ ವೇಳೆ ವೇದಿಕೆ ಮೇಲೆ ಓಡುತ್ತ ಬಂದ ಫ್ಯಾನ್ಸ್ ಅವರ ಕಾಲಿಗೆ ಬಿದ್ದರು. ಈ ವಿಡಿಯೋ ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದ್ದು, 'ಎಂಥಾ ಗಿಮಿಕ್​ ಬಳಕೆ ಮಾಡ್ತೀರಾ?, ಇಂತಹ ಪ್ರಚಾರಕ್ಕೆ ಒಂದು ಲಿಮಿಟ್​ ಇರಬೇಕು ಅಲ್ಲವೇ' ಎಂದು ಕಾಲೆಳೆದಿದ್ದಾರೆ ನೆಟ್ಟಿಗರು.

ರಾಯಲಸೀಮದಲ್ಲಿ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟನೆಯ ರಣಬಾಲಿ ಸಿನಿಮಾದ ಸಕ್ಸಸ್​​ ಮೀಟ್​ ಕಾರ್ಯದಲ್ಲಿ ದೇವರಕೊಂಡ ಮಾತನಾಡುತ್ತಿದ್ದರು. ಈ ವೇಳೆ ಏಕಾಏಕಿ ನುಗ್ಗಿದ ಫ್ಯಾನ್ಸ್ ಅವರ ಕಾಲಿಗೆ ಬಿದ್ದರು, ವಿಜಯ್​ ಅವರನ್ನು ನೋಡಿ ಹೌಹಾರಿದರು. ನಂತರ ರಕ್ಷಣಾ ಪಡೆ ಯುವಕರನ್ನು ಸ್ಟೇಜ್​ನಿಂದ ಎಳೆದುಕೊಂಡು ತೆರಳಿತು. ಈ ಕಾರ್ಯಕ್ರಮಕ್ಕೆ ರಶ್ಮಿಕಾ ಮಂದಣ್ಣ ಕಾರಣಾಂತರದಿಂದ ಗೈರಾಗಿದ್ದರು.

ಕರಣ್​ ಜೋಹರ್​ ಟಾಕ್​ ಶೋ ವಿಡಿಯೋ ಟ್ರೋಲ್

ಈಗಾಗಲೇ ರಶ್ಮಿಕಾ ಮತ್ತು ವಿಜಯ್​ ದೇವರಕೊಂಡ ಅವರು ಕಾಫಿ ವಿತ್​ ಕರಣ್​ ಜೋಹರ್​ ಟಾಕ್​ ಶೋದಲ್ಲಿ ಮಾತನಾಡಿರುವ ವಿಡಿಯೋ ಕ್ಲಿಪ್​ಗಳು ಭಾರಿ ಟೀಕೆಗೆ ಗುರಿಯಾಗಿದೆ. ನೂರು ಬಾರಿ ರಶ್ಮಿಕಾ ನನ್ನನ್ನು ಮದುವೆಯಾಗು ಎಂದು ಕೇಳಿದ್ದಳು ಎಂದಾಗ...ಇಲ್ಲ ನಾನು ಇಡೀ ವರ್ಷ ಕೇಳಿದ್ದೆ ಎಂದು ರಶ್ಮಿಕಾ ಹೇಳಿರುವುದು ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿತ್ತು.

'ಇಡೀ ಟಾಕ್​ಶೋನಲ್ಲಿ ವಿಜಯ್​ ದೇವರಕೊಂಡಗೆ ಅವರ ಮೇಲೆ ಪ್ರೀತಿಯೇ ಕಂಡಿಲ್ಲ. ಇಷ್ಟು ದೊಡ್ಡ ವೇದಿಕೆಯಲ್ಲಿ ಅಂತಹ ಹೇಳಿಕೆ ನೀಡಬಾರದಿತ್ತು. ಇಬ್ಬರು ಕ್ರಿಂಜ್​ ಎನಿಸುವಂತೆ ಮಾತನಾಡಿದ್ದಾರೆ. ವಿಜಯ್​ ದೇವರಕೊಂಡ ಅವರು ರಶ್ಮಿಕಾರನ್ನು ರೂಲ್ ಮಾಡ್ತಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಾ' ಎಂದು ಕೆಲವರು ಕಿಡಿಕಾರಿದ್ದರು. ಸದ್ಯ ಈಗ ಮತ್ತೊಂದು ಟ್ರೋಲ್​ಗೆ ನಟ ವಿಜಯ್​ ದೇವರಕೊಂಡ ಗುರಿಯಾಗಿದ್ದಾರೆ.

ನೆಟ್ಟಿಗರಿಂದ ಟೀಕೆ ವ್ಯಕ್ತ

ವಿಜಯ್​ ದೇವರಕೊಂಡ ಫ್ಯಾನ್ಸ್​ಗೆ ಇದು ಅವಿಸ್ಮರಣೀಯ ಕ್ಷಣವಾಗಿ ಮಾರ್ಪಟ್ಟರೆ ಇನ್ನೂ ನೋಡುಗರಿಗೆ ಇದು ಪ್ರಚಾರದ ಗಿಮಿಕ್​ ಎನಿಸಿದೆ. ಎಕ್ಸ್​​ ಸೇರಿದಂತೆ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋಗಳನ್ನು ಹಂಚಿಕೊಂಡು "ಸಂಭಾವನೆ ಹೆಚ್ಚೆ ಕೊಟ್ಟಂತೆ ಕಾಣುತ್ತೆ ಎಂದು ಲೇವಡಿ ಮಾಡಿದ್ದಾರೆ.

ಇನ್ನೂ ಕೆಲವರು, ಆ ಈಗ ಅರ್ಥವಾಯಿತು ಜೀವನದಲ್ಲಿ ಕಂಪ್ಲೀಟ್ ಆಕ್ಟರ್ ಇವ್ರೆ ಎಂಥಾ ನಟನೆ, ಫ್ಯಾನ್ಸ್​ ಬಂದು ಕಾಲಿಗೆ ಬಿದ್ದ ತಕ್ಷಣ ಈತ ಇವನು ಬೆಚ್ಚಿಬೀಳುತ್ತಾರೆ, ಎಂಥಾ ಆಕ್ಟರ್​...ಕಂಪ್ಲೀಟ್​ ಕಲಾವಿದ ಎಂದು ಟೀಕೆ ಮಾಡಿದ್ದಾರೆ. ಯಾಕ್ರಪ್ಪ ನಿಮಗೆ ಈ ನಟನ ಕಂಡರೆ ಅಷ್ಟೊಂದು ಕ್ರೇಜ್ ಎಂದು ಲೇವಡಿ ಮಾಡಿದ್ದರೆ, ಇನ್ನೂ ಕೆಲವರು ಡೈ ಹಾರ್ಡ್​ ಫ್ಯಾನ್ಸ್ ಎಂದು ಕೊಂಡಾಡಿದ್ದಾರೆ.

ರಣಬಾಲಿ ಸಿನಿಮಾ ಬಗ್ಗೆ

ರಣಬಾಲಿ ಸಿನಿಮಾವು ದಸರಾ ವೇಳೆ, ಅ.16ರಂದು ಭರ್ಜರಿ ತೆರೆ ಕಂಡಿತ್ತು. ಸಿನಿಮಾ ರಿಲೀಸ್ ಆದ ಎಂಟು ದಿನಕ್ಕೆ 66.45 ಕೋಟಿ ಗಳಿಕೆ ಕಂಡಿದೆ. ಡಿಯರ್​ ಕಾಮ್ರೆಡ್ ಮತ್ತು ಗೀತಾ ಗೋವಿಂದಂ ನಂತರ ಇಬ್ಬರು ಒಟ್ಟಾಗಿ ನಟಿಸಿದ್ದ ಸಿನಿಮಾ ಇದಾಗಿದೆ. ಕತೆ ನಿರೂಪಣೆ ಸ್ಲೋ ಆಗಿದೆ. ಸಿನಿಮಾ ನೋಡಲು ತಾಳ್ಮೆ ಬೇಡುತ್ತದೆ. ವಿಜಯ್​ ದೇವರಕೊಂಡ ಅವರ ನಟನೆ ಮತ್ತು ರಶ್ಮಿಕಾ ಜೊತೆಗಿನ ಭಾವನಾತ್ಮಕ ಕ್ಷಣಗಳು ನೋಡುಗರಿಗೆ ಕಣ್ಣೀರು ತರಿಸಲ್ಲ. ಭಾವನಾತ್ಮಕವಾಗೊ ಒಳಗೊಳ್ಳುವಂತೆ ಮಾಡೋದಿಲ್ಲ ಎನ್ನುವ ಟೀಕೆ ವ್ಯಕ್ತವಾಗಿತ್ತು, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net