ಉದಯ್​ ಕಿರಣ್​ ಕೇಸ್​ನ ತನಿಖೆಯನ್ನೂ ಸಿಬಿಐಗೆ ವಹಿಸಿ ...

Uday - Sushant
Published on

ಕಳೆದ ವಾರವಷ್ಟೇ ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಅವರ ಸಾವಿನ ಪ್ರಕರಣವನ್ನು ಸುಪ್ರೀಂ ಕೋರ್ಟ್​, ಸಿಬಿಐಗೆ ವಹಿಸಿತ್ತು. ಸಿಬಿಐ ಈ ಪ್ರಕರಣದ ಕುರಿತು ಈಗಾಗಲೇ ತನಿಖೆ ಆರಂಭಿಸಿದೆ. ಈ ಮಧ್ಯೆ, ಉದಯ್​ ಕಿರಣ್​ ಅಭಿಮಾನಿಗಳು ಸಹ ತಮ್ಮ ನೆಚ್ಚಿನ ನಟನ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ತೆಲುಗು ನಟ ಉದಯ್​ ಕಿರಣ್​ 2014ರಲ್ಲಿ ಆತ್ಮಹತ್ಯೆ ಮಾಡಿಕೊಂಡು ನಿಧನರಾದರು. ಅವರ ಸಾವಿಗೆ ನಿಖರವಾದ ಕಾರಣವೇನು ಎಂದು ತಿಳಿಯದಿದ್ದರೂ, ನೆಪೋಟಿಸಂ ಮತ್ತು ಟಾಲಿವುಡ್​ ಮಾಫಿಯಾ ಕಾರಣ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ:

ಉದಯ್​ ಕಿರಣ್​ ಅವರು ಕೆಲವು ವರ್ಷಗಳ ಹಿಂದೆ ತೆಲುಗಿನಲ್ಲಿ ಜನಪ್ರಿಯ ನಟರಾಗಿ ಗುರುತಿಸಿಕೊಂಡಿದ್ದರು. ಈ ಮಧ್ಯೆ, ಅವರ ಎಂಗೇಜ್​ಮೆಂಟ್​ 'ಮೆಗಾ ಸ್ಟಾರ್​' ಚಿರಂಜೀವಿ ಅವರ ಮಗಳ ಜತೆಗೆ ಆಯಿತು. ಇನ್ನೇನು ಇಬ್ಬರೂ ಸಪ್ತಪದಿ ತುಳಿಯಬೇಕು ಎನ್ನುವಷ್ಟರಲ್ಲಿ, ಈ ಎಂಗೇಜ್​ಮೆಂಟ್​ ಮುರಿದುಬಿದ್ದು, ಇಬ್ಬರೂ ದೂರವಾದರು.

ಇಬ್ಬರೂ ದೂರವಾಗುವುದಕ್ಕೆ ನಿಖರವಾದ ಕಾರಣವೇನು ಎಂದು ಬಹಿರಂಗವಾಗದಿದ್ದರೂ, ಆ ನಂತರ ಉದಯ್​ ಕಿರಣ್​ಗೆ ತೆಲುಗು ಚಿತ್ರರಂಗದಲ್ಲಿ ಅವಕಾಶಗಳು ಕ್ರಮೇಣ ಕಡಿಮೆಯಾಗತೊಡಗಿದವು. ಕೊನೆಗೆ ಡಿಪ್ರೆಶನ್​ನಿಂದ ಉದಯ್​ ಕಿರಣ್​ ಅವರು 2014ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೆಲ್ಲಾ ಕಾರಣ, ಚಿರಂಜೀವಿ ಅವರೇ ಕಾರಣ ಎಂದು ಹೇಳಲಾಯಿತು ಮತ್ತು ಕೆಲವು ದಿನಗಳ ನಂತರ ಪ್ರಕರಣ ಕ್ರಮೇಣ ತಣ್ಣಗಾಯಿತು.

ಇದನ್ನೂ ಓದಿ:

ಈಗ ಸುಶಾಂತ್​ ಸಿಂಗ್​ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿರುವ ಹಿನ್ನೆಲೆಯಲ್ಲಿ, ಉದಯ್​ ಕಿರಣ್​ ಅವರ ಆತ್ಮಹತ್ಯೆ ಪ್ರಕರಣವನ್ನೂ ಸಿಬಿಐಗೆ ಒಪ್ಪಿಸಬೇಕು ಎಂದು ಅವರ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಈ ವಿಷಯವಾಗಿ ಜಸ್ಟೀಸ್​ ಫಾರ್​ ಉದಯ್​ ಕಿರಣ್​ ಎಂಬ ಅಭಿಯಾನವನ್ನೇ ಸೋಷಿಯಲ್ ಮೀಡಿಯಾದಲ್ಲಿ ಪ್ರಾರಂಭಿಸಿದ್ದಾರೆ.

ನೆಪೋಟಿಸಂ ಎನ್ನುವುದು ಟಾಲಿವುಡ್​ನಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದು ಉದಯ್​ ಕಿರಣ್​ ಸಹ ಅದಕ್ಕೆ ಬಲಿಯಾಗಿದ್ದಾರೆ ಎಂಬ ಕೆಲವರು ಹೇಳಿದರೆ, ಇನ್ನೂ ಕೆಲವರು ಮೆಗಾ ಮಾಫಿಯಾದಿಂದ ಉದಯ್​ ಪ್ರಾಣಬಿಟ್ಟರು ಎಂದು ಹೇಳಿಕೊಂಡಿದ್ದಾರೆ. ಒಟ್ಟಾರೆ ಸುಶಾಂತ್​ಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net