83 ಟೀಮ್ ಪೋಸ್ಟರ್​ಗೆ ಫ್ಯಾನ್ಸ್ ಮೆಚ್ಚುಗೆ; ಇಂಚಿಂಚೂ ಮರುಸೃಷ್ಟಿ ಮಾಡಿದ ಕಬೀರ್ ಖಾನ್​

Kaali taare 26 Jan 20
Published on

ಬೆಂಗಳೂರು: ಭಾರತ ತಂಡದ ಮೊಟ್ಟಮೊದಲ ಕ್ರಿಕೆಟ್ ವಿಶ್ವಕಪ್ ಗೆಲುವಿನ ಕುರಿತಾಗಿ ಬಾಲಿವುಡ್​ನಲ್ಲಿ ‘83’ ಹೆಸರಿನ ಸಿನಿಮಾ ನಿರ್ಮಾಣ ವಾಗುತ್ತಿರುವುದು ಈಗಾಗಲೇ ತಿಳಿದಿದೆ. ಈಗಾಗಲೇ ಶೂಟಿಂಗ್ ಮುಗಿದಿರುವ ಕಬೀರ್ ಖಾನ್ ನಿರ್ದೇಶನದ ಸಿನಿಮಾದ ಮೊದಲ ಪೋಸ್ಟರ್ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದೆ. ಇದರಲ್ಲಿ ಸಂಪೂರ್ಣ ಟೀಮ್ ಪೋಸ್ಟರ್ ಹೆಚ್ಚಾಗಿ ಗಮನಸೆಳೆಯುತ್ತಿದೆ. ಕಡುನೀಲಿ ಬಣ್ಣದ ಬ್ಲೇಜರ್ ಧರಿಸಿ 15 ಜನ ಸದಸ್ಯರು ಇರುವ (6 ಜನರು ಕುಳಿತಂತೆ) ಪೋಸ್ಟರ್ ಬಿಡುಗಡೆ ಮಾಡಲಾಗಿದೆ. 1983ರ ವಿಶ್ವಕಪ್​ನ ವಿಜೇತ ತಂಡದ

ಸದಸ್ಯರು ಇದೇ ರೀತಿ ತೆಗೆಸಿಕೊಂಡಿರುವ ಚಿತ್ರದಂತೆ ಇಂಚಿಂಚೂ ಮರುಸೃಷ್ಟಿ ಮಾಡಲಾಗಿದೆ. ಮೂಲ ಚಿತ್ರದಲ್ಲಿ ಕಪಿಲ್ ದೇವ್ ಫೋಟೋದ ಒಂದು ಕಡೆ ನೋಡುತ್ತಿರುವಂತೆ ಕಾಣುತ್ತದೆ. ಅದೇ ರೀತಿಯಲ್ಲಿ 83 ಸಿನಿಮಾದಲ್ಲಿ ಕಪಿಲ್ ಪಾತ್ರ ಮಾಡುತ್ತಿರುವ ರಣವೀರ್ ಸಿಂಗ್ ಕೂಡ ಅದೇ ಕಡೆ ನೋಡುತ್ತಿರುವಂತೆ ಕುಳಿತಿದ್ದಾರೆ. ಮೂಲ ಚಿತ್ರದೊಂದಿಗೆ ಬಹುತೇಕ ಸಾಮ್ಯತೆ ಹೊಂದಿರುವಂತೆ ವಿನ್ನಿಂಗ್ ಟೀಮ್ ಚಿತ್ರದ ಪೋಸ್ಟರ್​ಅನ್ನು ಬಿಡುಗಡೆ ಮಾಡಲಾಗಿದೆ. ಅದರೊಂದಿಗೆ ಚಿತ್ರದ ಮೋಷನ್ ಪೋಸ್ಟರ್ ಅನ್ನೂ ಬಿಡುಗಡೆ ಮಾಡಲಾಗಿದ್ದು, ತಂಡದ 13 ಸದಸ್ಯರ ಟ್ರೇಡ್ ಮಾರ್ಕ್ ವಿಶ್ವಕಪ್ ಶಾಟ್​ಅನ್ನು ಇಲ್ಲಿ ಚಿತ್ರಿಸಲಾಗಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net