ಕೋರ್ಟ್‌ನಲ್ಲೇ ಕ್ಷಮೆ ಕೇಳಿದ ನಟ ಜಯಂ ರವಿ! ಅಷ್ಟಕ್ಕೂ ಪತ್ನಿ ಆರತಿ ಹೂಡಿದ ಹೊಸ ಕಾನೂನು ಸಮರವೇನು? Ravi Mohan

ಕೋರ್ಟ್‌ನಲ್ಲೇ ಕ್ಷಮೆ ಕೇಳಿದ ನಟ ಜಯಂ ರವಿ! ಅಷ್ಟಕ್ಕೂ ಪತ್ನಿ ಆರತಿ ಹೂಡಿದ ಹೊಸ ಕಾನೂನು ಸಮರವೇನು? Ravi Mohan
ಕೋರ್ಟ್‌ನಲ್ಲೇ ಕ್ಷಮೆ ಕೇಳಿದ ನಟ ಜಯಂ ರವಿ! ಅಷ್ಟಕ್ಕೂ ಪತ್ನಿ ಆರತಿ ಹೂಡಿದ ಹೊಸ ಕಾನೂನು ಸಮರವೇನು? Ravi Mohan
Published on

ಪ್ರಮುಖ ಮುಖ್ಯಾಂಶಗಳು

  • ಕಾಲಿವುಡ್​ ನಟ ರವಿ ಮೋಹನ್​ ಹಾಗೂ ಪತ್ನಿ ಆರತಿ ರವಿ ವಿಚ್ಛೇದನ ಪ್ರಕರಣ
  • ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಕಳೆದೊಂದು ವರ್ಷದಿಂದ ನಡೆಯುತ್ತಿರುವ ಡಿವೋರ್ಸ್​ ಕೇಸ್​
  • ಆದೇಶ ಉಲ್ಲಂಘಿಸಿದ್ದಕ್ಕೆ ನ್ಯಾಯಾಲಯದ ಮೆಟ್ಟಿಲಲ್ಲೇ ಕ್ಷಮೆಯಾಚಿಸಿದ ನಟಿ ರವಿ ಮೋಹನ್​
Ravi Mohan : ನಟ ರವಿ ಮೋಹನ್ ಮತ್ತು ಅವರ ಪತ್ನಿ ಆರತಿ ಅವರು ವೈವಾಹಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಪ್ರಸ್ತುತ ಪರಸ್ಪರ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಇವರ ವಿಚ್ಛೇದನ ಪ್ರಕರಣವು ಸದ್ಯ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಉಳಿದಿದೆ. ಸದ್ಯ ಕಾನೂನು ಪ್ರಕ್ರಿಯೆಗಳು ನಡೆಯುತ್ತಿದೆ. ಇದರ ನಡುವೆ ರವಿ ಮೋಹನ್​ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ಅಷ್ಟಕ್ಕೂ ರವಿ ಕ್ಷಮೆಯಾಚಿಸಲು ಕಾರಣ ಏನೆಂದರೆ, ರವಿ ಮತ್ತು ಆರತಿ ನಡುವಿನ ವೈಯಕ್ತಿಕ ಭಿನ್ನಾಭಿಪ್ರಾಯಗಳು ಹಾಗೂ ಆರೋಪ-ಪ್ರತ್ಯಾರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯ ವಿಷಯವಾಗಿದೆ. ಈ ರೀತಿಯ ಸಾರ್ವಜನಿಕ ಹಸ್ತಕ್ಷೇಪ ಮತ್ತು ಪರಸ್ಪರ ನಿಂದನೆಗಳಿಗೆ ತಡೆ ನೀಡಬೇಕೆಂದು ಕೋರಿ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದು, ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿದ ನ್ಯಾಯಾಲಯವು ಇಬ್ಬರೂ ತಮ್ಮ ವೈಯಕ್ತಿಕ ವಿಷಯಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳದಂತೆ ಆದೇಶಿಸಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಕಳೆದ ವರ್ಷದ ಮೇ ತಿಂಗಳಲ್ಲಿ, "ವಿಚ್ಛೇದನದ ಕುರಿತು ಇಬ್ಬರೂ ಸಾರ್ವಜನಿಕವಾಗಿ ಯಾವುದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಾರದು" ಎಂದು ಕಟ್ಟುನಿಟ್ಟಿನ ತಡೆಯಾಜ್ಞೆ ನೀಡಿತ್ತು. ಆದರೆ, ಈ ನ್ಯಾಯಾಲಯದ ನಿಷೇಧದ ಹೊರತಾಗಿಯೂ, ನಟ ರವಿ ಮೋಹನ್ ಅವರು ಇತ್ತೀಚೆಗೆ ಮಾಧ್ಯಮಗಳನ್ನು ಭೇಟಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಅವರ ಪತ್ನಿ ಆರತಿ, ಮದ್ರಾಸ್ ಹೈಕೋರ್ಟ್‌ನಲ್ಲಿ ಹೊಸ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ತಮ್ಮ ಅರ್ಜಿಯಲ್ಲಿ, ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿರುವ ರವಿ ಮೋಹನ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.
ಆರತಿ ಅವರು ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ, ನಟ ರವಿ ಮೋಹನ್ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರತಿ-ಅರ್ಜಿಯೊಂದನ್ನು ದಾಖಲಿಸಿದ್ದಾರೆ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ತಾವು ನಡೆದುಕೊಂಡಿರುವುದಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವುದಾಗಿ ಹಾಗೂ ಈ ಸಾರ್ವಜನಿಕ ಕ್ಷಮಾಪಣೆಯನ್ನು ಮುಕ್ತವಾಗಿ ವ್ಯಕ್ತಪಡಿಸಲು ತಾವು ಸಿದ್ಧರಾಗಿರುವುದಾಗಿ ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ತಮ್ಮ ಅಫಿಡವಿಟ್‌ನಲ್ಲಿ ಮುಂದುವರಿದು ಬರೆದುಕೊಂಡಿರುವ ಅವರು, "ನನ್ನ ಹೇಳಿಕೆಗಳಿಂದ ಹಾಗೂ ನಡವಳಿಕೆಯಿಂದ ಯಾರೆಲ್ಲರ ಮನಸ್ಸಿಗೆ ನೋವಾಗಿದೆಯೋ ಅಥವಾ ಯಾರಿಗೆಲ್ಲ ಇದರಿಂದ ತೊಂದರೆಯಾಗಿದೆಯೋ, ಅವರೆಲ್ಲರಿಗೂ ನಾನು ನನ್ನ ತೀವ್ರ ವಿಷಾದ ಮತ್ತು ಹೃತ್ಪೂರ್ವಕ ಕ್ಷಮೆಯನ್ನು ಅರ್ಪಿಸುತ್ತೇನೆ" ಎಂದು ಅತ್ಯಂತ ನಮ್ರತೆಯಿಂದ ಉಲ್ಲೇಖಿಸಿದ್ದಾರೆ.
ನಟ ರವಿ ಮೋಹನ್ ಅವರ ಈ ಲಿಖಿತ ಕ್ಷಮಾಪಣೆಯನ್ನು ದಾಖಲಿಸಿಕೊಂಡ ಮದ್ರಾಸ್ ಹೈಕೋರ್ಟ್, ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಅವರು ಪತ್ರಿಕೆಗಳ ಮೂಲಕ ಅಧಿಕೃತವಾಗಿ ಸಾರ್ವಜನಿಕ ಕ್ಷಮಾಪಣೆಯನ್ನು ಪ್ರಕಟಿಸಬೇಕು ಎಂದು ಆದೇಶಿಸಿದೆ. ಅಲ್ಲದೆ, ವಿಚ್ಛೇದನ ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಇರುವಾಗ ಇಬ್ಬರೂ ಸಾರ್ವಜನಿಕವಾಗಿ ಅಥವಾ ಮಾಧ್ಯಮಗಳ ಮುಂದೆ ಯಾವುದೇ ಅನಗತ್ಯ ಕಾಮೆಂಟ್‌ಗಳನ್ನು ಮಾಡಬಾರದು ಎಂದು ಉಭಯ ಪಕ್ಷಗಳಿಗೂ ಕಟ್ಟುನಿಟ್ಟಿನ ಬುದ್ಧಿವಾದ ಹೇಳಿ, ಈ ಅರ್ಜಿಯ ವಿಚಾರಣೆಯನ್ನು ಮುಕ್ತಾಯಗೊಳಿಸಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net