ವಶು ಭಗ್ನಾನಿ ನಿರ್ದೇಶಿಸಿರುವ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಸಿನಿಮಾದಲ್ಲಿ ವರುಣ್ ಧವನ್ ಮತ್ತು ಪೂಜಾ ಹೆಗ್ಡೆ ಹಾಗೂ ಮೃಣಾಲ್ ಠಾಕೂರ್ ನಟಿಸಿದ್ದಾರೆ. ಈ ಸಿನಿಮಾ ಜೂನ್ 5ರಂದು ದೇಶದಾದ್ಯಂತ ರಿಲೀಸ್ ಆಗಲಿದೆ. ಇದಕ್ಕೂ ಮುನ್ನವೇ ಸಿನಿಮಾದಲ್ಲಿ ತರಲಾದ 'ಚುನ್ನಾರಿ ಚುನ್ನಾರಿ' ಹಾಡಿನ ಹೊಸ ವರ್ಷನ್ ಬಗ್ಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.
ಸಲ್ಮಾನ್ ಖಾನ್ ಹಾಡು ಕಾಪಿ
1999ರಲ್ಲಿ ರಿಲೀಸ್ ಆಗಿದ್ದ ಬೀವಿ ನಂ.1 ಸಾಕಷ್ಟು ಹಿಟ್ ಕಂಡಿತ್ತು, ಚಿತ್ರದ ಪ್ರಸಿದ್ಧ ಹಾಡು 'ಚುನ್ನರಿ ಚುನ್ನರಿ' ಯನ್ನು ಈಗ ಮರುಸೃಷ್ಟಿಸಲಾಗಿದೆ. ಈ ಬಗ್ಗೆ ಸಿನಿ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಹಳೆಯ ಹಾಡು ಒಂದು ಮೆಮೋರಿ ಹಾಗೂ ಎಮೋಷನ್ ಅದನ್ನು ಸಂಪೂರ್ಣವಾಗಿ ಕೆಡಿಸಲಾಗಿದೆ' ಎಂದು ಹೇಳಿದ್ದಾರೆ
ನೆಟ್ಟಿಗರ ವಾದವೇನು?
'ಒರಿಜಿನಲ್ ಹಾಡು ಚೆನ್ನಾಗಿತ್ತು. ಈ ಹೊಸ ವರ್ಷನ್ ಹಳೆಯ ಹಾಡನ್ನು ಪರಿಪೂರ್ಣವಾಗಿ ಹಾಳು ಮಾಡಲಾಗಿದೆ.ಹಳೆಯ 'ಚುನ್ನಾರಿ ಚುನ್ನಾರಿ' ಹಾಡು ಅದ್ಭುತವಾಗಿತ್ತು. ಪ್ರತಿಯೊಂದನ್ನು ಕಾಪಿ ಮಾಡುವ ಅಗತ್ಯವಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ಪ್ರತಿಯೊಂದು ಮಾಸ್ಟರ್‌ಪೀಸ್‌ಗೂ ಒಂದು ಚೀಪ್ ಕಾಪಿ ಬುದ್ಧಿ ಇರುತ್ತದೆ' ಎಂದು ನೆಟ್ಟಿಗರೊಬ್ಬರು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡು ನಿರ್ದೇಶಕರ ನಡೆ ವಿರುದ್ಧ ಕಿಡಿಕಾರಿದ್ದಾರೆ.
ರವಿ ಚೌಧರಿ ಎನ್ನುವವರು ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದು, 'ಒರಿಜಿನಲ್ 'ಚುನ್ನಾರಿ ಚುನ್ನಾರಿ' ಹಾಡಿನ ಮ್ಯಾಜಿಕ್, ಕ್ರೇಜ್ ಮತ್ತು ಸಾರ್ವಕಾಲಿಕ ಪ್ರೀತಿಯನ್ನು ಮರುಸೃಷ್ಟಿಸಲು ಈ ಹೊಸ ವರ್ಷದ ಹಾಡು ವಿಫಲವಾಗಿದೆ. ಹಳೆಯ ಹಾಡಿನಲ್ಲಿ ಸಾಟಿಯಿಲ್ಲದ ಎನರ್ಜಿ ಮತ್ತು ಐಕಾನಿಕ್ ಆಕರ್ಷಣೆ ಇತ್ತು, ಆದರೆ ಈ ಹೊಸ ವರ್ಷನ್ ತನ್ನದೇ ಆದ ಸೃಜನಶೀಲತೆಯಿಂದ ನೆನಪಿನಲ್ಲಿ ಉಳಿಯುವ ಬದಲು, ಕೇವಲ ಹಳೆಯ ನೆನಪುಗಳ ಭಾವನೆಗಳ ಆಧಾರದ ಮೇಲೆ ಬದುಕುಳಿಯುತ್ತದೆ ಅಷ್ಟೇ' ಎಂದಿದ್ದಾರೆ.
ನನ್ನ ಹಾಡು ಕದ್ದಿದ್ದಾನೆ ಎಂದಿದ್ದ ಸಲ್ಮಾನ್
ಡೇವಿಡ್ ಧವನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಸಲ್ಮಾನ್ ಖಾನ್ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ವರುಣ್ ಧವನ್‌ರನ್ನು ಕಿಚಾಯಿಸಿ ಮಾತನಾಡಿದ ಅವರು ಇವನು ನನ್ನ ಮತ್ತೊಂದು ಹಾಡನ್ನು ಕಾಪಿ ಮಾಡಿದ್ದಾನೆ ಎಂದರು. ಆಗ ಧವನ್ ನಗುತ್ತಲೇ, "ಭಾಯ್, ದಯವಿಟ್ಟು ಬಿಟ್ಟುಬಿಡಿ ಎಂದು ವಿನಂತಿಸಿಕೊಂಡಿದ್ದರು, (ಏಜೆನ್ಸೀಸ್).