ಪ್ರತಿ ದಿನವೂ ವ್ಯಾಲೆಂಟೈನ್ಸ್ ಡೇ..

Aditi
Published on

ಫೆಬ್ರವರಿ ತಿಂಗಳು ಬಂತೆಂದರೆ ಪ್ರೀತಿಯ ಚರ್ಚೆಯಾಗುತ್ತದೆ. ಅದರಲ್ಲೂ ಫೆಬ್ರವರಿ 14ರಂದು ಪ್ರೀತಿಯ ಬಗ್ಗೆ, ಪ್ರೇಮಿಗಳ ಬಗ್ಗೆ ಚರ್ಚೆ ಇನ್ನಷ್ಟು ಜಾಸ್ತಿಯಾಗುತ್ತದೆ. ಇದಕ್ಕೆ ಪ್ರತಿಯಾಗಿ, ಈ ಪ್ರೀತಿಯನ್ನು ಪ್ರೇಮಿಗಳಿಗೆ ಮತ್ತು ಕೇವಲ ಒಂದೇ ಒಂದು ದಿನಕ್ಕೆ ಯಾಕೆ ಸೀಮಿತಗೊಳಿಸಬೇಕು, ಪ್ರೀತಿ ಎಂದರೆ ಸರ್ವವ್ಯಾಪಿ ಎಂಬೆಲ್ಲ ಮಾತುಗಳು ಕೇಳಿಬರುತ್ತದೆ. ಇದನ್ನು ಚಂದನವನದ ಕೆಲವು ತಾರೆಯರು ಸಹ ಅನುಮೋದಿಸುತ್ತಾರೆ. ಯಾರೆಲ್ಲ ಏನು ಮಾತಾಡಿದ್ದಾರೆ ಎಂಬುದು ಒಮ್ಮೆ ನೋಡೋಣ ಬನ್ನಿ...

ಪ್ರತಿ ದಿನವೂ ವ್ಯಾಲೆಂಟೈನ್ಸ್ ಡೇ..

ನನ್ನ ಪ್ರಕಾರ ಪ್ರತಿ ದಿನವೂ ನನಗೆ ವ್ಯಾಲೆಂಟೈನ್ಸ್ ಡೇ. ನಿತ್ಯ ಪ್ರೀತಿಯ ದಿನಾಚರಣೆ. ಪ್ರೀತಿ ಎಂದರೆ ನನ್ನ ಪಾಲಿಗೆ ಜವಾಬ್ದಾರಿ. ನನಗೆ ಯಾವುದರ ಮೇಲೆ ಜವಾಬ್ದಾರಿ ಇದೆಯೋ ಅದನ್ನು ನಾನು ಹೆಚ್ಚು ಪ್ರೀತಿಸುತ್ತೇನೆ. ಅದು ನನ್ನ ಕೆಲಸವೇ ಆಗಿರಬಹುದು ಅಥವಾ ನನ್ನ ಹವ್ಯಾಸವೇ ಆಗಿರಬಹುದು. ಅಪ್ಪ, ಅಮ್ಮ ಮತ್ತು ತಮ್ಮನ ಮೇಲೆಯೂ ಜವಾಬ್ದಾರಿ ಇದೆ. ಮನೆ ಕಟ್ಟಿಸಬೇಕು ಎಂಬ ದೊಡ್ಡ ಆಸೆ ಇದೆ. ಅದೂ ಕೂಡ ನನ್ನ ಪಾಲಿಗೆ ಪ್ರೀತಿಯೇ. ಕನಸುಗಳ ಮೇಲೆಯೂ ಅತಿಯಾದ ಪ್ರೀತಿ ಇದೆ. ಒಟ್ಟಾರೆ ನಮಗೆ ಯಾವುದರೆ ಮೇಲೆ ಅತಿಯಾದ ಕಾಳಜಿ ಇರುತ್ತದೋ ಅಲ್ಲಿ ಪ್ರೀತಿ ನೆಲೆಸಿರುತ್ತದೆ. ಆ ಪ್ರೀತಿ ಇದ್ದಾಗ ಮಾತ್ರ ರಿಸ್ಕ್ ತೆಗೆದುಕೊಳ್ಳಲು ಸಾಧ್ಯ. ಅಮ್ಮನಿಗೆ ನಾನು ಅಂದರೆ ಪಂಚಪ್ರಾಣ. ಆದರೆ, ನಾನು ಮಾತ್ರ ಪ್ರೇಮಿಗಳ ದಿನಕ್ಕೆ ಕಾಯುವುದಿಲ್ಲ. ಮುಂದೊಂದು ದಿನ ಒಬ್ಬ ಹುಡುಗ ಇಷ್ಟವಾದರೆ ನೇರವಾಗಿ ಹೋಗಿ ಶಿಷ್ಯ ಐ ಲವ್ ಯೂ ... ಎಂದು ಹೇಳಿಬಿಡುತ್ತೇನೆ.

| ಅದಿತಿ ಪ್ರಭುದೇವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net