

'ಚಂದ್ರ ಚಕೋರಿ' ಸಿನಿಮಾದ ನಂತರ ಸ್ಯಾಂಡಲ್ವುಡ್ನಿಂದ ಕಾಣೆಯಾಗಿದ್ದೇಕೆ ನಟಿ ಪ್ರಿಯಾ
ಇನ್ಸ್ಟಾ ಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡ ನಟಿ ಪ್ರಿಯಾ
ತಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಸಿನಿ ಲೋಕದಿಂದ ದೂರ ಇದ್ದೆ ಎಂದ ಪ್ರಿಯಾ
2003ರಲ್ಲಿ ರಿಲೀಸ್ ಆಗಿದ್ದ 'ಚಂದ್ರ ಚಕೋರಿ' ಸಿನಿಮಾವು ಕನ್ನಡ ಸಿನಿಮಾರಂಗದಲ್ಲಿ ಇಂದಿಗೂ ತನ್ನದೇ ಆದ ಪ್ರತ್ಯೇಕ ಸ್ಥಾನವನ್ನು ಉಳಿಸಿಕೊಂಡಿದೆ. ಚಿತ್ರದ ಪ್ರತಿ ದೃಶ್ಯ, ಹಾಡು, ಕತೆ, ನಿರ್ದೇಶನ ನಟನೆ, ಮುರಳಿಯವರ ಮುಗ್ಧತೆಯು ಸಿನಿ ಪ್ರೇಮಿಗಳ ಮನ ಗೆದ್ದಿತ್ತು. ಇಷ್ಟು ವರ್ಷದ ನಂತರ ಈ ಚಿತ್ರದ ಬಗ್ಗೆ ಚರ್ಚೆ ಹೆಚ್ಚಾಗಿದೆ. ಯಾಕೆ ಎನ್ನುವ ಗೊಂದಲ ಕಾಡೋದು ಸಹಜ. ಆದರೆ ಅದಕ್ಕೆ ಕಾರಣ ಈ ಸಿನಿಮಾದಲ್ಲಿ ಸುಧಾ ಪಾತ್ರದಲ್ಲಿ ನಟಿಸಿದ್ದ ಪ್ರಿಯ ಎಸ್ ಛಾಬ್ರಿಯಾ ಅವರು.
ಹೌದು, 'ಚಂದ್ರ ಚಕೋರಿ' ಸಿನಿಮಾವು ಬ್ಲಾಕ್ ಬ್ಲಸ್ಟರ್ ಹಿಟ್ ಕಂಡ ನಂತರ ಪ್ರಿಯ ಎಸ್ ಛಾಬ್ರಿಯಾ ಅವರು ಕನ್ನಡ ಮಾತ್ರವಲ್ಲದೇ ಯಾವುದೇ ಸಿನಿಮಾರಂಗದಲ್ಲಿ ಕಾಣಿಸಿಕೊಂಡೆ ಇಲ್ಲ. ಇದಕ್ಕೆ ಕಾರಣ ಹಲವರು ಇಂದಿಗೂ ಹುಡುಕುತ್ತಲೇ ಇದ್ದಾರೆ. ಆದರೆ ಪ್ರಿಯಾ ಅವರು ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ತಂದೆಗೆ ಅನಾರೋಗ್ಯದ ಕಾರಣ ಸೌದಿಗೆ ತೆರಳಿದ ಅವರು ಮತ್ತೆ ಬರಲಿಲ್ಲ..ಬಂದ ನಂತರ ಯಾವುದೇ ಸಿನಿಮಾಕ್ಕೆ ಚಾನ್ಸ್ ಸಿಕ್ಕಿಲ್ಲ ಎನ್ನುವುದಾಗಿ ಮಾತನಾಡಿದ್ದಾರೆ.
ಚಂದ್ರ ಚಕೋರಿ ಸಿನಿಮಾದಲ್ಲಿ ಪ್ರಿಯಾ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಅವರು ಸುಧಾ ಪಾತ್ರಕ್ಕೆ ಬಣ್ಣ ಹಚ್ಚಿದ್ದರೆ ಮುರುಳಿ ಅವರು ಪುಟ್ಟರಾಜು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಂದ್ರ ಚಕೋರಿ ಸಿನಿಮಾ ಹಿಟ್ ಕಂಡ ಕೆಲವೇ ದಿನದಲ್ಲಿ ಅವರ ತಂದೆ ಆರೋಗ್ಯದಲ್ಲಿ ಏರುಪೇರುಂಟಾದ ಕಾರಣ ಅವರು ಸೌದಿಗೆ ತೆರಳಿದ್ದರಂತೆ. ಎಷ್ಟೇ ಸಿನಿಮಾ ಆಫರ್ ಸಿಕ್ಕರೂ ಸಹ ತಂದೆಗಾಗಿ ಯಾವುದಕ್ಕೂ ಒಪ್ಪಿಗೆ ಕೊಟ್ಟಿರಲಿಲ್ಲ. ತಂದೆ ಚೇತರಿಸಿಕೊಳ್ಳುವವರೆಗೂ ಸುಮಾರು ಎರಡು ವರ್ಷ ಸೌದಿಯಲ್ಲಿದ್ದೆ. ನಂತರ ಭಾರತಕ್ಕೆ ಬಂದೆ ಯಾವುದೇ ಸಿನಿಮಾದಲ್ಲಿಯೂ ಆಫರ್ ಸಿಕ್ಕಿಲ್ಲ. ಮದುವೆ ಮಾಡಿಕೊಂಡೆ. ಸಿನಿಮಾ ರಂಗದಿಂದ ದೂರವಾದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ನಾನು ಜಾಹೀರಾತು, ಸಿನಿಮಾಗಳ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟಿದ್ದೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಜೊತೆಗೆ, 'ನಮಸ್ಕಾರ ಪ್ರೀತಿಯ ಸ್ನೇಹಿತರೇ.. ನನ್ನ ರೀಲ್ಸ್ ಮತ್ತು ಸ್ಟೋರೀಸ್ ಗಳಿಗೆ, ನಿಮ್ಮೆಲ್ಲರ ಕಾಮೆಂಟ್ಸ್ ಹಾಗೂ ಮೆಸೇಜ್ ಗಳಿಗೆ ತುಂಬಾ ತುಂಬಾ ಥ್ಯಾಂಕ್ಸ್. ಪ್ರತಿಯೊಬ್ಬರಿಗೂ ರಿಪ್ಲೈ ಮಾಡೋಕ್ಕೆ ಪ್ರಯತ್ನ ಮಾಡ್ತೀನಿ, ಆದ್ರೆ ಯಾರಿಗಾದ್ರೂ ರಿಪ್ಲೈ ಮಾಡಿಲ್ಲ ಅಂದ್ರೆ ದಯವಿಟ್ಟು ಕ್ಷಮಿಸಿ. ನೀವು ಕೊಡೋ ಪ್ರೀತಿ ನಾನು ಕನಸಲ್ಲೂ ಊಹೆ ಮಾಡಿರಲಿಲ್ಲ.. ಹೃತ್ಪೂರ್ವಕ ಧನ್ಯವಾದಗಳು ನಿಮ್ಮೆಲ್ಲರಿಗೂ. ನೀವು ಕೇಳಿರುವ ಕೆಲವು ಪ್ರಶ್ನೆಗಳಿಗೆ ನಾನು ರೀಲ್ ಗಳಲ್ಲಿ ಉತ್ತರ ನೀಡಿದ್ದೇನೆ' ಎಂದು ಬರೆದುಕೊಂಡಿದ್ದಾರೆ ನಟಿ ಪ್ರಿಯಾ
ಪ್ರಿಯಾ ಅವರು ಮತ್ತೆ ಜನರೊಂದಿಗೆ ಸಂಪರ್ಕ ಸಾಧಿಸಲು ಚಂದ್ರ ಚಕೋರಿ ಸಿನಿಮಾದ ಹಾಡುಗಳಿಗೆ ಹೆಜ್ಜೆ ಹಾಕಿ ರೀಲ್ಸ್ ಹಂಚಿಕೊಳ್ಳುವ ಮೂಲಕ ಸಿನಿಮಾ ಲೋಕಕ್ಕೆ ಮತ್ತೆ ಕಾಲಿಟ್ಟಿದ್ದಾರೆ. ಪ್ರಿಯಾ ಅವರು ಎಲ್ಲಿ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ತಾವೆ ಉತ್ತರ ಕೊಟ್ಟಿದ್ದಾರೆ.
ಎಸ್ ನಾರಾಯಣ್ ಆಕ್ಷನ್ ಕಟ್ ಹೇಳಿರುವ, ಎಚ್ ಡಿಕುಮಾರ ಸ್ವಾಮಿ ಹಾಗೂ ಅನಿತಾ ಅವರ ನಿರ್ಮಾಣದ ಸಿನಿಮಾ ಚಂದ್ರ ಚಕೋರಿ. ಈ ಸಿನಿಮಾವು 2003ರಲ್ಲಿ ಪ್ರೇಮಿಗಳ ಮನ ಗೆದ್ದಿತ್ತು. ಆಹಾ ಜುಮ್ತಕ ಜುಮ್, ಕುಹೂ ಕುಹೂ ಕೋಗಿಲೆ, ಅಂದಗಾತಿ ಕಣ್ಣ ತುಂಬಾ ಹಾಡುಗಳು ಇಂದಿಗೂ ಗುನುಗುವಂತೆ ಮಾಡುತ್ತದೆ, (ಏಜೆನ್ಸೀಸ್).