ಚಂದನವನಕ್ಕೆ ಗ್ರೇಸಿಲಾ ಪಿಶ್ನರ್ ಎಂಟ್ರಿ; 'ಬೆಂಗಳೂರು 69'ರಲ್ಲಿ ಯೂರೋಪ್​ನ ಮಾಡೆಲ್​

Bangalore 69 C
Published on

ಬೆಂಗಳೂರು: ಕನ್ನಡ ಚಿತ್ರಗಳಲ್ಲಿ ಇದುವರೆಗೂ ಹಲವು ವಿದೇಶಿ ನಟಿಯರು ಅಭಿನಯಿಸಿದ್ದಾರೆ. ಈಗ ಗ್ರೇಸಿಲಾ ಪಿಶ್ನರ್ ಎಂಬ ಯೂರೋಪ್​ನ ಮಾಡಲ್​ 'ಬೆಂಗಳೂರು 69' ಎಂಬ ಹೊಸ ಚಿತ್ರದಲ್ಲಿ ನಟಿಸಿದ್ದಾರೆ.

'ಬೆಂಗಳೂರು 69' ಚಿತ್ರವನ್ನು ಟ್ರಿಪಲ್ ಎ ಸಿನಿಮಾಸ್ ಬ್ಯಾನರ್​ನಡಿ ದುಬೈ ಮೂಲದ ಕನ್ನಡಿಗ ಝಾಕಿರ್‌ ಹುಸೇನ್​ ಕರೀಂ ಖಾನ್ ಮತ್ತು ಅವರ ಪತ್ನಿ ಗುಲ್ಜಾರ್ ನಿರ್ಮಿಸುತ್ತಿದ್ದಾರೆ. ಅನಿತಾ ಭಟ್, ಪವನ್ ಶೆಟ್ಟಿ ಮತ್ತು ತೆಲುಗು ನಟ ಶಫಿ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ 10ರಂದು ಈ ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದೊಂದು ಕ್ರೈಮ್​ ಥ್ರಿಲ್ಲರ್​ ಚಿತ್ರವಾಗಿದ್ದು, ಕ್ರಾಂತಿ ಚೈತನ್ಯ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರಕ್ಕಾಗಿ ವಿಶೇಷ ಹಾಡೊಂದನ್ನು ರೂಪಿಸಲಾಗಿದ್ದು, ಈ ಹಾಡಿನಲ್ಲಿ ಯೂರೋಪ್​ನಲ್ಲಿ ಹೆಸರು ಮಾಡಿರುವ ಮಾಡಲ್​ ಗ್ರೇಸಿಲಾ ಪಿಶ್ನರ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿಗೆ ಬರೀ ಯೂರೋಪಿಯನ್​ ಮಾಡಲ್​ ಅಷ್ಟೇ ಅಲ್ಲ, ಲ್ಯಾಟಿನ್ ಅಮೆರಿಕನ್ ನೃತ್ಯ ಸಂಯೋಜಕಿ ಅನುಬಿಸ್ ಮತ್ತು ರಷ್ಯಾ ಮತ್ತು ದಕ್ಷಿಣ ಆಫ್ರಿಕಾದ ತಂತ್ರಜ್ಞರನ್ನು ಈ ಚಿತ್ರಕ್ಕಾಗಿ ಕರೆತರಲಾಗಿದೆ. ಅಮೆರಿಕನ್ ವಸ್ತ್ರ ವಿನ್ಯಾಸಕರು ಚಿತ್ರದಲ್ಲಿ ಗ್ರೇಸಿಲಾಗೆ ವೇಷಭೂಷಣಗಳನ್ನು ವಿನ್ಯಾಸಗೊಳಿಸಿದ್ದಾರೆ. ಚಿತ್ರದ ವಿಶೇಷ ಹಾಡನ್ನು ದುಬೈನ ಬುರ್ಜ್ ಖಲೀಫಾ ಮತ್ತು ಶಾರ್ಜಾ ಮರುಭೂಮಿ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ.

'ಬೆಂಗಳೂರು 69' ಚಿತ್ರಕ್ಕೆ ಪರಮೇಶ್ ಅವರ ಛಾಯಾಗ್ರಹಣವಿದೆ. ವಿಕ್ರಮ್ ಮತ್ತು ಚಂದನಾ ಅವರ ಸಂಗೀತ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net