ಖಾಲಿ ಮನೆಯಲ್ಲಿ ಏನ್ಮಾಡ್ತಿದ್ದಾರೆ ಎಸ್ತರ್​?

The Vacant House - Final
Published on

ಬೆಂಗಳೂರು: ನಟಿ ಮತ್ತು ಗಾಯಕಿ ಎಸ್ತರ್​ ನರೋನ್ಹಾ, ಈಗಾಗಲೇ 'ಡಿಎನ್​ಎ', 'ಲಂಕೆ' ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆಗ ಅವರು ಸದ್ದಿಲ್ಲದೆ ಇನ್ನೊಂದು ಚಿತ್ರವದಲ್ಲಿ ನಟಿಸಿದ್ದಾರೆ. ಅದೇ 'ದಿ ವೇಕೆಂಟ್​ ಹೌಸ್​'.

ವಿಶೇಷವೆಂದರೆ, ಈ ಚಿತ್ರದಲ್ಲಿ ಅವರು ನಾಯಕಿಯಾಗಿ ನಟಿಸುತ್ತಿರುವುದಷ್ಟೇ ಅಲ್ಲ, ಸಂಗೀತ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದಾರೆ. ಕೆಲವು ವಾದ್ಯಗಳನ್ನು ನುಡಿಸುವುದರಲ್ಲಿ ಪರಿಣಿತಿ ಹೊಂದಿರುವ ಎಸ್ತರ್​, ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಿಯಾಗಿ ಭಡ್ತಿ ಪಡೆದಿದ್ದಾರೆ.

ವಿಭಿನ್ನ ಕಥಾಹಂದರ ‌ಹೊಂದಿರುವ ಚಿತ್ರಗಳು ಕನ್ನಡದಲ್ಲಿ ಸಾಕಷ್ಟು ಬರುತ್ತಿದೆ. ಆ ಸಾಲಿಗೆ 'ದಿ ವೇಕೆಂಟ್ ಹೌಸ್' ಸಹ ಸೇರಲಿದ್ದು, ಈ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಕ್ತಾಯವಾಗಿದೆ. ಏಪ್ರಿಲ್ ೪ರಂದು ಈಸ್ಟರ್ ಹಬ್ಬದ ಪ್ರಯುಕ್ತ ಈ ಚಿತ್ರದ ಮೊದಲ ಪೋಸ್ಟರ್​ ಸಹ ಬಿಡುಗಡೆಯಾಗುತ್ತಿದೆ.

ವಿಶೇಷವೆಂದರೆ, ಈ ಚಿತ್ರ ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಏಕಕಾಲಕ್ಕೆ ಕೊಂಕಣಿಯಲ್ಲೂ ಬಿಡುಗಡೆಯಾಗುತ್ತಿರುವುದು ವಿಶೇಷ. ಜಾನೆಟ್ ನರೋನ್ಹಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಾನೆಟ್ ನರೋನ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ ರಾಜ್ಯ ಪ್ರಶಸ್ತಿ ವಿಜೇತ 'ಸೋಫಿಯಾ' ಹಾಗೂ ಜಾಕಿಶ್ರಾಫ್ ಅಭಿನಯದ 'ಕಾಂತಾರ್' ಚಿತ್ರಗಳನ್ನು ಜಾನೆಟ್ ನರೋನ್ಹಾ ನಿರ್ಮಿಸಿದ್ದು, ಇದವರ ನಿರ್ಮಾಣದ ಮೂರನೆಯ ಚಿತ್ರವಾಗಿದೆ.

ಈ ಹಿಂದೆ ಕೆಲವು ಚಿತ್ರಗಳಲ್ಲಿ ನಟಿಸುವುದರ ಜತೆಗೆ 'ಶಕೀಲ' ಚಿತ್ರಕ್ಕೆ ಇಂದ್ರಜಿತ್ ಲಂಕೇಶ್ ಅವರೊಡನೆ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿರುವ ಶ್ರೇಯಸ್​​, ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ, ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net