ಜ.21ಕ್ಕೆ ಏಕ್​ ಲವ್​ ಯಾ

New Project (5)
Published on

ಬೆಂಗಳೂರು: ಪ್ರೇಮ್​ ನಿರ್ದೇಶನದ "ಏಕ್​ ಲವ್​ ಯಾ' ಚಿತ್ರದ ಚಿತ್ರೀಕರಣ ವರ್ಷದ ಆರಂಭದಲ್ಲೇ ಮುಗಿದಿತ್ತು. ಆದರೆ, ಕರೊನಾ ಎರಡನೇ ಅಲೆ ಮತ್ತು ಲಾಕ್​ಡೌನ್​ನಿಂದ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುತ್ತಲೇ ಇತ್ತು. ಈಗ ಎಲ್ಲವೂ ಮುಂಚಿನ ಸ್ಥಿತಿಗೆ ಬಂದಿದ್ದರೂ, ಮುಂದಿನ ಎರಡೂವರೆ ತಿಂಗಳ ಕಾಲ ಒಂದಿಷ್ಟು ನಿರೀತ ಚಿತ್ರಗಳ ಬಿಡುಗಡೆಗೆ ಲೈನ್​ಅಪ್​ ಆಗಿವೆ. ಸುಮ್ಮನೆ ಗೊಂದಲವೇ ಬೇಡ ಎಂದು ಪ್ರೇಮ್​ ಮೂರು ತಿಂಗಳು ಮುಂದುಕ್ಕೆ ಹೋಗಿದ್ದಾರೆ.

ಜ.21ಕ್ಕೆ "ಏಕ್​ ಲವ್​ ಯಾ' ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಈಗಲೇ ಘೋಷಿಸಿದ್ದಾರೆ. ಶುಕ್ರವಾರ ವಿಜಯದಶಮಿ ಹಬ್ಬದ ಪ್ರಯುಕ್ತ ಪ್ರೇಮ್​, "ಏಕ್​ ಲವ್​ ಯಾ' ಚಿತ್ರದ ಬಿಡುಗಡೆಯ ದಿನಾಂವನ್ನು ಘೋಷಿಸಿದ್ದಾರೆ. ಇಂದು ಹಬ್ಬದ ಜತೆಗೆ, ಚಿತ್ರದ ನಾಯಕ ರಾಣಾ ಅವರ ಹುಟ್ಟುಹಬ್ಬ ಕೂಡಾ. ಈ ಸಂದರ್ಭದಲ್ಲಿ ರಾಣಾಗೆ ಶುಭ ಕೋರುವುದರ ಜತೆಗೆ, ಬಿಡುಗಡೆಯ ದಿನಾಂಕವನ್ನು ಸಹ ಅವರು ಬಹಿರಂಗಗೊಳಿಸಲಿದ್ದಾರೆ. "ಏಕ್​ ಲವ್​ ಯಾ' ಚಿತ್ರದಲ್ಲಿ ರಾಣಾ ಜತೆಗೆ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದು, ಮಿಕ್ಕಂತೆ ಶಶಿಕುಮಾರ್​, "ಶಿಷ್ಯ' ದೀಪಕ್​ ಮುಂತಾದವರು ನಟಿಸಿದ್ದಾರೆ. ಈ ಚಿತ್ರವನ್ನು ರತಾ ಫಿಲ್ಮಂ ್ಯಾಕ್ಟರಿ ಸಂಸ್ಥೆಯಡಿ ರತಾ ನಿರ್ಮಿಸಿದ್ದು, ಅರ್ಜುನ್​ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net