ಕನ್ನಡ v/s ಕನ್ನಡ; ಈ ವಾರ ತೆರೆಗೆ 8 ಪ್ಲಸ್ 1

Kannada
Published on

ಒಂದೇ ವಾರ ಐದಾರು ಚಿತ್ರಗಳು ಒಟ್ಟಿಗೆ ಬಿಡುಗಡೆಯಾಗುವುದು ಕನ್ನಡ ಚಿತ್ರರಂಗಕ್ಕೆ ಹೊಸದೇನಲ್ಲ. ಕಳೆದ ವಾರ ಆರು ಚಿತ್ರಗಳು ಬಿಡುಗಡೆಯಾಗಿದ್ದವು. ಈ ವಾರ ಆ ಸಂಖ್ಯೆ ಇನ್ನಷ್ಟು ಹೆಚ್ಚಿದೆ. ಎಂಟು ಕನ್ನಡ ಚಿತ್ರಗಳು ಚಿತ್ರಮಂದಿಗಳಲ್ಲಿ ಬಿಡುಗಡೆಯಾದರೆ, ಒಂದು ಚಿತ್ರ ಈಗಾಗಲೇ ಒಟಿಟಿಯಲ್ಲಿ ಬಿಡುಗಡೆಯಾಗಿದೆ.

ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರಗಳ ಪೈಕಿ ವಿನೋದ್ ಪ್ರಭಾಕರ್ ಅಭಿನಯದ ‘ವರದ’, ಧನ್ವೀರ್ ನಟನೆಯ ‘ಬೈಟು ಲವ್’, ತಾರಕ್ ಪೊನ್ನಪ್ಪ ನಟನೆಯ ‘ಗಿಲ್ಕಿ’, ಮಹೇಶ್ ನಟಿಸಿರುವ ‘ಮಹಾ ರೌದ್ರಂ’, ‘ಭಾವಚಿತ್ರ’, ‘ಬಹುಕೃತ ವೇಷಂ’, ‘ಗರುಡಾಕ್ಷ’ ಮತ್ತು ‘ದೋಖ ದೋಸ್ತಿ’ ಚಿತ್ರಗಳಿವೆ. ಈ ಪೈಕಿ ಹೊಸಬರ ಪಾಲು ದೊಡ್ಡದಿದೆ. ‘ದೋಖ ದೋಸ್ತಿ’ ಎಂಬ ಹೊಸಬರ ಚಿತ್ರವು ತುಮಕೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಡುಗಡೆಯಾದರೆ, ಮಿಕ್ಕ ಚಿತ್ರಗಳು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿವೆ. ಇನ್ನು, ಪುನೀತ್ ರಾಜಕುಮಾರ್ ನಿರ್ವಣದ ‘ಫ್ಯಾಮಿಲಿ ಪ್ಯಾಕ್’ ಚಿತ್ರವು ಗುರುವಾರ ಅಮೆಜಾನ್ ಪ್ರೖೆಮ್ಲ್ಲಿ ತೆರೆಕಂಡಿದೆ.

ಕಳೆದ ವಾರ ಆರು, ಈ ವಾರ ಒಂಬತ್ತು ... ಒಂದೇ ವಾರ ಇಷ್ಟೊಂದು ಸಂಖ್ಯೆಯ ಚಿತ್ರಗಳು ಏಕೆ ಬಿಡುಗಡೆಯಾಗುತ್ತಿವೆ ಎಂಬ ಪ್ರಶ್ನೆ ಸಹಜ. ಫೆ. 25ರಿಂದ ಹಲವು ಸ್ಟಾರ್ ಸಿನಿಮಾಗಳು ಮತ್ತು ಪ್ಯಾನ್ ಇಂಡಿಯಾ ಚಿತ್ರಗಳು ಬಿಡುಗಡೆಯಾಗಲಿಕ್ಕಿವೆ. ಈ ಸಮಯದಲ್ಲಿ ಚಿತ್ರಮಂದಿರ ಪಡೆಯುವುದಕ್ಕೇ ದೊಡ್ಡ ಹೋರಾಟ ಮಾಡಬೇಕಾಗುತ್ತದೆ. ಈಗ ಅಷ್ಟೇನೂ ಪೈಪೋಟಿ ಇಲ್ಲದಿರುವುದರಿಂದ ಇಷ್ಟೊಂದು ಸಂಖ್ಯೆಯ ಚಿತ್ರಗಳು ಬಿಡುಗಡೆಯಾಗುತ್ತಿವೆ.

ಈಗ ಪೈಪೋಟಿ ಇಲ್ಲ ಎಂದನಿಸಿದರೂ, ಕನ್ನಡ ಚಿತ್ರಗಳ ಮಧ್ಯೆಯೇ ಪೈಪೋಟಿ ಉಂಟಾಗಿದೆ. ಇದರಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಚಿತ್ರಣ ಮುಂದಿನ ಶುಕ್ರವಾರದ ಹೊತ್ತಿಗೆ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net