ಅಸಲಿಗೆ ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಬೆನ್ನಲ್ಲೇ 16 ಜನರನ್ನು ಬಂಧಿಸಲಾಯಿತು. ವರದಿಗಳ ಪ್ರಕಾರ, ಪ್ರದೀಪ್ ಜೊತೆಗೆ ಕೆಲಸ ಮಾಡುತ್ತಿದ್ದ ಫ್ರೀಲಾನ್ಸ್ ಅಸಿಸ್ಟೆಂಟ್ ಎಡಿಟರ್ ಒಬ್ಬ, ಯಾರೂ ಅಷ್ಟು ಸುಲಭವಾಗಿ ಪ್ರವೇಶಿಸಲು ಸಾಧ್ಯವಿರದ ಎಡಿಟಿಂಗ್ ಸ್ಟುಡಿಯೋದಿಂದ ಸಿನಿಮಾದ ಓರಿಜಿನಲ್ ದೃಶ್ಯಗಳನ್ನು ಕದ್ದು, ಅವುಗಳನ್ನು ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ತನಿಖೆಯಲ್ಲಿ ಸ್ಪಷ್ಟವಾಯಿತು.