ರಾಖಿ ಮೂರನೇ ಮದುವೆ ಬಾಕಿ! ಪಾಕಿಸ್ತಾನದಲ್ಲಿ ಮದುವೆ, ಭಾರತದಲ್ಲಿ ಆರತಕ್ಷತೆ, ಯೂರೋಪ್​ನಲ್ಲಿ ಹನಿಮೂನ್​

FotoJet
Published on

ಕನ್ನಡದ "ಗೆಳೆಯ' ಚಿತ್ರದಲ್ಲಿ "ನನ್ನ ಸ್ಮೈಲು ಬೇರೇನೇ' ಎಂದು ನಾಯಕ ಪ್ರಜ್ವಲ್​ ದೇವರಾಜ್​ ಜತೆ ಕುಣಿದು ಕುಪ್ಪಳಿಸಿದ್ದ ರಾಖಿ ಸಾವಂತ್​, ಬಾಲಿವುಡ್​ನಲ್ಲಿ ಸ್ಪೆಷಲ್​ ಸಾಂಗ್​ಗಳಿಂದಲೇ ಹೆಚ್ಚು ಸದ್ದು ಮಾಡಿದವರು. ಅದಕ್ಕೂ ಹೆಚ್ಚು ವಿವಾದಗಳಿಂದ ಸುದ್ದಿ ಮಾಡುತ್ತಿರುತ್ತಾರೆ. ಇಂತಹ ರಾಖಿ ಇದೀಗ ಪಾಕಿಸ್ತಾನದ ನಟ, ಪೊಲೀಸ್​ ಅಧಿಕಾರಿ ದೋಡಿ ಖಾನ್​ ಜತೆ ಮೂರನೇ ಮದುವೆಯಾಗಲಿದ್ದಾರಂತೆ.

ಈ ಬಗ್ಗೆ ಖುದ್ದು ಅವರೇ, "ಭಾರತೀಯರು ಮತ್ತು ಪಾಕಿಸ್ತಾನಿಯರು ಒಬ್ಬರಿಲ್ಲದೆ, ಇನ್ನೊಬ್ಬರಿಲ್ಲ. ನನಗೆ ಪಾಕಿಸ್ತಾನಿಯರು ಅಂದರೆ ಪ್ರೀತಿ. ನನಗೆ ಅಲ್ಲಿ ಹಲವು ಅಭಿಮಾನಿಗಳಿದ್ದಾರೆ. ಪಾಕಿಸ್ತಾನದಲ್ಲಿ ಇಸ್ಲಾಂ ಸಂಪ್ರದಾಯದಂತೆ ನಿಖಾ, ಭಾರತದಲ್ಲಿ ಆರತಕ್ಷತೆ, ಬಳಿಕ ಯೂರೋಪ್​ಗೆ ಹನಿಮೂನ್​ಗೆ ಹೋಗಲಿದ್ದೇವೆ. ನಂತರ ಇಬ್ಬರೂ ದುಬೈನಲ್ಲಿ ಸೆಟಲ್​ ಆಗಲಿದ್ದೇವೆ' ಎಂದು ಹೇಳಿಕೊಂಡಿದ್ದಾರೆ.

ಅಂದಹಾಗೆ 2019ರಲ್ಲಿ ರಿತೇಶ್​ ರಾಜ್​ ಸಿಂಗ್​ರನ್ನು ಮದುವೆಯಾಗಿದ್ದ ರಾಖಿ, 2022ರಲ್ಲಿ ಅವರಿಂದ ವಿಚ್ಛೇದನ ಪಡೆದಿದ್ದರು. ನಂತರ ಮೈಸೂರು ಮೂಲದ ಆದಿಲ್​ ಖಾನ್​ ದುರಾನಿ ಜತೆ ಮದುವೆಯಾದ ರಾಖಿ, 2023ರಲ್ಲಿ ಅವರಿಂದಲೂ ದೂರವಾಗಿದ್ದರು. ಇದೀಗ 46 ವರ್ಷದ ರಾಖಿ ಸಾವಂತ್​ ಮೂರನೇ ಮದುವೆಯ ಸಿದ್ಧತೆಯಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net