ಇಂದಿನಿಂದ ಕನ್ನಡದಲ್ಲಿ ಈ-ಟಿವಿ ಬಾಲ ಭಾರತ; ನೂತನ ಮಕ್ಕಳವಾಹಿನಿ

Bala Bharath
Published on

ಬೆಂಗಳೂರು: ಈಟಿವಿ ಗ್ರೂಪ್​ನಿಂದ ಕನ್ನಡದಲ್ಲಿ ಬಾಲ ಭಾರತ ಎಂಬ ನೂತನ ಮಕ್ಕಳ ವಾಹಿನಿ ಇಂದಿನಿಂದ (ಏ. 27) ಪ್ರಸಾರ ಆರಂಭಿಸಲಿದೆ. ಸಂಪೂರ್ಣ ಮಕ್ಕಳಿಗಾಗಿಯೇ ಬರುತ್ತಿರುವ ಈ ವಾಹಿನಿಯಲ್ಲಿ ಎನಮೇಟೆಡ್ ಸರಣಿಗಳು, ಕಾರ್ಟೂನ್ ಧಾರಾವಾಹಿಗಳು ಪ್ರಸಾರವಾಗಲಿವೆ. ಮಕ್ಕಳಿಗೆ ಸಂಪೂರ್ಣ ಮನರಂಜನೆಯನ್ನು ನೀಡುವ ಉದ್ದೇಶದಿಂದ ಎನಿಮೇಷನ್ ಸೀರಿಸ್​ಗಳಾದ ‘ಅಭಿಮನ್ಯು’, ‘ಚೋಟು’, ‘ಲೊಂಬು ಮತ್ತು ರೋಬು’ ಈಟಿವಿ ಬಾಲ ಭಾರತದಲ್ಲಿ ಮೂಡಿಬರಲಿವೆ. ಅಷ್ಟೇ ಅಲ್ಲದೆ ರೋಚಕ, ಕುತೂಹಲಭರಿತ, ಆಕ್ಷನ್, ಸಾಹಸಮಯ, ಕಾಮಿಡಿ ಕಾರ್ಯಕ್ರಮಗಳು ಮಕ್ಕಳನ್ನು ಸೆಳೆಯಲಿವೆ. ಇದಷ್ಟೇ ಅಲ್ಲದೆ ಆಯಾ ಭಾಷೆಯ ಪ್ರಾದೇಶಿಕತೆಗೆ ತಕ್ಕಂತೆ ಕಾರ್ಯಕ್ರಮಗಳು ಮೂಡಿಬರಲಿವೆ. ಹೈದರಾಬಾದ್ ಮೂಲದ ಈಟಿವಿ ನೆಟ್​ವರ್ಕ್ ಕನ್ನಡದ ಜತೆಗೆ ಅಸ್ಸಾಮಿ, ಬೆಂಗಾಲಿ, ಗುಜರಾತಿ, ಹಿಂದಿ, ಮರಾಠಿ, ಮಲಯಾಳಂ, ಓಡಿಯಾ, ಪಂಜಾಬಿ, ತೆಲುಗು, ತಮಿಳು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರಸಾರ ಆರಂಭಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net