ದ್ವಾರಕೀಶ್​ ಬಿಡುಗಡೆ ಮಾಡ್ತಾರಂತೆ ಶರಣ್​ ಹೊಸ ಚಿತ್ರದ ಟೈಟಲ್​!

Sharan New Film - Final
Published on

ಬೆಂಗಳೂರು: ನಟ ಶರಣ್​ ಮತ್ತು ನಟ-ನಿರ್ದೇಶಕ ತರುಣ್​ ಸುಧೀರ್​ ಇಬ್ಬರೂ ಸೇರಿಕೊಂಡು ಹೊಸ ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ ಎಂಬ ವಿಷಯ ಎರಡು ತಿಂಗಳ ಹಿಂದೆ ಕೇಳಿ ಬಂದಿತ್ತು. ಆದರೆ, ಆ ಚಿತ್ರ ಯಾವಾಗ ಶುರುವಾಗುತ್ತದೆ ಮತ್ತು ಅದರ ಹೆಸರೇನು ಎಂಬ ವಿಷಯವನ್ನು ಚಿತ್ರತಂಡದವರು ಬಿಟ್ಟುಕೊಟ್ಟಿಲ್ಲ.

ಈಗ ಆ ಚಿತ್ರದ ಟೈಟಲ್​ ಬಹಿರಂಗವಾಗುವ ಕಾಲ ಹತ್ತಿರ ಬಂದಿದೆ. ಚಿತ್ರದ ಹೆಸರು ಸೋಮವಾರ (ಡಿಸೆಂಬರ್​ 22) ಬೆಳಿಗ್ಗೆ ಬಿಡುಗಡೆಯಾಗಲಿದೆ. ಹಿರಿಯ ನಟ, ನಿರ್ಮಾಪಕ ಮತ್ತು ನಿರ್ದೇಶಕ ದ್ವಾರಕೀಶ್​ ಅವರು ಚಿತ್ರದ ಟೈಟಲ್​ ಮೋಷನ್​ ಪೋಸ್ಟರ್​ ಬಿಡುಗಡೆಯಾಗಲಿದೆ. ಈ ಮೋಷನ್​ ಪೋಸ್ಟರ್​ ಸೋಮವಾರ 11 ಗಂಟೆ ನಾಲ್ಕು ನಿಮಿಷಕ್ಕೆ ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಬಿಡುಗಡೆಯಾಗುತ್ತಿದೆ.

ಶರಣ್​ ಅಭಿನಯದ ಈ ಚಿತ್ರವನ್ನು ಜಡೇಶ್​ ಹಂಪಿ ನಿರ್ದೇಶನ ಮಾಡಿದರೆ, ತರುಣ್​ ಕಿಶೋರ್​ ಸುಧೀರ್​ ಕ್ರಿಯೇಟಿವ್​ ಹೆಡ್​ ಆಗಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ತರುಣ್​ ಸುಧೀರ್​ ಈ ಚಿತ್ರವನ್ನು ತಮ್ಮ ತರುಣ್​ ಸುಧೀರ್ ಕ್ರಿಯೇಟಿವ್ಸ್​ ಎಂಬ ಸಂಸ್ಥೆಯ ಮೂಲಕ ಸಹ ನಿರ್ಮಾಣ ಮಾಡುತ್ತಿದ್ದಾರೆ.

ಈ ಚಿತ್ರದ ಚಿತ್ರೀಕರಣ ಜನವರಿಯಿಂದ ಪ್ರಾರಂಭವಾಗುವ ಸಾಧ್ಯತೆ ಇದೆ. ಈ ಮಧ್ಯೆ ಶರಣ್​, 'ಅವತಾರ ಪುರುಷ' ಚಿತ್ರದಲ್ಲಿನ ತಮ್ಮ ಕೆಲಸ ಮುಗಿಸಿದ್ದು, ಆ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net