ಹೊಸ ಅವತಾರದಲ್ಲಿ ದುನಿಯಾ ಯೋಗಿ

Yogi
Published on

ಬೆಂಗಳೂರು: ‘ಡೇಟ್ ಹೇಳು, ಬರ್ತೀನಿ ಹೋಗು ...’- ಹಾಗಂತ ಹೇಳಿ ಕಳುಹಿಸಿದ್ದಾರಂತೆ ಯೋಗಿ. ಹಿರಿಯ ನಿರ್ದೇಶಕ ಎಸ್. ನಾರಾಯಣ್ ಅವರ ಎರಡನೆಯ ಮಗ ಪವನ್, ‘ನವಮಿ 9.9.1999’ ಎಂಬ ಹಾರರ್ ಚಿತ್ರದ ಮೂಲಕ ನಿರ್ದೇಶಕರಾಗುತ್ತಿರುವುದು ಗೊತ್ತಿರಬಹುದು. ಈಗ ಆ ಚಿತ್ರದಲ್ಲಿ ‘ಲೂಸ್ ಮಾದ’ ಖ್ಯಾತಿಯ ಯೋಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಚಿತ್ರದಲ್ಲಿ ಯೋಗಿ ಅವರ ಪಾತ್ರವೇನು ಎಂದು ಪವನ್ ಹೇಳದಿದ್ದರೂ, ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲು ಮರೆಯುವುದಿಲ್ಲ.

ಅಷ್ಟೇ ಅಲ್ಲ, ಇದುವರೆಗೂ ಯಾವ ಚಿತ್ರದಲ್ಲೂ ಮಾಡದ ಒಂದು ಪಾತ್ರವನ್ನು ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಈ ಹಿಂದೆ ‘ಜೀರೋ ಪರ್ಸೆಂಟ್ ಲವ್’ ಹಾಗೂ ‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರಗಳಲ್ಲಿ ನಟಿಸಿರುವ ಯಶಸ್, ಈ ಚಿತ್ರದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ನಂದಿನಿ ಗೌಡ ನಾಯಕಿಯಾಗಿದ್ದು, ಮಿಕ್ಕಂತೆ ಎಸ್. ನಾರಾಯಣ್, ಹುಚ್ಚ ವೆಂಕಟ್ ಮುಂತಾದವರು ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net