Shubha Laabha - ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡಿದ ಡಾ. ವಿ. ನಾಗೇಂದ್ರ ಪ್ರಸಾದ್ ಪುತ್ರ ಉತ್ಸವ್​

ಸಾಹಿತ್ಯ, ಸಂಗೀತ ನಿರ್ದೇಶನ, ನಟನೆ, ನಿರ್ದೇಶನ... ಹೀಗೆ ಸಿನಿಮಾದ ಹಲವು ವಿಭಾಗಗಳಲ್ಲಿ ಗುರುತಿಸಿಕೊಂಡಿರುವ ಚಿತ್ರಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್​, ಇದೀಗ ತಮ್ಮ ಪುತ್ರ ಉತ್ಸವ್​ ಪ್ರಸಾದ್​ರನ್ನು ಚಿತ್ರರಂಗಕ್ಕೆ ನಾಯಕನನ್ನಾಗಿ ಪರಿಚಯಿಸುತ್ತಿದ್ದಾರೆ. ವಿಜಯ ದಶಮಿ ಹಬ್ಬದ ಸಂಭ್ರಮದಲ್ಲಿ ಇತ್ತೀಚೆಗಷ್ಟೆ ಮುದ್ದಿನಪಾಳ್ಯದ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದ್ದು, "ಶುಭ ಲಾಭ' ಎಂದು ಶೀರ್ಷಿಕೆ ಇಡಲಾಗಿದೆ.
ಶುಭ ಲಾಭ ಚಿತ್ರದ ಮುಹೂರ್ತ
ಶುಭ ಲಾಭ ಚಿತ್ರದ ಮುಹೂರ್ತ
Published on: 

ಬೆಂಗಳೂರು: ಸಾಹಿತ್ಯ, ಸಂಗೀತ ನಿರ್ದೇಶನ, ನಟನೆ, ನಿರ್ದೇಶನ... ಹೀಗೆ ಸಿನಿಮಾದ ಹಲವು ವಿಭಾಗಗಳಲ್ಲಿ ಗುರುತಿಸಿಕೊಂಡಿರುವ ಚಿತ್ರಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್​, ಇದೀಗ ತಮ್ಮ ಪುತ್ರ ಉತ್ಸವ್​ ಪ್ರಸಾದ್​ರನ್ನು ಚಿತ್ರರಂಗಕ್ಕೆ ನಾಯಕನನ್ನಾಗಿ ಪರಿಚಯಿಸುತ್ತಿದ್ದಾರೆ. ವಿಜಯ ದಶಮಿ ಹಬ್ಬದ ಸಂಭ್ರಮದಲ್ಲಿ ಇತ್ತೀಚೆಗಷ್ಟೆ ಮುದ್ದಿನಪಾಳ್ಯದ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದ್ದು, "ಶುಭ ಲಾಭ' ಎಂದು ಶೀರ್ಷಿಕೆ ಇಡಲಾಗಿದೆ. ವಿಶೇಷ ಅಂದರೆ ಈ ಚಿತ್ರವನ್ನು ಖುದ್ದು ನಾಗೇಂದ್ರ ಪ್ರಸಾದ್​ ಅವರೇ ನಿರ್ದೇಶಿಸಲಿದ್ದಾರೆ. ಸಿನಿಮಾ ಮುಹೂರ್ತಕ್ಕೆ ಆಗಮಿಸಿದ ನಟ "ನೆನಪಿರಲಿ' ಪ್ರೇಮ್​ ಆರಂಭ ಲಕ ಕ್ಲ್ಯಾಪ್​ ಮಾಡಿದರೆ, ಹಿರಿಯ ನಿರ್ದೇಶಕ ಎಸ್​. ಮಹೇಂದ್ರ ಕ್ಯಾಮರಾಗೆ ಚಾಲನೆ ನೀಡಿ ತಂಡಕ್ಕೆ ಶುಭಹಾರೈಸಿದರು. ರಿಯಾ ಕಂಬೈನ್ಸ್​ ಬ್ಯಾನರ್​ನಲ್ಲಿ ಯಮುನಾ ಪ್ರಸಾದ್​ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ನಾಗೇಂದ್ರ ಪ್ರಸಾದ್​ ಸಹೋದರ ವಿಜಯಾನಂದ್​ ಸಂಭಾಷಣೆ ಬರೆಯಲಿದ್ದಾರೆ. ಚಿತ್ರದ ಬಗ್ಗೆ, ""ಶುಭ ಲಾಭ' ಉತ್ಸವ್​ ಮತ್ತು ದತ್ತಣ್ಣ ಎರಡು ಪಾತ್ರಗಳ ಜರ್ನಿಯ ಸುತ್ತ ಸಾಗುವ ಕಥೆ. ನಾನು ಕಥೆ ಬರೆದಾಗ, ಈ ಪಾತ್ರಕ್ಕೆ ಉತ್ಸವ್​ ಒಪ್ಪುತ್ತಾನೆ ಅಂತನ್ನಿಸಿ, ಆತನನ್ನು ಈ ಸಿನಿಮಾ ಮೂಲಕ ಪರಿಚಯಿಸಲು ನಿರ್ಧರಿಸಿದೆ. ಅವನೂ ಚಿತ್ರರಂಗಕ್ಕೆ ಬರಲು ಸಾಕಷ್ಟು ಸಿದ್ಧತೆ ನಡೆಸಿದ್ದಾನೆ. ಚೆನ್ನಾಗಿ ನಟಿಸುತ್ತಾನೆ' ಎನ್ನುತ್ತಾರೆ ಡಾ. ವಿ. ನಾಗೇಂದ್ರ ಪ್ರಸಾದ್​. ಉತ್ಸವ್​ ಜತೆಗೆ ಹಿರಿಯ ನಟ ದತ್ತಣ್ಣ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ವಿ. ಹರಿಕೃಷ್ಣ ಸಂಗೀತ, ಸುರೇಶ್​ ಅರಸು ಸಂಕಲನ, ಉಪ್ಪಿ ಛಾಯಾಗ್ರಹಣದಲ್ಲಿ "ಶುಭ ಲಾಭ' ಮೂಡಿಬರಲಿದೆ. ಬಿಜಾಪುರ, ಬದಾಮಿ, ಸಿಂಧಗಿ, ಬಾಗಲಕೋಟೆ ಸುತ್ತಮುತ್ತ ಶೂಟಿಂಗ್​ ನಡೆಸಲು ಚಿತ್ರತಂಡ ಪ್ಲ್ಯಾನ್​​ ಮಾಡಿಕೊಂಡಿದ್ದು, ಕೆಲವೇ ದಿನಗಳಲ್ಲಿ ಮೊದಲ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ.

ಉತ್ಸವ್​
ಉತ್ಸವ್​

ಮನೆಯಲ್ಲಿ ಸಿನಿಮಾ ವಾತಾವರಣ ಇರುವ ಕಾರಣ, ಉತ್ಸವ್​ಗೆ ಬಾಲ್ಯದಿಂದಲೂ ಚಿತ್ರರಂಗದ ಬಗ್ಗೆ ಒಲವಿತ್ತು. ಎಸ್​ಎಸ್​ಎಲ್​ಸಿ ಓದುತ್ತಿರುವಾಗಲೇ ಉತ್ಸವ್​ ನಟಿಸುವ ಬಗ್ಗೆ ಹೇಳಿಕೊಂಡಿದ್ದ. ಆದರೆ, ಶಿಕ್ಷಣ ಮುಗಿಯಲಿ ಎಂದಿದ್ದೆ. ಬಿಬಿಎಂ ಪದವಿ ಪಡೆದು ಈಗ ಎಂಬಿಎ ಓದುತ್ತಿದ್ದಾನೆ. ಜತೆಗೆ ಓದಿನ ಜತೆಗೆ ಚಾಮರಾಜ ಮಾಸ್ಟರ್​, ರುದ್ರ ಮಾಸ್ಟರ್​ ಬಳಿ ಡಾನ್ಸ್​, ಜಿಮ್ನಾಸ್ಟಿಕ್ಸ್​ ತರಬೇತಿ ಪಡೆದಿದ್ದಾನೆ.

- ಡಾ. ವಿ. ನಾಗೇಂದ್ರ ಪ್ರಸಾದ್​, ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net